IPL 2023: ರಾಜಸ್ಥಾನ್ ರಾಯಲ್ಸ್​ನ ಹಿಂದಿಕ್ಕಿದ RCB: ಹೀಗಿದೆ ಪ್ಲೇಆಫ್ ಲೆಕ್ಕಾಚಾರ

IPL 2023: ಐಪಿಎಲ್​ನ 60ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್​ಸಿಬಿ 112 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವು ಅಮೋಘ ಗೆಲುವಿನೊಂದಿಗೆ ಆರ್​ಸಿಬಿ ತಂಡದ ನೆಟ್​ ರನ್​ ರೇಟ್ ಪ್ಲಸ್​ನತ್ತ ತಿರುಗಿದೆ.ಈ ಪಂದ್ಯದ ಆರಂಭಕ್ಕೂ ಮುನ್ನ -0.345 ನೆಟ್ ರನ್ ರೇಟ್ ಹೊಂದಿದ್ದ ಆರ್​ಸಿಬಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದರೂ 5ನೇ ಸ್ಥಾನಕ್ಕೇರುವುದು ಅನುಮಾನ ಎನ್ನಲಾಗಿತ್ತು. ಆದರೀಗ ಬರೋಬ್ಬರಿ 112 ರನ್​ಗಳ ಭರ್ಜರಿ ಜಯದೊಂದಿಗೆ ಎಲ್ಲಾ ಲೆಕ್ಕಾಚಾರಗಳನ್ನು ಆರ್​ಸಿಬಿ ತಲೆಕೆಳಗಾಗಿಸಿದೆ.ರಾಜಸ್ಥಾನ್ ರಾಯಲ್ಸ್ ತಂಡವನ್ನು ಕೇವಲ 59 ರನ್​ಗಳಿಗೆ ಆಲೌಟ್ ಮಾಡಿರುವ ಆರ್​ಸಿಬಿ ಇದೀಗ +0.166 ನೆಟ್​ ರನ್​ ರೇಟ್ ಪಡೆದುಕೊಂಡಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ (+0.140) ತಂಡವನ್ನು ಹಿಂದಿಕ್ಕಿ ಅಂಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.ಇನ್ನು ಆರ್​ಸಿಬಿ ಮುಂದಿರುವುದು ಕೇವಲ 2 ಪಂದ್ಯಗಳು ಮಾತ್ರ. ಈ ಎರಡು ಪಂದ್ಯಗಳಲ್ಲಿ ಆರ್​ಸಿಬಿ ಭರ್ಜರಿ ಜಯ ಸಾಧಿಸಿದರೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಸಿಗಬಹುದು. ಆದರೆ ಅದಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ಒಂದು ಪಂದ್ಯ ಸೋಲಬೇಕು.ಏಕೆಂದರೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ 14 ಅಂಕಗಳನ್ನು ಹೊಂದಿದೆ. ರೋಹಿತ್ ಶರ್ಮಾ ಪಡೆಗೆ ಇನ್ನು 2 ಪಂದ್ಯಗಳು ಬಾಕಿಯಿದ್ದು, ಇದರಲ್ಲಿ ಜಯ ಸಾಧಿಸಿದರೆ ಆರ್​ಸಿಬಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ.ಅಂದರೆ ಮುಂಬೈ ಇಂಡಿಯನ್ಸ್​ ಮುಂದಿನ 2 ಪಂದ್ಯಗಳನ್ನು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಎಸ್​ಆರ್​ಹೆಚ್​ ವಿರುದ್ಧ ಆಡಲಿದೆ. ಪ್ರಸ್ತುತ 13 ಪಾಯಿಂಟ್ಸ್ ಹೊಂದಿರುವ ಲಕ್ನೋ ಸೂಪರ್ ಜೈಂಟ್ಸ್ ಮುಂದಿನ ಪಂದ್ಯದಲ್ಲಿ ಸೋತು, ಕೊನೆಯ ಪಂದ್ಯದಲ್ಲಿ ಗೆದ್ದರೆ ಒಟ್ಟು 15 ಪಾಯಿಂಟ್ಸ್ ಆಗಲಿದೆ.ಇತ್ತ ಆರ್​ಸಿಬಿ ತಂಡವು ಮುಂದಿನ 2 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದರೆ 16 ಪಾಯಿಂಟ್ಸ್​ ಪಡೆಯಲಿದೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಹಿಂದಿಕ್ಕಿ, 4ನೇ ಸ್ಥಾನಕ್ಕೇರುವ ಮೂಲಕ ಪ್ಲೇಆಫ್ ಪ್ರವೇಶಿಸಬಹುದು. ಹೀಗಾಗಿ ಆರ್​ಸಿಬಿ ಪಾಲಿಗೆ ಮುಂದಿನ 2 ಪಂದ್ಯಗಳು ಮಾಡು ಇಲ್ಲವೇ ಮಡಿ ಪಂದ್ಯ.

source https://tv9kannada.com/photo-gallery/cricket-photos/ipl-2023-rcb-playoff-chances-after-won-kannada-news-zp-578692.html

Leave a Reply

Your email address will not be published. Required fields are marked *