IPL 2024, SRH vs RR: ರಾಜಸ್ಥಾನ್ ರಾಯಲ್ಸ್ ತಂಡವು ನಿಗಿದತ 20 ಓವರ್ಗೆ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸುವ ಮೂಲಕ 4 ವಿಕೆಟ್ ಗಳಿಂದ ಸೋಲನ್ನಪ್ಪಿತು. ಈ ಮೂಲಕ 1 ರನ್ಗಳ ರೋಚಕ ಹೈದರಾಬಾದ್ ಗೆಲುವು ದಾಖಲಿಸಿತು.
ಐಪಿಎಲ್ 2024ರಲ್ಲಿ ಹೈದರಾಬಾದ್ನ ಉಪ್ಪಲ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ (SRH vs RR) ವಿರುದ್ಧ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಹೈದರಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಈ ಮೂಲಕ ತವರು ಮೈದಾನದಲ್ಲಿ ಬೃಹತ್ ಮೊತ್ತ ಕಲೆಹಾಕು ಗುರಿ ಹೊಂದಿದ್ದರು. ಆದರೆ ಅದೆಕೋ ಕಳೆದೆರಡು ಪಂದ್ಯದಿಂದ ಎಸ್ಆರ್ಎಚ್ ಬ್ಯಾಟಿಂಗ್ ಆರಂಭದ ಹೊಳಪಿನಲ್ಲಿಲ್ಲ. ಅಂತಿಮವಾಗಿ ರಾಜಸ್ಥಾನ ತಂಡದ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ನಿಗದಿತ 20 ಓವರ್ಗೆ 3 ವಿಕೆಟ್ ನಷ್ಟಕ್ಕೆ 201 ರನ್ ಪೇರಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗಿದತ 20 ಓವರ್ಗೆ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸುವ ಮೂಲಕ 4 ವಿಕೆಟ್ ಗಳಿಂದ ಸೋಲನ್ನಪ್ಪಿತು. ಈ ಮೂಲಕ 1 ರನ್ಗಳ ರೋಚಕ ಹೈದರಾಬಾದ್ ಗೆಲುವು ದಾಖಲಿಸಿತು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವಿನ ಓಟಕ್ಕೆ SRH ಬ್ರೇಕ್ ಹಾಕಿದೆ.
ಪರಾಗ್ – ಯಶಸ್ವಿ ಸೂಪರ್ ಬ್ಯಾಟಿಂಗ್:
ಇನ್ನು, ಹೈದರಾಬಾದ್ ನೀಡಿದ 201 ರನ್ ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆರಂಭದಲ್ಲಿಯೇ ಆಘಾತ ಎದುರಾಯಿತು. ಮೊದಲ ಓವರ್ ನಲ್ಲಿಯೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೇವಲ 1 ರನ್ಗೆ 2 ವಿಕೆಟ್ ಕಳೆದುಕೊಂಡ ರಾಜಸ್ಥಾನ್ ತಂಡಕ್ಕೆ ಯಶಸ್ವಿ ಜೈಸ್ವಾಲ್ ಮತ್ತು ರಿಯಾನ್ ಪರಾಗ್ ಈ ಜೋಡಿ ಮುರಿಯದ 134 ರನ್ ಜೊತೆಯಾಟವಾಡಿದರು. ಇದು ತಂಡದ ಗೆಲುವಿಗೆ ಪ್ರಮುಖ ಕಾರಣ ಎಂದರೂ ತಪ್ಪಾಗಲಾರದು. ಈ ವೇಳೆ ಯಶಸ್ವಿ ಜೈಸ್ವಾಲ್ 40 ಎಸೆತದಲ್ಲಿ 2 ಸಿಕ್ಸ್ ಮತ್ತು 7 ಫೋರ್ ಮೂಲಕ 67 ರೆನ್ ಸಿಡಿಸಿದರು. ಆದರೆ ಜೋಸ್ ಬಟ್ಲರ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಇಬ್ಬರೂ ಸಹ ಶೂನ್ಯಕ್ಕೆ ಫೆವೆಲಿಯನ್ ಸೇರಿದರು. ರಿಯಾನ್ ಪರಾಗ್ 49 ಎಸೆತದಲ್ಲಿ 4 ಸಿಕ್ಸ್ ಮತ್ತು 8 ಫೋರ್ ಮೂಲಕ 77 ರನ್ ಗಳಿಸಿದರು. ಹಿಟ್ಮ್ಯಾಯರ್ 13 ರನ್ ಸಿಡಿಸಿದರು.
ಮತ್ತೆ ಅಬ್ಬರಿಸಿದ ಲೋಕಲ್ ಬಾಯ್:
ಟಾಸ್ ಗೆದ್ದು ಮೊದಲು ಬ್ಯಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್ಗೆ 3 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಎಂದಿನಂತೆ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಆರಂಭಿಕರಾಗಿ ಮೈದಾನಕ್ಕಿಳಿದರು. ಆದರೆ ಈ ಜೋಡಿ ಆರಂಭಿಕ ಪಂದ್ಯಗಳಂತೆ ಅಬ್ಬರಿಸಲು ಸಾಧ್ಯವಾಗಲಿಲ್ಲ. ಅಭಿಷೇಕ್ ಶರ್ಮಾ 10 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿ ಔಟಾದರು. ನಂತರ ಬಂದ ಅನ್ಮೋಲ್ಪ್ರೀತ್ ಸಿಂಗ್ 5 ರನ್ ಗಳಿಸಿ ಔಟಾದರು. ನಂತರ ಹೆಡ್ ಮತ್ತು ನಿತೀಶ್ ರೆಡ್ಡಿ ಜೋಡಿ ಉತ್ತಮವಾಗಿ ಆಟವಾಡುವ ಮೂಲಕ ಹೈದರಾಬಾದ್ ರನ್ ಹೆಚ್ಚಿಸಲು ಸಹಾಯಕರಾದರು.
ಇವರಿಬ್ಬರು 3ನೇ ವಿಕೆಟ್ಗೆ 96 ರನ್ಗಳ ಜೊತೆಯಾಟ ನೀಡಿದರು. ಹೆಡ್ 44 ಎಸೆತದಲ್ಲಿ 3 ಸಿಕ್ಸ್ ಮತ್ತು 6 ಫೋರ್ ಮೂಲಕ 58 ರನ್ ಗಳಿಸಿದ್ದಾಗ ಅವೇಶ್ ಖಾನ್ ಬೌಲಿಂಗ್ ನಲ್ಲಿ ಔಟಾದರು. ನಂತರ ನಿತೀಶ್ ರೆಡ್ಡಿ ಜತೆಗೂಡಿದ ಹೆರಿಕ್ ಕ್ಲಾಸೆನ್ ರನ್ ಸೇರಿಸಿದರು. ಕ್ಲಾಸನ್ 19 ಎಸೆತಗಳಲ್ಲಿ 3 ಸಿಕ್ಸರ್ಗಳೊಂದಿಗೆ 42 ರನ್ ಸೇರಿಸಿದರೆ, ನಿತೀಶ್ ರೆಡ್ಡಿ 42 ಎಸೆತಗಳಲ್ಲಿ 8 ಸಿಕ್ಸರ್ಗಳೊಂದಿಗೆ 76 ರನ್ ಗಳಿಸಿದರು. ಹೈದರಾಬಾದ್ ತಂಡ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1