Reason of Bleeding Gums:ಹಲ್ಲು ಮತ್ತು ವಸಡುಗಳಿಂದ ರಕ್ತಸ್ತ್ರಾವ ಆದಾಗ ಅದನ್ನು ಸಾಮಾನ್ಯವಾಗಿ ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಇದು ಕೆಲವೊಂದು ಗಂಭೀರ ಕಾಯಿಲೆಗಳ ಲಕ್ಷಣವೇ ಆಗಿರುತ್ತದೆ.
- ಹಲ್ಲುಜ್ಜುವಾಗ ಒಸಡುಗಳಿಂದ ರಕ್ತಸ್ರಾವವಾಗುವುದನ್ನು ಜನರು ನಿರ್ಲಕ್ಷಿಸುವುದೇ ಹೆಚ್ಚು.
- ಸಣ್ಣ ಸಮಸ್ಯೆ ಎಂದು ಅಸಡ್ಡೆ ತೋರಿದರೆ ಅದೇ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
- ಯಾವತ್ತೋ ಒಮ್ಮೊಮ್ಮೆ ವಸಡುಗಳಲ್ಲಿ ರಕ್ತಸ್ರಾವವಾದರೆ ಅದು ಅಪಾಯಕಾರಿಯಲ್ಲ.

Reason of Bleeding Gums : ಹಲ್ಲುಜ್ಜುವಾಗ ಒಸಡುಗಳಿಂದ ರಕ್ತಸ್ರಾವವಾಗುವುದನ್ನು ಜನರು ನಿರ್ಲಕ್ಷಿಸುವುದೇ ಹೆಚ್ಚು. ಸಣ್ಣ ಸಮಸ್ಯೆ ಎಂದು ಅಸಡ್ಡೆ ತೋರಿದರೆ ಅದೇ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಯಾವತ್ತೋ ಒಮ್ಮೊಮ್ಮೆ ವಸಡುಗಳಲ್ಲಿ ರಕ್ತಸ್ರಾವವಾದರೆ ಅದು ಅಪಾಯಕಾರಿಯಲ್ಲ. ಆದರೆ ಪದೇ ಪದೇ ಹೀಗಾಗುತ್ತಿದ್ದರೆ ಅದು ಎಚ್ಚರಿಕೆಯ ಗಂಟೆ. ಒಸಡುಗಳಲ್ಲಿನ ಸಮಸ್ಯೆಗಳಿಂದಾಗಿ, ಇಡೀ ದೇಹದ ಮೇಲೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಈ ಕಾಯಿಲೆಗಳಿದ್ದಾಗ ವಸಡುಗಳಲ್ಲಿ ರಕ್ತಸ್ತ್ರಾವ :
ಜಿಂಗೈವಿಟಿಸ್ :
ಒಸಡುಗಳಿಂದ ರಕ್ತಸ್ರಾವವು ಜಿಂಗೈವಿಟಿಸ್ ಸಮಸ್ಯೆಯಿಂದ ಉಂಟಾಗಬಹುದು. ಈ ಸ್ಥಿತಿಯಲ್ಲಿ, ಹಲ್ಲುಗಳ ಮೇಲೆ ಸಂಗ್ರಹವಾಗುವ ಪ್ಲೇಕ್ ಮತ್ತು ಬ್ಯಾಕ್ಟೀರಿಯಾಗಳಿಂದ ಒಸಡುಗಳಲ್ಲಿ ಊತ ಮತ್ತು ಸೋಂಕಿನಂತಹ ಲಕ್ಷಣಗಳು ಕಂಡುಬರುತ್ತವೆ. ಇದರ ಆರಂಭಿಕ ಲಕ್ಷಣಗಳೆಂದರೆ ಹಲ್ಲುಜ್ಜುವಾಗ ಸ್ವಲ್ಪ ಕಿರಿಕಿರಿ, ಊತ ಮತ್ತು ರಕ್ತಸ್ರಾವ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ತುಂಬಾ ಗಂಭೀರವಾಗಬಹುದು. ಹಲ್ಲುಗಳು ಉದುರುವುದಕ್ಕೂ ಕಾರಣವಾಗಬಹುದು.
ಪೆರಿಯೊಡಾಂಟೈಟಿಸ್ :
ಇದು ಒಸಡುಗಳು ಮತ್ತು ದವಡೆಯ ಮೂಳೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಹಲ್ಲುಗಳ ಬೇರುಗಳು ದುರ್ಬಲಗೊಳ್ಳುತ್ತವೆ. ಈ ಸ್ಥಿತಿಯು ಒಸಡುಗಳಿಂದ ನಿರಂತರ ರಕ್ತಸ್ರಾವ, ದುರ್ವಾಸನೆ, ಹಲ್ಲು ಸಡಿಲವಾಗುವುದು ಗಮುಂತಾದ ಲಕ್ಷಣಗಳೊಂದಿಗೆ ಗೋಚರಿಸುತ್ತದೆ. ಇದು ತುಂಬಾ ಗಂಭೀರವಾದ ಹಲ್ಲಿನ ಸ್ಥಿತಿಯಾಗಿದ್ದು, ಇದಕ್ಕೆ ಸಕಾಲಿಕವಾಗಿ ಚಿಕಿತ್ಸೆ ನೀಡುವುದು ಬಹಳ ಮುಖ್ಯ.
ವಿಟಮಿನ್ ಕೊರತೆ :
ಕೆಲವೊಮ್ಮೆ ವಿಟಮಿನ್ ಕೊರತೆಯಿಂದಲೂ ಒಸಡುಗಳಿಂದ ರಕ್ತಸ್ರಾವವಾಗುತ್ತದೆ. ಇದಕ್ಕೆ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಕೊರತೆ ವಿಶೇಷವಾಗಿ ಕಾರಣವಾಗಿರುತ್ತವೆ. ವಿಟಮಿನ್ ಸಿ ಕೊರತೆಯು ಸ್ಕರ್ವಿ ಎಂಬ ಕಾಯಿಲೆಗೆ ಕಾರಣವಾಗಬಹುದು.ಇದರಲ್ಲಿ ಒಸಡುಗಳು ದುರ್ಬಲವಾಗಿ ಪದೇ ಪದೇ ರಕ್ತಸ್ರಾವವಾಗುತ್ತದೆ. ವಿಟಮಿನ್ ಕೆ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ. ಆದ್ದರಿಂದ ಇದರ ಕೊರತೆಯು ಒಸಡುಗಳಿಂದ ರಕ್ತಸ್ರಾವಕ್ಕೆ ಕಾರಣವಾಗಬಹುದು. ಆಹಾರವನ್ನು ಬದಲಾಯಿಸುವ ಮೂಲಕ ಜೀವಸತ್ವಗಳ ಕೊರತೆಯನ್ನು ಸರಿದೂಗಿಸಬೇಕು.
ಹಾರ್ಮೋನ್ ಬದಲಾವಣೆ :
ಗರ್ಭಾವಸ್ಥೆಯಲ್ಲಿ, ಋತುಚಕ್ರದ ಸಮಯದಲ್ಲಿ ಅಥವಾ ಋತುಬಂಧದ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಾರ್ಮೋನುಗಳ ಬದಲಾವಣೆ ಕಂಡು ಬರುತ್ತದೆ. ಇದು ಒಸಡುಗಳು ಊದಿಕೊಂಡು ರಕ್ತಸ್ರಾವಕ್ಕೆ ಕಾರಣವಾಗಬಹುದು. ಈ ಸಮಯದಲ್ಲಿ ಒಸಡುಗಳು ಸೂಕ್ಷ್ಮವಾಗುತ್ತವೆ ಮತ್ತು ಹಲ್ಲುಜ್ಜುವಾಗ ರಕ್ತಸ್ರಾವವಾಗಲು ಪ್ರಾರಂಭಿಸುತ್ತವೆ.
Zee News
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 2