![](https://samagrasuddi.co.in/wp-content/uploads/2025/02/image-53.png)
ಶಾಪಿಂಗ್, ಅಂದ್ರೆನೇ ಒಂದು ದುಬಾರಿ ಮೊತ್ತವನ್ನು ಖರ್ಚು ಮಾಡುವ ಖಯಾಲಿ. ಶಾಪಿಂಗ್ನ ಪ್ರತಿ ಬೀದಿಯೂ ಕೂಡ ಮಿರಿಮರನೇ ಹೊಳೆಯುತ್ತಾ ಗ್ರಾಹಕರನ್ನು ಸೆಳೆಯುತ್ತವೇ. ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುತ್ತವೆ. ಜಗತ್ತಿನ ಪ್ರತಿ ದೇಶದ ದೊಡ್ಡ ದೊಡ್ಡ ನಗರಗಳು ದುಬಾರಿ ಶಾಪಿಂಗ್ ಕಾಂಪ್ಲೆಕ್ಸ್ಗಳನ್ನ ಹೊಂದಿವೆ. ದುಬಾರಿ ಶಾಪಿಂಗ್ ಬೀದಿಗಳನ್ನು ಹೊಂದಿವೆ. ಆದ್ರೆ ಜಗತ್ತಿನ ವಿಪರೀತ ದುಬಾರಿ ಶಾಪಿಂಗ್ ಬೀದಿ ಯಾವುದು ಅಂತ ಗೊತ್ತಾ? ಅದು ಲಂಡನ್ನಲ್ಲೂ ಇಲ್ಲ, ಯುಎಸ್ನಲ್ಲೂ ಇಲ್ಲ, ಪ್ಯಾರಿಸ್ನಲ್ಲೂ ಇಲ್ಲ ಹಾಗಾದ್ರೆ ಇರುವುದೆಲ್ಲಿ.
![](https://newsfirstlive.com/wp-content/uploads/2025/02/shopping-street-1.jpg)
ವಿಶ್ವದ ಅತ್ಯಂತ ದುಬಾರಿ ಶಾಪಿಂಗ್ ಬೀದಿ ಇರುವುದು ಇಟಲಿಯಲ್ಲಿರುವ ಮಿಲಾನ್ನ ವಿಯಾ ಮೊಂಟೆ ನೆಪೊಲೀಯನ್ ಸ್ಟ್ರೀಟ್. ಕುಷ್ಮನ್ ಮತ್ತು ವೇಕ್ಫಿಲ್ಡ್ ರಿಯಲ್ ಎಸ್ಟೇಟ್ ದಿಗ್ಗಜ ಸಂಸ್ಥೆ ಹೇಳುವ ಪ್ರಕಾರ ಈ ಮಿಲಾನ್ ಮೂಲದ ಶಾಪಿಂಗ್ ಬೀದಿ ಜಗತ್ತಿನ ಅತಿ ದುಬಾರಿ ಶಾಪಿಂಗ್ ರಸ್ತೆ ಎಂದು ಹೇಳಲಾಗುತ್ತದೆ. 2024ರಲ್ಲಿ ಈ ಒಂದು ಸ್ಥಾನವನ್ನು ನ್ಯೂಯಾರ್ಕ್ ಪಡೆದುಕೊಂಡಿತ್ತು. ಆದ್ರೆ ಈಗ ಕೆಲವು ತಿಂಗಳುಗಳ ಹಿಂದೆ ವಿಯಾ ಮೊಂಟೆ ನೆಪೊಲೀಯನ್ ಸ್ಟ್ರೀಟ್ ನ್ಯಾಯಾರ್ಕ್ನ್ನು ಹಿಂದಿಕ್ಕಿದೆ.
ಈ ಒಂದು ವಿಯಾ ಮೊಂಟೆ ನೆಪೋಲಿಯನ್ ಬೀದಿಯಲ್ಲಿ ಅತ್ಯಂತ ದುಬಾರಿ ಹಾಗೂ ದೊಡ್ಡ ಬ್ರ್ಯಾಂಡ್ನ ವಸ್ತುಗಳು ಬಿಕರಿಯಾಗುತ್ತವೆ. ಗುಕ್ಕಿ, ಪ್ರಾಡಾ, ಲೂಯಿಸ್ ವೈಟ್ಟಾನ್, ಚಾನೆಲ್ ಹೀಗೆ ಹಾಯ್ ಎಂಡ್ ಫ್ಯಾಶನ್ ಬ್ರ್ಯಾಂಡೆಡ್ ವಸ್ತುಗಳು ಮಾರಾಟಗೊಳ್ಳುತ್ತವೆ. ಅದರಲ್ಲೂ ಎಲ್ಲೂ ಕಾಣದ ಚಿನ್ನಾಭರಣಗಳ ಡಿಸೈನ್ ಹಾಗೂ ಅವುಗಳ ಅಂಗಡಿಗಳು ಮತ್ತು ಶೋಮೇಕರ್ಗಳು ಇಲ್ಲಿ ಸಿಗುತ್ತಾರೆ.
ಕೇವಲ ಇದು ಫ್ಯಾಶನ್ ಲವರ್ಗಳ ಸ್ವರ್ಗವಲ್ಲ ವಿಯಾ ಮೊಂಟೆ ನೆಪೋಲಿಯನ್ ಒಂದು ಐತಿಹಾಸಿಕ ಪಾರಂಪರೆಯನ್ನು ಹೊಂದಿದ ಇಟಲಿಯ ಸ್ಥಳ ಎಂದು ಕೂಡ ಗುರುತಿಲಸಾಗುತ್ತದೆ. ಈ ಒಂದು ಶಾಪಿಂಗ್ ಬೀದಿಯಲ್ಲಿ ನೀವು ವಸ್ತುಗಳನ್ನು ಖರೀದಿಸಿ ಆಚೆ ಬರಬೇಕಂದ್ರೆ ಕನಿಷ್ಠವೆಂದರೂ ನಿಮ್ಮ ಬಳಿ 2 ಲಕ್ಷ ರೂಪಾಯಿ ಇರಲೇಬೇಕು. ಅದಕ್ಕಿಂತ ಕಡಿಮೆ ದುಡ್ಡು ಇದ್ದವರು ಇಲ್ಲಿ ಕಾಲಿಡಲು ಕೂಡ ಯೋಗ್ಯರಲ್ಲ. ಇದು ಅಷ್ಟೊಂದು ಐಷಾರಾಮಿ ಜಾಗತಿಕ ಶಾಪಿಂಗ್ ಬೀದಿ ಎಂದು ಗುರುತಿಸಿಕೊಂಡಿದೆ.
ಇನ್ನು ಇಲ್ಲಿ ಒಂದು ಕಮರ್ಷಿಯಲ್ ಶಾಪ್ ಓಪನ್ ಮಾಡಬೇಕು ಅಂದ್ರೆ ಒಂದು ಸ್ಕ್ವೇರ್ ಮೀಟರ್ಗೆ 1.7 ಲಕ್ಷ ರೂಪಾಯಿ ಬಾಡಿಗೆ ನೀಡಬೇಕು. ಇಲ್ಲಿಯ ಒಂದೊಂದು ಗೂಡಂಗಡಿಗೂ ಕೂಡ ಮುಗಿಲೆತ್ತರದ ಬೆಲೆಯಿದೆ. ಅಷ್ಟೊಂದು ಬೇಡಿಕೆ ಕೂಡ ಇದೆ. ಆದ್ರೆ ಇಲ್ಲಿಯ ವ್ಯಾಪಾರವೂ ಕೂಡ ಕೋಟಿ ಮಟ್ಟದಲ್ಲಿ ನಡೆಯುತ್ತದೆ.
Source:https://newsfirstlive.com/this-is-worlds-most-expensive-shopping-street