
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಟೂರ್ನಿಯಲ್ಲಿ 68 ಪಂದ್ಯಗಳು ಮುಕ್ತಾಯಗೊಂಡಿದೆ. ಇಂದು ಎರಡು ಪಂದ್ಯಗಳು ನಡೆಯುವ ಮೂಲಕ ಲೀಗ್ ಹಂತದ ಪಂದ್ಯಗಳಿಗೆ ತೆರೆ ಬೀಳಲಿದೆ. ಅಂತಿಮ ಘಟ್ಟದತ್ತ ಟೂರ್ನಿ ಸಾಗುತ್ತಿದ್ದು ಈಗಾಗಲೇ ಜಿಟಿ, ಚೆನ್ನೈ, ಲಖನೌ ಮೂರು ತಂಡಗಳು ಪ್ಲೇ ಆಫ್ಗೇರಿದೆ. ಇನ್ನೊಂದು ಸ್ಥಾನಕ್ಕಾಗಿ ಆರ್ಸಿಬಿ (RCB), ಮುಂಬೈ, ರಾಜಸ್ಥಾನ್ ನಡುವೆ ಪೈಪೋಟಿಯಿದ್ದು, ಇಂದು ನಿರ್ಧಾರವಾಗಲಿದೆ. ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಕೆಕೆಆರ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡ ಟೂರ್ನಿಯಿಂದ ಹೊರಬಿದ್ದಾಗಿದೆ. ಸದ್ಯ ಐಪಿಎಲ್ 2023 ಪಾಯಿಂಟ್ಸ್ ಟೇಬಲ್ ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿಯಿದೆ ಎಂಬುದನ್ನು ನೋಡೋಣ.
- ಗುಜರಾತ್ ಟೈಟಾನ್ಸ್ ತಂಡ ಅಗ್ರಸ್ಥಾನದಲ್ಲಿದ್ದು ಪ್ಲೇ ಆಫ್ಗೆ ಕಾಲಿಟ್ಟ ಮೊದಲ ತಂಡವಾಗಿದೆ. ಆಡಿದ 13 ಪಂದ್ಯಗಳಲ್ಲಿ 9 ಗೆಲುವು, ನಾಲ್ಕು ಸೋಲುಂಡು +0.835 ರನ್ರೇಟ್ನೊಂದಿಗೆ 18 ಅಂಕ ಸಂಪಾದಿಸಿದೆ.
- ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡನೇ ಸ್ಥಾನದಲ್ಲಿದ್ದು ಪ್ಲೇ ಆಫ್ ಪ್ರವೇಶಿಸಿದೆ. ಆಡಿದ 14 ಪಂದ್ಯಗಳ ಪೈಕಿ ಎಂಟರಲ್ಲಿ ಗೆಲುವು ಐದರಲ್ಲಿ ಸೋಲು ಕಂಡು ಒಟ್ಟು 17 ಅಂಕ ಸಂಪಾದಿಸಿದೆ. +0.652 ರನ್ರೇಟ್ ಹೊಂದಿದೆ.
- ಲಖನೌ ಸೂಪರ್ ಜೇಂಟ್ಸ್ ತಂಡ ಮೂರನೇ ಸ್ಥಾನದಲ್ಲಿದ್ದು ಕ್ವಾಲಿಫೈ ಆಗಿದೆ. ಆಡಿದ 14 ಪಂದ್ಯಗಳಲ್ಲಿ ಎಂಟು ಗೆಲುವು, ಐದು ಸೋಲು ಕಂಡು 17 ಅಂಕ ಸಂಪಾದಿಸಿ +0.284 ರನ್ರೇಟ್ ಹೊಂದಿದೆ.
- ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ. ಆಡಿದ ಹದಿಮೂರು ಪಂದ್ಯಗಳ ಪೈಕಿ ಏಳರಲ್ಲಿ ಗೆಲುವು ಆರರಲ್ಲಿ ಸೋಲು ಕಂಡು 14 ಅಂಕ ಸಂಪಾದಿಸಿ +0.180 ರನ್ರೇಟ್ ಹೊಂದಿದೆ.
- ರಾಜಸ್ಥಾನ್ ರಾಯಲ್ಸ್ ತಂಡ ಪಾಯಿಂಟ್ ಟೇಬಲ್ನಲ್ಲಿ ಐದನೇ ಸ್ಥಾನದಲ್ಲಿದೆ. ಆಡಿದ 14 ಪಂದ್ಯಗಳಲ್ಲಿ ಏಳು ಗೆಲುವು, ಏಳು ಸೋಲುಂಡು +0.148ರನ್ರೇಟ್ನೊಂದಿಗೆ 14 ಅಂಕ ಸಂಪಾದಿಸಿದೆ.
- ಮುಂಬೈ ಇಂಡಿಯನ್ಸ್ ತಂಡ ಆರನೇ ಸ್ಥಾನದಲ್ಲಿದೆ. ಇವರು ಆಡಿದ 13 ಪಂದ್ಯದಲ್ಲಿ 6 ಸೋಲು, ಏಳು ಗೆಲುವು ಕಂಡು 14 ಅಂಕ ಸಂಪಾದಿಸಿ -0.128 ರನ್ರೇಟ್ ಹೊಂದಿದೆ.
- ಕೆಕೆಆರ್ ಪಾಯಿಂಟ್ ಟೇಬಲ್ನಲ್ಲಿ ಏಳನೇ ಸ್ಥಾನದಲ್ಲಿದ್ದು ಎಲಿಮಿನೇಟ್ ಆಗಿದೆ. ಆಡಿದ 14 ಪಂದ್ಯಗಳಲ್ಲಿ ಆರು ಗೆಲುವು, ಎಂಟು ಪಂದ್ಯಗಳಲ್ಲಿ ಸೋಲುಂಡು -0.239ರನ್ರೇಟ್ನೊಂದಿಗೆ 12 ಅಂಕ ಸಂಪಾದಿಸಿದೆ.
- ಪಂಜಾಬ್ ಕಿಂಗ್ಸ್ ಆಡಿದ 14 ಪಂದ್ಯಗಳಲ್ಲಿ ಎಂಟು ಸೋಲು- ಆರು ಜಯ ಕಂಡು 12 ಅಂಕ ಹೊಂದಿ -0.304ರನ್ರೇಟ್ನೊಂದಿಗೆ ಎಂಟನೇ ಸ್ಥಾನದಲ್ಲಿದ್ದು ಟೂರ್ನಿಯಿಂದ ಹೊರಬಿದ್ದಾಗಿದೆ.
- ಡೆಲ್ಲಿ ಕ್ಯಾಪಿಟಲ್ಸ್ ಕೂಡ ಟೂರ್ನಿಯಿಂದ ಔಟ್ ಆಗಿದೆ. ಆಡಿದ 14 ಪಂದ್ಯಗಳ ಪೈಕಿ ಐದರಲ್ಲಿ ಜಯ ಸಾಧಿಸಿ, ಒಂಬತ್ತರಲ್ಲಿ ಸೋಲುಂಡು 10 ಅಂಕ ಸಂಪಾದಿಸಿ -0.808 ರನ್ರೇಟ್ ಹೊಂದಿದೆ.
- ಸನ್ರೈಸರ್ಸ್ ಹೈದರಾಬಾದ್ ತಂಡ ಕೊನೆಯ ಸ್ಥಾನದಲ್ಲಿದೆ. ಆಡಿದ 13 ಪಂದ್ಯದಲ್ಲಿ 9 ಸೋಲು ನಾಲ್ಕರಲ್ಲಿ ಜಯ ಕಂಡು 8 ಅಂಕ ಸಂಪಾದಿಸಿ -0558 ರನ್ರೇಟ್ ಹೊಂದಿದೆ.
IPL 2023 Playoffs: ಪ್ಲೇಆಫ್ಗೆ LSG ಲಗ್ಗೆ: ಇನ್ನು RCB ಮತ್ತು MI ನಡುವೆ ಪೈಪೋಟಿ
ಆರೆಂಜ್ ಕ್ಯಾಪ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಇವರು ಆಡಿದ 13 ಪಂದ್ಯಗಳಲ್ಲಿ ಎಂಟು ಅರ್ಧಶತಕ ಸಿಡಿಸಿ ಒಟ್ಟು 702 ರನ್ ಗಳಿಸಿದ್ದಾರೆ. ರಾಜಸ್ಥಾನ್ ತಂಡದ ಯಶಸ್ವಿ ಜೈಸ್ವಾಲ್ ಆಡಿದ 14 ಪಂದ್ಯಗಳಲ್ಲಿ ಐದು ಅರ್ಧಶತಕ, 1 ಶತಕ ಸಿಡಿಸಿ ಒಟ್ಟು 625 ರನ್ ಕಲೆಹಾಕಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಸಿಎಸ್ಕೆ ತಂಡದ ಡೆವೋನ್ ಕಾನ್ವೆ ಮೂರನೇ ಸ್ಥಾನದಲ್ಲಿದ್ದು 14 ಪಂದ್ಯಗಳಿಂದ 585 ರನ್ ಗಳಿಸಿದ್ದಾರೆ.
ಪರ್ಪಲ್ ಕ್ಯಾಪ್:
ಗುಜರಾತ್ ಟೈಟಾನ್ಸ್ ತಂಡದ ಮೊಹಮ್ಮದ್ ಶಮಿ ಪರ್ಪಲ್ ಕ್ಯಾಪ್ ತೊಟ್ಟಿದ್ದಾರೆ. ಇವರು ಆಡಿದ 13 ಪಂದ್ಯಗಳಲ್ಲಿ 23 ವಿಕೆಟ್ ಪಡೆದುಕೊಂಡಿದ್ದಾರೆ. ಇದೇ ತಂಡದ ರಶೀದ್ ಖಾನ್ ಕೂಡ 13 ಪಂದ್ಯಗಳಲ್ಲಿ 23 ವಿಕೆಟ್ ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಲ್ 14 ಪಂದ್ಯಗಳಿಂದ 21 ವಿಕೆಟ್ ಪಡೆದು ತೃತೀಯ ಸ್ಥಾನದಲ್ಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ