IPL 2023 RCB Playing XI: RCB ಆಡುವ ಬಳಗದಲ್ಲಿ 2 ಬದಲಾವಣೆ ಸಾಧ್ಯತೆ..!

IPL 2023 RCB vs PBKS: ಐಪಿಎಲ್​ನ 27ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಮೊಹಾಲಿಯಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಆರ್​ಸಿಬಿ ತಂಡ ತನ್ನ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ.ಏಕೆಂದರೆ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ತಂಡದ ಅಗ್ರ ಕ್ರಮಾಂಕದ ಬ್ಯಾಟರ್​ಗಳು ಉತ್ತಮ ಪ್ರದರ್ಶನ ನೀಡಿದರೂ ಮಧ್ಯಮ ಕ್ರಮಾಂಕದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಹಾಗೆಯೇ ಸಿರಾಜ್ ಅವರನ್ನು ಹೊರತುಪಡಿಸಿದರೆ ಬೌಲರ್​ಗಳು ಕೂಡ ಸಂಪೂರ್ಣ ವಿಫಲರಾಗಿದ್ದರು. ಹೀಗಾಗಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಲು ಮುಂದಾಗಬಹುದು.ಅದರಂತೆ ವೇಯ್ನ್ ಪಾರ್ನೆಲ್ ಬದಲು ಜೋಶ್ ಹ್ಯಾಝಲ್​ವುಡ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಅವರು ಫಿಟ್​ನೆಸ್ ಸಮಸ್ಯೆ ಹೊಂದಿದ್ದರೆ ಡೇವಿಡ್ ವಿಲ್ಲಿಗೆ ಅವಕಾಶ ಸಿಗಬಹುದು. ಇನ್ನು ಮಹಿಪಾಲ್ ಲೋಮ್ರರ್​ರನ್ನು ಕೈಬಿಟ್ಟು ಸುಯಶ್ ಪ್ರಭುದೇಸಾಯಿಗೆ ಆಡುವ ಬಳಗದಲ್ಲಿ ಚಾನ್ಸ್ ನೀಡುವ ಸಾಧ್ಯತೆಯಿದೆ. ಅಲ್ಲದೆ ಇಂಪ್ಯಾಕ್ಟ್ ಸಬ್ ಆಯ್ಕೆ ಮೂಲಕ ಹೊಸ ಆಟಗಾರನನ್ನು ಕಣಕ್ಕಿಳಿಸಿ ಪ್ರಯೋಗ ನಡೆಸಬಹುದು. ಅದರಂತೆ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ.
1- ಫಾಫ್ ಡುಪ್ಲೆಸಿಸ್ (ನಾಯಕ)2- ವಿರಾಟ್ ಕೊಹ್ಲಿ3- ಸುಯಶ್ ಪ್ರಭುದೇಸಾಯಿ4- ಗ್ಲೆನ್ ಮ್ಯಾಕ್ಸ್​ವೆಲ್ (ಆಲ್​ರೌಂಡರ್)5- ಶಹಬಾಝ್ ಅಹ್ಮದ್6- ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)7- ವನಿಂದು ಹಸರಂಗ8- ವೈಶಾಕ್ ವಿಜಯಕುಮಾರ್9- ಹರ್ಷಲ್ ಪಟೇಲ್10- ಮೊಹಮ್ಮದ್ ಸಿರಾಜ್11- ಜೋಶ್ ಹ್ಯಾಝಲ್​ವುಡ್RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಖ್ ವಿಜಯಕುಮಾರ್.

source https://tv9kannada.com/photo-gallery/cricket-photos/ipl-2023-rcb-playing-xi-vs-pbks-pbks-vs-rcb-playing-11-kannada-news-zp-au50-559505.html

Leave a Reply

Your email address will not be published. Required fields are marked *