IPL 2023: RCB 200 ರನ್​ ಬಾರಿಸಿದ್ರು ಗೆಲ್ಲಲ್ಲ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ..!

IPL 2023: ಟಿ20 ಕ್ರಿಕೆಟ್​ನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವು 200 ಕ್ಕೂ ಅಧಿಕ ರನ್​ ಕಲೆಹಾಕಿದರೆ ಅರ್ಧ ಪಂದ್ಯ ಗೆದ್ದಂತೆ...ಆದರೆ RCB ವಿಷಯದಲ್ಲಿ ಇದು ಅನ್ವಯಿಸುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ಫಲಿತಾಂಶ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಹಾಗೂ ಮ್ಯಾಕ್ಸ್​ವೆಲ್ ಅವರ ಅಬ್ಬರದೊಂದಿಗೆ RCB 212 ರನ್​ ಕಲೆಹಾಕಿತು. ಇತ್ತ ಬೃಹತ್ ಮೊತ್ತ ನೋಡಿ ಅಭಿಮಾನಿಗಳು ಗೆಲುವು ನಮ್ಮದೇ ಎಂಬ ವಿಶ್ವಾಸದಲ್ಲಿದ್ದರು. ಆದರೆ ಪಂದ್ಯ ಮುಗಿದಾಗ ಲಕ್ನೋ ಸೂಪರ್ ಜೈಂಟ್ಸ್​ 1 ವಿಕೆಟ್​ನಿಂದ ರೋಚಕ ಜಯ ಸಾಧಿಸಿ ಸಂಭ್ರಮಿಸುತ್ತಿದ್ದರು. ಇತ್ತ ಎಂದಿನಂತೆ ಆರ್​ಸಿಬಿ ಅಭಿಮಾನಿಗಳು ನಿರಾಸೆಯೊಂದಿಗೆ ಮರಳಿದ್ದರು. ಇಂತಹ ನಿರಾಸೆಯ ಫಲಿತಾಂಶ RCB ಪಾಲಿಗೆ ಇದು ಮೊದಲೇನಲ್ಲ. ಏಕೆಂದರೆ ಐಪಿಎಲ್​ ಇತಿಹಾಸದಲ್ಲೇ 200 ಅಧಿಕ ರನ್ ಬಾರಿಸಿ ಅತೀ ಹೆಚ್ಚು ಬಾರಿ ಸೋತಿರುವ ದಾಖಲೆ ಹೊಂದಿರುವುದೇ RCB ತಂಡ. ಹೀಗಾಗಿ RCB ಇನ್ನೂರಕ್ಕೂ ಅಧಿಕ ರನ್​ ಕಲೆಹಾಕಿದ ಮಾತ್ರಕ್ಕೆ ಗೆದ್ದೇ ಗೆಲ್ಲುತ್ತೆ ಎಂದೇಳಲಾಗುವುದಿಲ್ಲ. ಇದಕ್ಕೆ ನಿದರ್ಶನವೇ ಈ ಅಂಕಿ ಅಂಶಗಳು...RCB ತಂಡವು ಐಪಿಎಲ್​ನಲ್ಲಿ 5 ಬಾರಿ 200ಕ್ಕೂ ಅಧಿಕ ರನ್​ ಕಲೆಹಾಕಿ ಸೋಲನುಭವಿಸಿದೆ. ಅಂದರೆ ಆರ್​ಸಿಬಿ ಬೌಲರ್​ಗಳನ್ನು ಬೆಂಡೆತ್ತಿ ಎದುರಾಳಿ ತಂಡಗಳು ಬೃಹತ್ ಮೊತ್ತವನ್ನು ಚೇಸ್ ಮಾಡಿ ಗೆದ್ದಿದೆ. ಇದು ಐಪಿಎಲ್​ ಇತಿಹಾಸದ ದಾಖಲೆ ಎಂಬುದೇ ವಿಶೇಷ. ಅಂದರೆ ಐಪಿಎಲ್​ನಲ್ಲಿ 200 ಕ್ಕೂ ಅಧಿಕ ರನ್​ ಕಲೆಹಾಕಿ ಅತೀ ಹೆಚ್ಚು ಬಾರಿ ಚೇಸಿಂಗ್​ನಲ್ಲಿ ಸೋತ ತಂಡ RCB.200+ ರನ್​ಗಳಿಸಿ ಅತೀ ಹೆಚ್ಚು ಬಾರಿಸಿ ಪರಾಜಯಗೊಂಡ ತಂಡಗಳ ಪಟ್ಟಿಯಲ್ಲಿ RCB (5 ಬಾರಿ) ಅಗ್ರಸ್ಥಾನದಲ್ಲಿದ್ದರೆ, ಸಿಎಸ್​ಕೆ ತಂಡವು (3 ಬಾರಿ) ದ್ವಿತೀಯ ಸ್ಥಾನದಲ್ಲಿದೆ. ಇನ್ನು ಪಂಜಾಬ್ ಕಿಂಗ್ಸ್ ಹಾಗೂ ಕೆಕೆಆರ್ ತಲಾ 2 ಬಾರಿ 200 ಕ್ಕೂ ಅಧಿಕ ರನ್​ ಕಲೆಹಾಕಿದರೂ ಪಂದ್ಯ ಸೋತಿದೆ.ಐಪಿಎಲ್ ಇತಿಹಾಸದ ಅಂಕಿ ಅಂಶಗಳ ಪ್ರಕಾರವೇ ನೋಡುವುದಾದರೆ, RCB ತಂಡವು 200 ಕ್ಕೂ ಅಧಿಕ ರನ್ ಬಾರಿಸಿದರೂ ಗೆಲುವು ನಮ್ಮದೇ ಎನ್ನುವಂತಿಲ್ಲ. ಪಂದ್ಯದ ಕೊನೆಯ ಬಾಲ್​ ತನಕ ಕಾಯಲೇಬೇಕು. ಇಲ್ಲದಿದ್ದರೆ ಫಲಿತಾಂಶ ಏನು ಬೇಕಾದ್ರೂ ಆಗಬಹುದು...ಇದಕ್ಕೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯವೇ ತಾಜಾ ಉದಾಹರಣೆ.

source https://tv9kannada.com/photo-gallery/cricket-photos/ipl-2023-rcb-conceded-most-200-runs-in-run-chase-kannada-news-zp-au50-554673.html

Leave a Reply

Your email address will not be published. Required fields are marked *