ಚಳಿಗಾಲದಲ್ಲಿ ಕಿತ್ತಳೆ ಹಣ್ಣು ತಿನ್ನಬೇಕು ಎಂದು ಡಾಕ್ಟರ್ ಹೇಳುವುದು ಇದೇ ಕಾರಣಕ್ಕೆ!

ಚಳಿಗಾಲದ ಸಂದರ್ಭದಲ್ಲಿ ಯಾವ ಹಣ್ಣುಗಳನ್ನು ತಿನ್ನದೇ ಇದ್ದರೂ ಪರವಾಗಿಲ್ಲ. ಆದರೆ ಕಿತ್ತಳೆ ಹಣ್ಣು ತಿನ್ನಬೇಕು ಎಂದು ಡಾಕ್ಟರ್ ಹೇಳುವುದು ಇದೇ ಕಾರಣಕ್ಕೆ!

ಈಗ ಚಳಿಗಾಲ, ಮೈ ಕೊರೆಯುವ ಚಳಿ. ಇಂತಹ ಸಂದರ್ಭದಲ್ಲಿ ನಮ್ಮ ದೇಹದ ತಾಪಮಾನವನ್ನು ಕಾಪಾಡಿಕೊಳ್ಳುವುದು ನಮಗೆ ಬಹಳ ಮುಖ್ಯ. ತಂಪಾದ ಆಹಾರಗ ಳಿಂದ ಸಾಧ್ಯವಾದಷ್ಟು ದೂರವಿದ್ದರೆ ಒಳ್ಳೆಯದು. ಆದರೂ ಕೂಡ ಚಳಿಗಾಲದಲ್ಲಿ ಕಿತ್ತಳೆ ಹಣ್ಣು ಸೇವನೆಗೆ ಒಳ್ಳೆಯದು ಎಂದು ಹೇಳುತ್ತಾರೆ. ಏಕೆಂದರೆ ಕಿತ್ತಳೆ ಹಣ್ಣಿನಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಅದರಲ್ಲಿ ಅಂತಹ ಆರೋಗ್ಯಕರ ಗುಣಗಳು ಬೇಕಾದಷ್ಟು ಕಂಡುಬರುತ್ತವೆ. ಚಳಿಗಾಲದ ಸಂದರ್ಭದಲ್ಲಿ ಕಿತ್ತಳೆ ಹಣ್ಣು ತಿನ್ನುವುದರಿಂದ ಮತ್ತು ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಸಿಗಬಹುದಾದ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ.

ರೋಗ ನಿರೋಧಕ ವ್ಯವಸ್ಥೆಗೆ ಒಳ್ಳೆಯದು

ಕಿತ್ತಳೆ ಹಣ್ಣು ತನ್ನಲ್ಲಿ ವಿಟಮಿನ್ ಸಿ ಪ್ರಮಾಣವನ್ನು ಹೊಂದಿದ್ದು, ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಕೆಲಸ ಮಾಡುತ್ತದೆ. ಮುಖ್ಯವಾಗಿ ಇದು ನಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚು ಉತ್ಪತ್ತಿ ಮಾಡಿ ಸೋಂಕುಗಳು ಹಾಗೂ ಕಾಯಿಲೆಗಳ ವಿರುದ್ಧ ನಮ್ಮನ್ನು ರಕ್ಷಿಸುತ್ತದೆ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು

  • ಕಿತ್ತಳೆ ಹಣ್ಣು ತನ್ನಲ್ಲಿ ಪೋಟ್ಯಾಶಿಯಂ ಪ್ರಮಾಣವನ್ನು ಹೆಚ್ಚಾಗಿ ಒಳಗೊಂಡಿರುವುದರಿಂದ ಹೃದಯದ ಆರೋಗ್ಯಕ್ಕೆ ಅನುಕೂಲ ಕರವಾದ ಪ್ರಯೋಜನಗಳನ್ನು ನೀಡುತ್ತದೆ.
  • ನಮ್ಮ ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವುದರ ಜೊತೆಗೆ ಹೃದಯದ ಕಾಯಿಲೆಯನ್ನು ದೂರ ಮಾಡುವ ಗುಣ ಕಿತ್ತಳೆ ಹಣ್ಣಿನಲ್ಲಿ ಕಂಡುಬರುತ್ತದೆ. ಕರಗುವ ನಾರಿನ ಅಂಶ ಇರುವ ಕಿತ್ತಳೆ ಹಣ್ಣು ನಮ್ಮ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವುದರ ಜೊತೆಗೆ ಹೃದಯ ಹಾಗೂ ಹೃದಯ ರಕ್ತನಾಳದ ಕಾಯಿಲೆಗಳನ್ನು ದೂರ ಮಾಡಿ ಪಾರ್ಶ್ವವಾಯು ಕಂಡು ಬರದಂತೆ ನೋಡಿಕೊಳ್ಳುತ್ತದೆ.​

ಪೌಷ್ಟಿಕಾಂಶಗಳು ಅಪಾರವಾಗಿವೆ

ಕಿತ್ತಳೆ ಹಣ್ಣು ತನಲ್ಲಿ ವಿಟಮಿನ್ ಸಿ ಜೊತೆಗೆ ಇನ್ನಿತರ ಪೌಷ್ಟಿಕಾಂಶಗ ಳನ್ನು ಒಳಗೊಂಡಿರುವುದರಿಂದ ನಮ್ಮ ದೇಹದಲ್ಲಿ ಆರೋಗ್ಯಕರವಾದ ಕೆಂಪು ರಕ್ತ ಕಣಗಳ ಉತ್ಪತ್ತಿಯಲ್ಲಿ ನೆರವಾಗುತ್ತದೆ ಮತ್ತು ಆರೋಗ್ಯಕರ ವಾದ ಜೀವಕೋಶಗಳ ಬೆಳವಣಿಗೆಯನ್ನು ಮಾಡುತ್ತದೆ.

ಚರ್ಮದ ಆರೋಗ್ಯಕ್ಕೆ ಒಳ್ಳೆಯದು

ವಿಟಮಿನ್ ಸಿ ಪ್ರಮಾಣ ಕಿತ್ತಳೆ ಹಣ್ಣುಗಳಲ್ಲಿ ಹೇರಳವಾಗಿರುವುದರಿಂದ ನಮ್ಮ ದೇಹದಲ್ಲಿ ಕೊಲಾಜನ್ ಉತ್ಪತ್ತಿಯಲ್ಲಿ ಇದು ನೆರವಾಗುತ್ತದೆ. ಇದು ನಮ್ಮ ಚರ್ಮದ ಸೌಂದರ್ಯವನ್ನು ಹಾಗೂ ಸಾಂದ್ರತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೂರ್ಯನ ಹಾನಿಕಾರಕ ಕಿರಣಗಳಿಂದ ನಮ್ಮ ಚರ್ಮವನ್ನು ರಕ್ಷಿಸುವುದು ಮಾತ್ರವಲ್ಲದೆ ಗಾಯ ಆದಂತಹ ಸಂದರ್ಭದಲ್ಲಿ ಬೇಗನೆ ವಾಸಿ ಮಾಡುತ್ತದೆ.

ತೂಕ ನಿಯಂತ್ರಣದಲ್ಲಿ ಸಹಾಯಕ

  • ಆರೋಗ್ಯಕರವಾದ ತೂಕ ನಮ್ಮದಾಗಬೇಕು ಎಂದು ಪ್ರತಿಯೊ ಬ್ಬರು ಅಂದುಕೊಳ್ಳುತ್ತೇವೆ. ಆದರೆ ಅದಕ್ಕೆ ಯಾವ ಮಾರ್ಗ ಒಳ್ಳೆಯದು ಎಂಬ ಗೊಂದಲ ನಮಗಿರುತ್ತದೆ. ಆದರೆ ಕಿತ್ತಳೆ ಹಣ್ಣು ನಮ್ಮ ದೇಹದ ತೂಕ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ.
  • ಏಕೆಂದರೆ ಇದರಲ್ಲಿ ಹೆಚ್ಚಿನ ನೀರಿನ ಪ್ರಮಾಣ ಇರಲಿದ್ದು, ಹೆಚ್ಚಿನ ಕ್ಯಾಲೋರಿಗಳನ್ನು ಸೇವಿಸದೆ ಹೊಟ್ಟೆ ತುಂಬಿಕೊಂಡ ಅನುಭವ ಉಂಟಾಗುತ್ತದೆ. ಅಷ್ಟೇ ಅಲ್ಲದೆ ಕಿತ್ತಳೆ ಹಣ್ಣಿನಲ್ಲಿ ನೈಸರ್ಗಿಕವಾದ ಸಕ್ಕರೆ ಅಂಶ ಇರುವುದರಿಂದ ಇದಕ್ಕೆ ಸಿಹಿ ಹಾಕುವ ಅವಶ್ಯಕತೆ ಇಲ್ಲ.​

Source : https://vijaykarnataka.com/lifestyle/health/orange-fruit-is-best-in-winter-for-these-health-benefits/articleshow/105853527.cms?story=5

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *