IPL 2024: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಯನ್ನ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ಪಡೆ ಗೆದ್ದು ಬೀಗಿದೆ. ಫೈನಲ್ನಲ್ಲಿ ಹೈದರಾಬಾದ್ ನೀಡಿದ್ದ 114 ರನ್ಗಳ ಗುರಿಯನ್ನ 10.3 ಓವರ್ಗಳಲ್ಲಿ ಬೆನ್ನಟ್ಟಿ 3ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.
![](https://samagrasuddi.co.in/wp-content/uploads/2024/05/image-262-1024x633.png)
ಆದರೆ ಟೂರ್ನಿಯಲ್ಲಿ ಕೆಕೆಆರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಫೈನಲಿಸ್ಟ್ಗಳಾದರೂ ಆರೇಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಬೇರೆ ತಂಡಗಳ ಪಾಲಾಗಿವೆ. ಆರ್ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಪಡೆದರೆ, ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ಪಡೆದಿದ್ದಾರೆ.
ಹಾಗಿದ್ದರೆ ಯಾವೆಲ್ಲಾ ತಂಡದ ಆಟಗಾರರಿಗೆ ಈ ವರ್ಷ ಐಪಿಎಲ್ 17ನೇ ಸೀಸನ್‌ನ ಯಾವೆಲ್ಲಾ ಪ್ರಶಸ್ತಿಗಳು ದೊರಕಿದೆ ಹಾಗೂ ಯಾವ ಆಟಗಾರನಿಗೆ ಎಷ್ಟು ಮೊತ್ತದ ಬಹುಮಾನ ಸಿಕ್ಕಿದೆ ಎಂಬ ಸಂಪೂರ್ಣ ವಿವರ ನೋಡೋಣ ಬನ್ನಿ. ಈ ವರ್ಷ ನೀಡಲಾದ ಐಪಿಎಲ್ ಪ್ರಶಸ್ತಿ ಹಾಗೂ ಬಹುಮಾನದ ಮೊತ್ತದ ಸಂಪೂರ್ಣ ವಿವರ ಇಲ್ಲಿದೆ.
![](https://images.news18.com/kannada/uploads/2024/05/1716716143_kkr-vs-srh-ipl-final-5-2024-05-0eeeb7fd72ce6bc806e33851e84206f1.jpg)
ಐಪಿಎಲ್ ಟ್ರೋಫಿ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಟ್ರೋಫಿ ಜೊತೆಗೆ ಬರೋಬ್ಬರಿ 20 ಕೋಟಿ ಬಹುಮಾನದ ಮೊತ್ತ ಸಿಕ್ಕಿದೆ. ಬಳಿಕ ರನ್ನರ್ ಅಫ್ ತಂಡ ಸನ್ ರೈಸರ್ಸ್ ಹೈದರಾಬಾದ್‌ಗೆ 12.5 ಕೋಟಿ ಸಿಕ್ಕಿದೆ. ಉಳಿದಂದತೆ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಕೋಟಿ ಕೋಟಿ ಹಣ ಬಹುಮಾನವಾಗಿ ಸಿಕ್ಕಿದೆ.
![](https://images.news18.com/kannada/uploads/2024/05/GOhsl4SXwAA-xx7-2024-05-583a39af3295652d0b18c4c4b4b055ba.jpg)
ಉಳಿಂದತೆ ಯಾರಿಗೆಲ್ಲಾ ಯಾವ ಪ್ರಶಸ್ತಿ ಸಿಕ್ಕಿದೆ ಎಂದು ನೋಡುವುದಾದರೆ, ಋತುವಿನ ಉದಯೋನ್ಮುಖ ಆಟಗಾರ – ನಿತೀಶ್ ಕುಮಾರ್ ರೆಡ್ಡಿ (SRH) 10 ಲಕ್ಷ, ಅಲ್ಟಿಮೇಟ್ ಫ್ಯಾಂಟಸಿ ಪ್ಲೇಯರ್ ಆಫ್ ದಿ ಸೀಸನ್ – ಸುನಿಲ್ ನರೈನ್ (KKR) 10 ಲಕ್ಷ, ಅತ್ಯಂತ ಮೌಲ್ಯಯುತ ಆಟಗಾರ – ಸುನಿಲ್ ನರೈನ್ (KKR) 10 ಲಕ್ಷ, ಆರೆಂಜ್ ಕ್ಯಾಪ್ – ವಿರಾಟ್ ಕೊಹ್ಲಿ (RCB) 10 ಲಕ್ಷ.
![](https://images.news18.com/kannada/uploads/2024/05/GOhqADxW4AAns-u-2024-05-de209ead381e87c0299bc2aad512775f.jpg)
ಪರ್ಪಲ್ ಕ್ಯಾಪ್ – ಹರ್ಷಲ್ ಪಟೇಲ್ (PBKS) 10 ಲಕ್ಷ, ಅತಿ ಹೆಚ್ಚು ಸಿಕ್ಸ್‌ಗಳ ಪ್ರಶಸ್ತಿ – ಅಭಿಷೇಕ್ ಶರ್ಮಾ (SRH) 10 ಲಕ್ಷ, ಅತಿ ಹೆಚ್ಚು ಫೋರ್ ಪ್ರಶಸ್ತಿ – ಟ್ರಾವಿಸ್ ಹೆಡ್ (SRH) 10 ಲಕ್ಷ, ಅತ್ಯುತ್ತಮ ಸ್ಟ್ರೈಕ್ ರೇಟ್ ಪ್ರಶಸ್ತಿ – ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ (DC) 10 ಲಕ್ಷ ಮತ್ತು ಟಾಟಾ ಪಂಚ್ ಇವಿ ಕಾರ್ ಪ್ರಶಸ್ತಿ ದೊರಕಿದೆ. ಕ್ಯಾಚ್ ಆಫ್ ದಿ ಸೀಸನ್ – ರಮಣದೀಪ್ ಸಿಂಗ್ (KKR) 10 ಲಕ್ಷ.
![](https://samagrasuddi.co.in/wp-content/uploads/2024/05/image-264-819x1024.png)
ಫೇರ್ ಪ್ಲೇ ಪ್ರಶಸ್ತಿ – ಸನ್‌ರೈಸರ್ಸ್ ಹೈದರಾಬಾದ್, 10 ಲಕ್ಷ, ಪಿಚ್ ಮತ್ತು ಗ್ರೌಂಡ್ ಅವಾರ್ಡ್ – ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್ 50 ಲಕ್ಷ ಬಹುಮಾನದ ಮೊತ್ತ ದೊರಕಿದೆ. IPL ಫೈನಲ್ ಪ್ರಶಸ್ತಿಗಳ ಪಟ್ಟಿ ನೋಡುವುದಾದರೆ ಪಂದ್ಯ ಶ್ರೇಷ್ಠ ಆಟಗಾರ – ಮಿಚೆಲ್ ಸ್ಟಾರ್ಕ್ 5 ಲಕ್ಷ, ಫೈನಲ್ ಪಂದ್ಯದ ಫ್ಯಾಂಟಸಿ ಆಟಗಾರ – ಮಿಚೆಲ್ ಸ್ಟಾರ್ಕ್ 1 ಲಕ್ಷ.
ಫೈನಲ್ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು – ವೆಂಕಟೇಶ್ ಅಯ್ಯರ್ 1 ಲಕ್ಷ, ಫೈನಲ್ ಪಂದ್ಯದಲ್ಲಿ ಹೆಚ್ಚಿನ ಬೌಂಡರಿಗಳು – ರಹಮಾನುಲ್ಲಾ ಗುರ್ಬಾಜ್ 1 ಲಕ್ಷ ಮತ್ತು ಕೊನೆಯದಾಗಿ ಫೈನಲ್ ಪಂದ್ಯದಲ್ಲಿ ಹೆಚ್ಚಿನ ಡಾಟ್ ಬಾಲ್‌ಗಳು – ಹರ್ಷಿತ್ ರಾಣಾಗೆ 1 ಲಕ್ಷ ರೂ ಸಿಕ್ಕಿದ್ದು, ಐಪಿಎಲ್ ಎಂಬ ರಂಗುರಂಗಿನ ಟೂರ್ನಿಗೆ ಅದ್ಧೂರಿ ತೆರೆಬಿದ್ದಿದೆ.