ಕರುಣೆ, ಸಹಾನುಭೂತಿ ಮತ್ತು ಸಮಾಜ ಸೇವೆಯ ಸಂಕೇತವಾಗಿದೆ. ಎಂದು ಭೋವಿಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ. 25 ಕಾಯಕವೇ ಕೈಲಾಸ ದಾಸೋಹವೇ ದೇವಧಾಮ. ಅನ್ನ ದಾಸೋಹವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಅನ್ನದಾನವು ಕೇವಲ ಆಹಾರವನ್ನು ದಾನ ಮಾಡುವುದಲ್ಲ, ಅದು ಕರುಣೆ, ಸಹಾನುಭೂತಿ ಮತ್ತು ಸಮಾಜ ಸೇವೆಯ ಸಂಕೇತವಾಗಿದೆ. ಎಂದು ಭೋವಿಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಭಾರತೀಯ ರೈಲ್ವೆ ಬೋರ್ಡಿನ ಮಾಜಿ ಸದಸ್ಯರಾದ ಡಾ.ಕೆ.ವಿ ಸಿದ್ಧರಾಜು ಕುಟುಂಬದಿಂದ ನಗರದ ಹೊರವಲಯದಲ್ಲಿರುವ ಎಸ್ ಜೆ ಎಸ್ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಹಾಗೂ ಅನ್ನದಾಸೋಹದ ಕೈಂಕರ್ಯವನ್ನು ನೆರವೇರಿಸಿದರು. ಸಮಾರಂಭದ  ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳುವಿವಿಧ ಶ್ರೇಷ್ಠ ದಾನಗಳಲ್ಲಿ ಒಂದಾದ ಅನ್ನದಾನದ ಮಹತ್ವ ಅರಿತವರು ಡಾ.ಕೆ.ವಿ.ಸಿದ್ಧರಾಜು. ಒಂದು ತುತ್ತು ಅನ್ನಕ್ಕೆ ಪರದಾಡುವ ಜನರಿಗೆ ಅನ್ನವೇ ದೇವರು ಆಗಿರುತ್ತದೆ. ಅನ್ನವೇ ಬದುಕಾಗಿರುತ್ತದೆ. ಅನ್ನವಿಲ್ಲದೇ ಈ ಜಗತ್ತಿನಲ್ಲಿ ಹಲವಾರು ಜನ ಪರದಾಡುತ್ತಾರೆ. ಈ ರೀತಿಯ ಬದುಕನ್ನು ಕಂಡ ಸಿದ್ಧರಾಜು ಅವರು ಬಾಲ್ಯದಲ್ಲಿ ಒಪ್ಪತ್ತಿನ ಗಂಜಿಗೂ ಅಲೆದಾಟ ನಡೆಸಿದ್ದಾರೆ. ಆಹಾರಕ್ಕಾಗಿ ಬದುಕಿನ ಹೋರಾಟ ಪ್ರಾರಂಭಿಸಿದ್ದಾರೆ. ಇಂದು ತಾವು ಉಂಟು ಬಡವರ ಹಸಿವನ್ನು ನೀಗಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಆಹಾರದ ಹಾಗೆ ನೀರು ಕೂಡಾ ಜೀವಕ್ಕೆ ತುಂಬಾ ಮುಖ್ಯವಾಗಿದೆ. ಬಾಯಾರಿಕೆಯಿಂದ ಸಾಯುವ ಸ್ಥಿತಿಯಲ್ಲಿ ಇರುವವನಿಗೆ ಒಂದು ಗುಟುಕು ನೀರು ಸಿಕ್ಕಿದರು ಸಹ ಅದು ಅವನಿಗೆ ಜೀವ ಜಲವೇ ಆಗಿರುತ್ತದೆ. ಆಗಾಗಿ ಸಿದ್ಧರಾಜು ಅವರು ಭೋವಿ ಗುರುಪೀಠದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಆಗಮಿಸುವ ಸದ್ಭಕ್ತರಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದಾರೆ ಎಂದರು.

ನಾವು ತಿನ್ನುವ ಅನ್ನದ ಒಂದೊಂದು ಆಗುಳಿನ ಮೇಲೂ ಅದನ್ನು ತಿನ್ನುವವರ ಹೆಸರು ಇರುತ್ತದೆ ಎನ್ನುವ ಮಾತು ಸಾಮಾನ್ಯವಾಗಿದೆ. ಅಕ್ಕಿಯು ಉಳಿದರೆ ನಾಳೆ ಅನ್ನಮಾಡಬಹುದು. ಅನ್ನ ಮಾಡಿ ತಿಂದು ಉಳಿದರೆ ನಂತರ ಅದನ್ನು ಬಿಸಾಕಬೇಕೆ ಹೊರತು ಅದು ನಾಳೆಗೆ ಹಾಳಾಗುತ್ತದೆ. ಹಾಗಾಗಿ ನಮಗೆ ಎಷ್ಟು ಬೇಕೋ ಅಷ್ಟೇ ಅಕ್ಕಿಯನ್ನು ಬಳಸಿ ಅನ್ನವನ್ನಾಗಿ ಪರಿವರ್ತಿಸಬೇಕು. ನಾಲ್ಕು ಅಗುಳು ಕಡಿಮೆ ತಿಂದರು ಪರವಾಗಿಲ್ಲ. ಹತ್ತು ಅಗುಳು ಹಾಳಾಗದಂತೆ ನೋಡಿಕೊಳ್ಳಬೇಕೆಂದು ಶ್ರೀಗಳು ತಿಳಿಸಿದರು.

ಸಮಾರಂಭದಲ್ಲಿ ಶ್ರೀಮತಿ ಗೀತಾ ಸಿದ್ಧರಾಜು, ಶಾಂತರಾಮು, ನಾಗರಾಜು, ಚಂದ್ರಶೇಖರ, ಗೆರಗುಂಟೆಪಾಳ್ಯ ಸಿದ್ಧರಾಜು, ರಾಘವೇಂದ್ರ , ಶ್ರೀಧರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *