IPL 2025 Schedule: ಐಪಿಎಲ್ ವೇಳಾಪಟ್ಟಿ ಇಂದು ಸಂಜೆ ಪ್ರಕಟ, ಎಷ್ಟು ಗಂಟೆಗೆ, ನೇರ ಪ್ರಸಾರ ಎಲ್ಲಿ ನೋಡುವುದು – ಇಲ್ಲಿದೆ ಆ ವಿವರ.

IPL 2025 schedule Live Streaming: ಬಹುನಿರೀಕ್ಷಿತ ಐಪಿಎಲ್‌ 2025 ವೇಳಾಪಟ್ಟಿಯನ್ನು ಕ್ರಿಕೆಟ್ ಪ್ರೇಮಿಗಳು ನಿರೀಕ್ಷಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಕೆಲವು ಪಂದ್ಯಗಳ ಕುರಿತಾದ ಸುದ್ದಿಗಳು ಬಹಿರಂಗವಾಗಿವೆ. ಆದರೆ ಅವು ಅಧಿಕೃತವಲ್ಲ. ಸದ್ಯದ ಮಾಹಿತಿ ಪ್ರಕಾರ, ಮೊದಲ ಪಂದ್ಯ ಮಾರ್ಚ್ 22 ರಂದು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ ಎಂದು ವರದಿಯಾಗಿತ್ತು.

ಇದರ ಬೆನ್ನಿಗೆ, ಮುಂಬೈ ಇಂಡಿಯನ್ಸ್ ವರ್ಸಸ್‌ ಚೆನ್ನೈ ಸೂಪರ್‌ ಕಿಂಗ್ಸ್ ನಡುವೆ ಮೊದಲ ಪಂದ್ಯ ಮಾರ್ಚ್ 31 ರಂದು ಮುಂಬಯಿಯಲ್ಲಿ ನಡೆಯಲಿದೆ ಎಂಬ ವರದಿ ಗಮನಸೆಳೆಯಿತು. ಈಗ ಎಲ್ಲ ಕುತೂಹಲಗಳಿಗೂ ತೆರೆ ಎಳೆಯುವಂತೆ ಐಪಿಎಲ್ 2025ರ ವೇಳಾಪಟ್ಟಿ ಇಂದು (ಫೆ 16) ಸಂಜೆ 5.30ಕ್ಕೆ ಪ್ರಕಟವಾಗಲಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ಹೇಳಿದೆ.

ಐಪಿಎಲ್ 2025ರ ವೇಳಾಪಟ್ಟಿ ಯಾವಾಗ ಪ್ರಕಟವಾಗಲಿದೆ?

ಐಪಿಎಲ್ 2025ರ ವೇಳಾಪಟ್ಟಿಯನ್ನು ಫೆಬ್ರವರಿ 16ರಂದು ಪ್ರಕಟಿಸಲಾಗುತ್ತದೆ ಎಂದು ಸ್ಟಾರ್ ಸ್ಪೋರ್ಟ್ಸ್ ತಿಳಿಸಿದೆ. ಭಾರತೀಯ ಕಾಲಮಾನ ಪ್ರಕಾರ ಸಂಜೆ 5.30ಕ್ಕೆ ಐಪಿಎಲ್ 2025ರ ವೇಳಾಪಟ್ಟಿ ಪ್ರಕಟವಾಗಲಿದೆ.

ಐಪಿಎಲ್ 2025ರ ವೇಳಾಪಟ್ಟಿ ಎಲ್ಲಿ ಪ್ರಕಟ: ಐಪಿಎಲ್ 2025 ರ ವೇಳಾಪಟ್ಟಿಯನ್ನು ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.

ಐಪಿಎಲ್ 2025 ವೇಳಾಪಟ್ಟಿ ಲೈವ್ ಸ್ಟ್ರೀಮಿಂಗ್ ಮತ್ತು ಟೆಲಿಕಾಸ್ಟ್ ವೀಕ್ಷಿಸುವುದು ಹೇಗೆ?: ಐಪಿಎಲ್ 2025 ವೇಳಾಪಟ್ಟಿಯನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ, ಟಿವಿಯಲ್ಲಿ, ನೀವು ಅದನ್ನು ಸ್ಟಾರ್‌ ಸ್ಪೋರ್ಟ್ಸ್‌ನ ವಿವಿಧ ನೆಟ್‌ವರ್ಕ್‌ ಮತ್ತು ಸ್ಪೋರ್ಟ್ಸ್ -18 ಒನ್‌ ಚಾನೆಲ್‌ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು.

Leave a Reply

Your email address will not be published. Required fields are marked *