ಸರ್ಕಾರಿ ನೌಕರರ ವೇತನ ಹೆಚ್ಚಳ ! ಇಂದೇ ಹೊರ ಬೀಳುವುದು ನಿರ್ಧಾರ

AICPI ಸೂಚ್ಯಂಕಗಳ ಸಂಖ್ಯೆಗಳ ಆಧಾರದ ಮೇಲೆ ಮುಂದಿನ ತುಟ್ಟಿಭತ್ಯೆಯನ್ನು ನಿರ್ಧರಿಸಲಾಗುತ್ತದೆ. ಇಂದು ಎಐಸಿಪಿಐ ಸೂಚ್ಯಂಕವನ್ನು ಕಾರ್ಮಿಕ ಸಚಿವಾಲಯ ಪ್ರಕಟಿಸಲಿದೆ. 

ಬೆಂಗಳೂರು : ಇಂದು ಒಂದು ಕೋಟಿಗೂ ಹೆಚ್ಚು ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ  ದೊಡ್ಡ ಸುದ್ದಿ ಸಿಗಲಿದೆ. ಇಂದು ಎಐಸಿಪಿಐ ಸೂಚ್ಯಂಕವನ್ನು ಕಾರ್ಮಿಕ ಸಚಿವಾಲಯ ಪ್ರಕಟಿಸಲಿದೆ. ಇದರ ಆಧಾರದ ಮೇಲೆ ಸರ್ಕಾರ ಡಿಎ ಹೆಚ್ಚಳವನ್ನು ನಿರ್ಧರಿಸುತ್ತದೆ. 2023 ರಲ್ಲಿ, ಸರ್ಕಾರವು ಎರಡನೇ ಬಾರಿಗೆ ಡಿಎ ಹೆಚ್ಚಳವನ್ನು ಘೋಷಿಸಲಿದೆ. 

ಪ್ರಸ್ತುತ ಶೇಕಡಾ 42 ದರದಲ್ಲಿ ಡಿಎ : 
ಇಂದು ಬರುವ AICPI ಸೂಚ್ಯಂಕಗಳ ಸಂಖ್ಯೆಗಳ ಆಧಾರದ ಮೇಲೆ ಮುಂದಿನ ತುಟ್ಟಿಭತ್ಯೆಯನ್ನು ನಿರ್ಧರಿಸಲಾಗುತ್ತದೆ. ಹೀಗೆ ಏರಿಕೆಯಾದ ತುಟ್ಟಿಭತ್ಯೆ ಸೆಪ್ಟೆಂಬರ್‌ನಲ್ಲಿ ಪಾವತಿಯಾಗುವ ನಿರೀಕ್ಷೆಯಿದೆ. ಪ್ರಸ್ತುತ ಕೇಂದ್ರ ನೌಕರರಿಗೆ ಶೇ.42ರಷ್ಟು ಡಿಎ ನೀಡಲಾಗುತ್ತಿದೆ. ಜುಲೈ 1ರಿಂದ ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಳವಾಗಿ ಶೇ.46ಕ್ಕೆ ಏರುವ ನಿರೀಕ್ಷೆಯಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಬಂದಿಲ್ಲ. ಎಷ್ಟು ತುಟ್ಟಿಭತ್ಯೆ ಹೆಚ್ಚಿಸಬೇಕು ಎಂಬುದು ಇಂದು ಸಂಜೆ ಖಚಿತವಾಗಲಿದೆ.

ಡಿಎ ಇಷ್ಟು ಹೆಚ್ಚಾಗಬಹುದು : 
ಜುಲೈ 1, 2023 ರಿಂದ ಕೇಂದ್ರ ನೌಕರರು ಎಷ್ಟು  ತುಟ್ಟಿಭತ್ಯೆಯನ್ನು ಪಡೆಯುತ್ತಾರೆ ಎಂಬುದರ ಕುರಿತು ಪರಿಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಜನವರಿಯಿಂದ ಮೇ ತಿಂಗಳವರೆಗಿನ ಅಂಕಿಅಂಶಗಳ ಆಧಾರದ ಮೇಲೆ ಡಿಎ ಶೇ.4ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಜೂನ್ ತಿಂಗಳ ಎಐಸಿಪಿಐ ಸೂಚ್ಯಂಕದ ಡೇಟಾ ಇಂದು ಬರಲಿದೆ. ಆದರೂ ಪ್ರಸ್ತುತ ಲಭ್ಯವಿರುವ ಶೇಕಡಾ 42 ರಷ್ಟು ಡಿಎ ಮುಂಬರುವ ಸಮಯದಲ್ಲಿ ಶೇಕಡಾ 46 ಕ್ಕೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇದನ್ನು ಜುಲೈ 1 ರಿಂದ ಕೇಂದ್ರ ನೌಕರರಿಗೆ ಬಾಕಿ ವೇತನದೊಂದಿಗೆ ಪಾವತಿಸಲಾಗುವುದು.

ಎಚ್‌ಆರ್‌ಎಯಲ್ಲಿ ಬಂಪರ್ ಜಂಪ್  : 
ಏಳನೇ ವೇತನ ಆಯೋಗದ ಅಡಿಯಲ್ಲಿ, ಡಿಎ ಹೆಚ್ಚಳದೊಂದಿಗೆ  ಎಚ್‌ಆರ್‌ಎ ಕೂಡಾ ಹೆಚ್ಚಳವಾಗಲಿದೆ.  ಆದರೆ ತುಟ್ಟಿಭತ್ಯೆ ಶೇಕಡಾ 50 ದಾಟಿದಾಗ ಎಚ್‌ಆರ್‌ಎ ಹೆಚ್ಚಳವಾಗುತ್ತದೆ. ಇನ್ನು ಆರು ತಿಂಗಳಲ್ಲಿ  ಹೆಚ್ಆರ್ ಎ ಹೆಚ್ಚಳವಾಗುವ ಸಾಧ್ಯತೆ ಇದೆ. ಪ್ರಸ್ತುತ, HRAಯನ್ನು  ನಗರಗಳ ವರ್ಗದ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದನ್ನು X, Y, Z ಎಂದು ಹೆಸರಿಸಲಾಗಿದೆ. ಎಕ್ಸ್ ನಗರದಲ್ಲಿ ವಾಸಿಸುವ ಕೇಂದ್ರ ಉದ್ಯೋಗಿ ಹೆಚ್ಚಿನ ಎಚ್‌ಆರ್‌ಎ ಪಡೆಯುತ್ತಾರೆ. Y ಮತ್ತು Z ನಗರದಲ್ಲಿ ವಾಸಿಸುವ ನೌಕರರು ಅವರಿಗಿಂತ ಕಡಿಮೆ HRA ಪಡೆಯುತ್ತಾರೆ. ನಗರದ 
ಪ್ರಕಾರ ಶೇ.27, ಶೇ.18 ಮತ್ತು ಶೇ.9ರಷ್ಟು ಎಚ್‌ಆರ್‌ಎ ನೀಡಲಾಗುತ್ತದೆ. 

Source : https://zeenews.india.com/kannada/business/central-govt-salary-to-hike-decission-will-be-out-today-149192

Leave a Reply

Your email address will not be published. Required fields are marked *