IPL 2024, RCB vs CSK: ಆರ್ಸಿಬಿ ತಂಡವು ನಿಗದಿತ 20 ಓವರ್ಗೆ 5 ವಿಕೆಟ್ ನಷ್ಟಕ್ಕೆ 218 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್ಗೆ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸುವ ಮೂಲಕ 27 ರನ್ ಗಳಿಂದ ಸೋಲನ್ನಪ್ಪಿತು. ಆ ಮೂಲಕ ಆರ್ಸಿಬಿ ಪ್ಲೇಆಫ್ ತಲುಪಿತು.

ಐಪಿಎಲ್ 2024ರ 17ನೇ ಸೀಸನ್ನ ಮಹತ್ವದ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ವಿರುದ್ಧ ನಡೆಯಿತು. ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದಾಗಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡವು ನಿಗದಿತ 20 ಓವರ್ಗೆ 5 ವಿಕೆಟ್ ನಷ್ಟಕ್ಕೆ 218 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್ಗೆ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸುವ ಮೂಲಕ 27 ರನ್ ಗಳಿಂದ ಸೋಲನ್ನಪ್ಪಿತು. ಆ ಮೂಲಕ ಆರ್ಸಿಬಿ ಪ್ಲೇಆಫ್ ತಲುಪಿತು.
ಮುಗ್ಗರಿಸಿದ ಚೆನ್ನೈ ಬ್ಯಾಟರ್ಸ್:
ಇನ್ನು, ಆರ್ಸಿಬಿ ನೀಡಿದ 219 ರನ್ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರಂಭದಿಂದಲೇ ಬೆಂಗಳೂರು ತಂಡದ ಬೌಲಿಂಗ್ ಎದುರು ತೆಣಕಾಡಲು ಆರಂಭಿಸಿತು. ಇದರ ಪರಿಣಾಮವಾಗಿ ಮೊದಲ ಓವರ್ನ ಮೊದಲ ಎಸೆತದಲ್ಲಿ ಚೆನ್ನೈ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಶೂನ್ಯಕ್ಕೆ ಔಟ್ ಆಗುವ ಮೂಲಕ ಆರಂಭದಲ್ಲಿಯೇ ಆಘಾತಕ್ಕೆ ಎದುರಾಯಿತು. ಬಳಿಕ ಡ್ಯಾರೆಲ್ ಮಿಚೆಲ್ 4 ರನ್ಗೆ ಔಟ್ ಆದರು. ಇನ್ನು, ರಚಿನ್ ರವೀಂದ್ರ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ರಚಿನ್ 37 ಎಸೆತದಲ್ಲಿ 3 ಸಿಕ್ಸ್ ಹಾಗೂ 5 ಫೋರ್ ಸಹಿತ 61 ರನ್ ಗಳಿಸಿದರು. ಇವರಿಗೆ ಅಜಿಂಕ್ಯಾ ರಹಾನೆ ಉತ್ತಮ ಸಾಥ್ ನೀಡದರೂ ಅದು ಕೆಲಕಾಲಕ್ಕೆ ಮಾತ್ರ ಸೀಮಿತವಾಯಿತು. ರಹಾನೆ 22 ಎಸೆತದಲ್ಲಿ 1 ಸಿಕ್ಸ್ ಹಾಗೂ 3 ಫೊರ್ ಮೂಲಕ 33 ರನ್ ಗಳಿಸಿ ಪೆವೆಲಿಯನ್ ಸೇರಿದರು. ಶಿವಂ ದುಬೆ 7 ರನ್, ಮಿಚೆಲ್ ಸ್ಯಾಟ್ನರ್ 3 ರನ್ ಗಳಿಸಿ ಔಟ್ ಆದರು. ಕೊನೆಯಲ್ಲಿ ಧೋನಿ 13 ಎಸೆತದಲ್ಲಿ 25 ರನ್ ಗಳಿಸಿದರೆ ರವೀಂದ್ರ ಜಡೇಜಾ.
ತವರಿನಲ್ಲಿ ಅಬ್ಬರಿಸಿದ ಆರ್ಸಿಬಿ ಬಾಯ್ಸ್:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರಂಭದಿಂದಲೇ ಅಬ್ಬರದಿಂದ ಬ್ಯಾಟಿಂಗ್ ಮಾಡಿತು. ಆದರೆ ಪವರ್ ಪ್ಲೇ ಸಮಯದಲ್ಲಿ ಮಳೆಯಿಂದ ಕೆಲ ಕಾಲ ಸ್ಥಗಿತಗೊಂಡಿತ್ತು. ಬಳಿಕ ಆರಂಭವಾದರೂ ಸಹ ಸಂಪೂರ್ಣ ಪಿಚ್ ನಿಧಾನವಾಯಿತು. ಆದರೂ ಸಹ ಆರ್ಸಿಬಿ ಬ್ಯಾಟರ್ಗಳು ಮಾತ್ರ ಚೆನ್ನೈ ಬೌಲರ್ಗಳ ಬೆಂಡೆತ್ತಿದರು. ಆರ್ಸಿಬಿ ಪರ ವಿರಾಟ್ ಕೊಹ್ಲಿ 29 ಎಸೆತದಲ್ಲಿ 4 ಸಿಕ್ಸ್ ಹಾಗೂ 3 ಫೋರ್ ಮೂಲಕ 47 ರನ್ ಸಿಡಿಸಿದರೆ, ನಾಯಕ ಫಾಫ್ ಡುಪ್ಲೇಸಿಸ್ 39 ಎಸೆತದಲ್ಲಿ 3 ಸಿಕ್ಸ್, 3 ಬೌಂಡರಿ ಸಹಿತ 54 ರನ್ ಗಳಿಸಿದರು.
ಬಳಿಕ ರಜತ್ ಪಾಟಿದಾರ್ 23 ಎಸೆತದಲ್ಲಿ 2 ಫೋರ್ 4 ಸಿಕ್ಸ್ ಮೂಲಕ 41 ರನ್, ಕ್ಯಾಮರೂನ್ ಗ್ರೀನ್ 17 ಎಸೆತದಲ್ಲಿ 3 ಸಿಕ್ಸ್ ಮತ್ತು 3 ಫೋರ್ ಮೂಲಕ 38 ರನ್, ದಿನೇಶ್ ಕಾರ್ತಿಕ್ 6 ಎಸೆತದಲ್ಲಿ 1 ಸಿಕ್ಸ್ ಮೂಲಕ 14 ರನ್, ಗ್ಲೇನ್ ಮ್ಯಾಕ್ಸ್ವೆಲ್ 5 ಎಸೆತದಲ್ಲಿ 16 ರನ್ ಗಳಿಸುವ ಮೂಲಕ ತಂಡವು ಅಂತಿಮವಾಗಿ 218 ರನ್ ಗಳಿಸಿತು. ಅತ್ತ ಚೆನ್ನೈ ಸೂಪರ್ ಕಿಂಗ್ಸ್ ಪರ ತುಷಾರ್ ದೇಶಪಾಂಡೆ 1 ವಿಕೆಟ್, ಮಿಚೆಲ್ ಸ್ಯಾಟ್ನರ್ 1 ವಿಕೆಟ್ ಹಾಗೂ ಶಾರ್ದೂಲ್ ಠಾಕೂರ್ 2 ವಿಕೆಟ್ ಪಡೆದು ಮಿಂಚಿದರು.
Views: 2