ಪೋಷಕಾಂಶದ ಗುಣ ಹೊಂದಿರುವ ಈ ಸಬ್ಬಕ್ಕಿ ನಮ್ಮ ದೇಹಕ್ಕೆ ಯಾವ ರೀತಿ ಪ್ರಯೋಜನ ನೀಡುತ್ತದೆ ಎಂಬ ಮಾಹಿತಿ ಇಲ್ಲಿದೆ.

ಹೈದರಾಬಾದ್: ಸಬ್ಬಕ್ಕಿ ಎಂಬುದು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಬಹುತೇಕ ದೇಶಗಳ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಅತ್ಯಂತ ಸಮೃದ್ಧ ಪೋಷಕಾಂಶ ಗುಣಹೊಂದಿರುವ ಈ ಪದಾರ್ಥವನ್ನು ಭಾರತದಲ್ಲಿ ಹೆಚ್ಚಾಗಿ ಸಿಹಿ ತಿನಿಸಿನಲ್ಲಿ ಕಾಣಬಹುದಾಗಿದೆ.
ಪಾಯಸ, ವಡಾ, ಹಪ್ಪಳ ಸೇರಿದಂತೆ ಹಲವು ವಿಧದ ಆಹಾರವನ್ನು ಇದರಿಂದ ತಯಾರಿಸುತ್ತಾರೆ. ಇದು ದೇಹಕ್ಕೆ ಸಾಕಷ್ಟು ಶಕ್ತಿ ನೀಡುವ ಹಿನ್ನೆಲೆ ಉಪವಾಸದ ವ್ರತದ ಸಂದರ್ಭದಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುವುದು. ಪೋಷಕಾಂಶ ಗುಣ ಹೊಂದಿರುವ ಈ ಸಬ್ಬಕ್ಕಿ ನಮ್ಮ ದೇಹಕ್ಕೆ ಯಾವ ರೀತಿ ಪ್ರಯೋಜನ ನೀಡುತ್ತದೆ ಎಂಬ ಮಾಹಿತಿ ಇಲ್ಲಿದೆ.
ಪ್ರೋಟಿನ್ ಆಗರ: ಸಸ್ಯಹಾರಿಗಳು ದೇಹಕ್ಕೆ ಅಗತ್ಯ ಪ್ರಮಾಣದ ಪ್ರೋಟಿನ್ ಪಡೆಯುವಲ್ಲಿ ಕೆಲವೊಮ್ಮೆ ವಿಫಲರಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಬ್ಬಕ್ಕಿ ಪ್ರಯೋಜನ ನೀಡಲಿದೆ. ಪ್ರತಿನಿತ್ಯದ ಡಯಟ್ನಲ್ಲಿ ಸೇವಿಸುವುದರಿಂದ ದೇಹಕ್ಕೆ ಅಗತ್ಯ ಪ್ರಮಾಣದ ಪ್ರೋಟಿನ್ ಜೊತೆಗೆ ಶಕ್ತಿ ಸಿಗುತ್ತದೆ. ಅಲ್ಲದೇ ಇದು ಸ್ನಾಯುಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಮಲಬದ್ಧತೆ ನಿವಾರಣೆ: ಸಬ್ಬಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಿದ್ದು, ಇದು ದಿನವಿಡಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಉಪವಾಸ ಸಮಯದಲ್ಲಿ ಇದು ದೇಹಕ್ಕೆ ಹೆಚ್ಚಿನ ಶಕ್ತಿ ಒದಗಿಸಿ ದೇಹ ಚೈತನ್ಯದಿಂದ ಕೂಡಿರುವಂತೆ ಮಾಡುತ್ತದೆ. ಅಲ್ಲದೇ ಇದು ಜೀರ್ಣಕ್ರಿಯೆಗೆ ಕೂಡ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸಮಸ್ಯೆಗೂ ಪರಿಹಾರ ನೀಡಿ, ಮಲಬದ್ಧತೆ ನಿವಾರಣೆಗೆ ಸಹಕಾರಿಯಾಗಿದೆ.
ವಿಟಮಿನ್ಗಳು: ಸಬ್ಬಕ್ಕಿಯಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ ಕೆ ಲಭ್ಯವಿದೆ. ಇದು ಮೂಳೆಗಳ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ಹೊಂದಿದೆ. ಇದು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಇದರಲ್ಲಿನ ಕ್ಸಾಲ್ಸಿಯಂ ರಕ್ತದ ಪರಿಚಲನೆಗೆ ಸಹಾಯ ಮಾಡುತ್ತದೆ. ಇದರಲ್ಲಿನ ಫೈಬರ್ ಮತ್ತು ಬಿಟಮಿನ್ ಬಿ ಹೃದಯದ ಆರೋಗ್ಯ ಕಾಪಾಡುತ್ತದೆ.
ತೂಕ ನಿರ್ವಹಣೆ: ಅನೇಕ ಮಂದಿ ತೂಕ ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಅಂಹವರು ಪ್ರತಿನಿತ್ಯ ಸಬ್ಬಕ್ಕಿ ಆಹಾರ ಸೇವನೆ ಮಾಡುವುದರಿಂದ ತೂಕವನ್ನು ಆರೋಗ್ಯಯುತವಾಗಿ ಹೆಚ್ಚಿಸಿಕೊಳ್ಳಬಹುದು.
ಭ್ರೂಣಕ್ಕೆ ಸಹಾಯ: ಇದರಲ್ಲಿರುವ ಫೋಲಿಕ್ ಆಸಿಡ್ ಮತ್ತು ವಿಟಮಿನ್ ಬಿ ಭ್ರೂಣದಲ್ಲಿ ಮಗುವಿನ ಆರೋಗ್ಯಯುತ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಗರ್ಭಾವಸ್ಥೆಯಲ್ಲಿ ಕಾಡುವ ರಕ್ತ ಹೀನತೆ ತಡೆಯುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿನ ಅಮೈನೋ ಆಸಿಡ್ಗಳು ನರಗಳ ವ್ಯವಸ್ಥೆಗಳ ನಿರ್ವಹಣೆಗೆ ಅವಶ್ಯವಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1