ರಾಜ್ಯದ ಮತದಾರರಿಗೆ ಪ್ರಧಾನಿಯಿಂದ ಮನವಿ ಪತ್ರ : ಅದರಲ್ಲಿ ಅಂತದ್ದೇನಿದೆ..?

ನವದೆಹಲಿ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೇ ಶುರುವಾಗಿದೆ. ನಾಳೆ ಬೆಳಗ್ಗೆ 7 ಗಂಟೆಗೆ 224 ಮತಗಟ್ಟೆಗಳಲ್ಲಿಯೂ ಮತದಾನ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಸಾಕಷ್ಟು ಬಾರಿ ಬಂದು ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿ ಹೋಗಿದ್ದಾರೆ. ಈಗ ಮತದಾರರಿಗೆ ಪತ್ರದ ಮೂಲಕ ಮನವಿಯೊಂದನ್ನು ಮಾಡಿದ್ದಾರೆ.

“ಕರ್ನಾಟಕದ ನನ್ನ ಸಹೋದರ ಸಹೋದರಿಯರೇ ನಮಸ್ಕಾರ. ಕರ್ನಾಟಕದ ಸಾಂಸ್ಕೃತಿಕ ಪರಂಪರೆಯು ಇಡೀ ದೇಶಕ್ಕೆ ಹಾಗೂ ನನಗೆ ವೈಯಕ್ತಿಕವಾಗಿ ಪ್ರೇರಣೆಯಾಗಿದೆ‌. ಜಗಜ್ಯೋತಿ ಬಸವೇಶ್ವರರು, ನಾಡಗೌಡ ಕೆಂಪೇಗೌಡರು, ಒನಕೆ ಓಬವ್ವ, ಕನಕದಾಸರಂತಹ ಮಹನೀಯರನ್ನು ನೀಡಿದ ದೇಶವಿದು. ಕರ್ನಾಟಕ ಜನರ ಕನಸು ನನ್ನ ಕನಸು, ನಿಮ್ಮ ಸಂಕಲ್ಪ ನನ್ನದೇ ಸಂಕಲ್ಪ.

ಇವೆಲ್ಲವನ್ನೂ ಸಾಕಾರಗೊಳಿಸಬೇಕು ಎಂದರೆ ಒಟ್ಟಾಗಿ ಕೈಜೋಡಿಸಬೇಕು. ಆಗ ಯಾವ ಶಕ್ತಿಯೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಕರ್ನಾಟಕದ ಉಜ್ವಲ ಭವಿಷ್ಯ, ಅದರಲ್ಲೂ ನಿಮ್ಮ ಕುಟುಂಬ ಮತ್ತು ಯುವಜನರಿಗಾಗಿ ಮನವಿ ಮಾಡುತ್ತಿದ್ದೇನೆ. ಜವಬ್ದಾರಿಯುತ ಮತದಾರಾದ ನೀವೂ ತಪ್ಪದೇ ಮೇ 10ರಂದು ಮತದಾನ ಮಾಡುವಂತೆ ಕೋರುತ್ತೇನೆ ಎಂದಿದ್ದಾರೆ.

The post ರಾಜ್ಯದ ಮತದಾರರಿಗೆ ಪ್ರಧಾನಿಯಿಂದ ಮನವಿ ಪತ್ರ : ಅದರಲ್ಲಿ ಅಂತದ್ದೇನಿದೆ..? first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/r1a0Zc3
via IFTTT

Leave a Reply

Your email address will not be published. Required fields are marked *