ವಿಜಯಪುರ ಸೈನಿಕ ಶಾಲೆಯಲ್ಲಿ 18 ಹುದ್ದೆಗಳ ಭರ್ತಿ: ಅರ್ಜಿ ಸಲ್ಲಿಕೆಗೆ ಜನವರಿ 16 ಕೊನೆಯ ದಿನ.

ಬೆಂಗಳೂರು, ಜ. 9:
ಸರ್ಕಾರಿ ಉದ್ಯೋಗಕ್ಕಾಗಿ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಲಭ್ಯವಾಗಿದೆ. ವಿಜಯಪುರದ ಸೈನಿಕ ಶಾಲೆ (Sainik School Bijapur) ವಿವಿಧ ಖಾಲಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಪಿಜಿಟಿ, ಟಿಜಿಟಿ, ವಾರ್ಡ್ ಬಾಯ್ಸ್ ಸೇರಿದಂತೆ ಒಟ್ಟು 18 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಜನವರಿ 16 ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಖಾಲಿ ಹುದ್ದೆಗಳ ವಿವರ

  • ಪಿಜಿಟಿ – 2
  • ಟಿಜಿಟಿ – 7
  • ಸಂಗೀತ ಶಿಕ್ಷಕರು – 1
  • ಸಮಾಲೋಚಕರು – 1
  • ಕ್ರಾಫ್ಟ್ ಇನ್ಸ್‌ಟ್ರಕ್ಟರ್ – 1
  • ವಾರ್ಡ್ ಬಾಯ್ಸ್ – 4
  • ಪಿಇಎಂ / ಪಿಟಿಐ – 1
  • ನರ್ಸಿಂಗ್ ಸಿಸ್ಟರ್ – 1

ವಿದ್ಯಾರ್ಹತೆ

  • ಪಿಜಿಟಿ / ಟಿಜಿಟಿ / ಸಂಗೀತ ಶಿಕ್ಷಕರು / ಸಮಾಲೋಚಕರು: ಸಂಬಂಧಿತ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ
  • ಕ್ರಾಫ್ಟ್ ಇನ್ಸ್‌ಟ್ರಕ್ಟರ್: ಡಿಪ್ಲೊಮಾ
  • ನರ್ಸಿಂಗ್ ಸಿಸ್ಟರ್: ಬಿಎಸ್‌ಸಿ
  • ವಾರ್ಡ್ ಬಾಯ್ಸ್ / ಪಿಇಎಂ / ಪಿಟಿಐ: ಕನಿಷ್ಠ 10ನೇ ತರಗತಿ ಉತ್ತೀರ್ಣತೆ

ವಯೋಮಿತಿ

  • ಕನಿಷ್ಠ ವಯಸ್ಸು: 18 ವರ್ಷ
  • ಪಿಜಿಟಿ: ಗರಿಷ್ಠ 40 ವರ್ಷ
  • ಇತರೆ ಹುದ್ದೆಗಳು: ಗರಿಷ್ಠ 35 ವರ್ಷ
  • ವಾರ್ಡ್ ಬಾಯ್ಸ್ / ಪಿಇಎಂ / ಪಿಟಿಐ / ನರ್ಸಿಂಗ್ ಸಿಸ್ಟರ್: ಗರಿಷ್ಠ 50 ವರ್ಷ

ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು.

ಅರ್ಜಿಶುಲ್ಕ:

  • ₹500 ಡಿಮಾಂಡ್ ಡ್ರಾಫ್ಟ್
  • ₹55 ಮೌಲ್ಯದ ಅಂಚೆ ಚೀಟಿ (Postal Charges)

ಆಯ್ಕೆ ಪ್ರಕ್ರಿಯೆ

  • ಲಿಖಿತ ಪರೀಕ್ಷೆ
  • ಪ್ರಾಯೋಗಿಕ ಪರೀಕ್ಷೆ
  • ಸಂದರ್ಶನ

ಅರ್ಜಿ ಸಲ್ಲಿಸಬೇಕಾದ ವಿಳಾಸ

ಪ್ರಾಂಶುಪಾಲರು,
ಸೈನಿಕ್ ಶಾಲೆ,
ವಿಜಯಪುರ – 586108

ಅರ್ಜಿಯಲ್ಲಿ ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು.

ಪ್ರಮುಖ ದಿನಾಂಕ

  • ಅರ್ಜಿ ಆರಂಭ: ಡಿಸೆಂಬರ್ 27
  • ಕೊನೆಯ ದಿನಾಂಕ: ಜನವರಿ 16

ಹೆಚ್ಚಿನ ಮಾಹಿತಿಗಾಗಿ ಮತ್ತು ಅಭ್ಯರ್ಥಿಗಳುssbj.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Leave a Reply

Your email address will not be published. Required fields are marked *