2026ರ ಆಗ್ನೇಯ ಪದವೀಧರ ಚುನಾವಣೆಗೆ ನ.6ರೊಳಗೆ ಹೆಸರು ನೊಂದಾಯಿಸಿಕೊಳ್ಳಿ: ಜೆ.ಡಿ.ಯು ಆಕಾಂಕ್ಷಿ ಡಾ. ನಾಗರಾಜ್ ಮನವಿ.

ಚಿತ್ರದುರ್ಗ ಅ. 29

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

2026ರಲ್ಲಿ ನಡೆಯಲಿರುವ ಆಗ್ನೇಯ ಪದವೀಧರ ಚುನಾವಣೆಯಲ್ಲಿ ಮತದಾನದ ಹಕ್ಕು ಚಲಾಯಿಸಲು ನ. 06ರೊಳಗಾಗಿ ಜಿಲ್ಲೆಯ ಎಲ್ಲಾ ಪದವೀದರರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳುವಂತೆ ಜೆ.ಡಿ.ಯು. ನ ಯುವ ಘಟಕದ ರಾಜ್ಯಾಧ್ಯಕ್ಷರು,ಆಗ್ನೇಯ ಪದವೀಧರರ ಜೆ.ಡಿ.ಯು. ಅಭ್ಯರ್ಥಿ ಹಾಗೂ ಎನ್‍ಡಿಎ ಮೃತ್ರಿ ಕೂಟದ ಆಕಾಂಕ್ಷಿ ಅಭ್ಯರ್ಥಿ ಡಾ,ನಾಗರಾಜ್ ಪದವೀಧರರಲ್ಲಿ ಮನವಿ ಮಾಡಿದ್ದಾರೆ.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಈಗಾಗಲೇ ಹಲವಾರು ಚುನಾವಣೆಗಳಲ್ಲಿ ಪಕ್ಷೇತರ ಅಭ್ಯರ್ಥಿಯಾಗುವುದರ ಮೂಲಕ ಸ್ಪರ್ದೆ ಮಾಡಿದ್ದೇನೆ, ಈ ಸಮಯದಲ್ಲಿ ಮತದಾರರು ನನ್ನ ಕಡೆ ಒಲವನ್ನು ತೋರಿಸಿದ್ದರು, 2026ರಲ್ಲಿ ನಡೆಯಲಿರುವ ಆಗ್ನೇಯ ಪದವೀಧರ ಚುನಾವಣೆಯಲ್ಲಿ ಮತದಾನವನ್ನು ಮಾಡಲು ವಿವಿಧ ರೀತಿಯಲ್ಲಿ ಪದವಿಯನ್ನು ಪಡೆದ ಎಲ್ಲರೂ ಸಹಾ ಅರ್ಹರಾಗಿದ್ದಾರೆ, ಇದಕ್ಕೆ ಎಲ್ಲಾ ಪದವಿಯನ್ನು ಪಡೆದವರು ಆಯಾ ತಾಲ್ಲೂಕು ಕಚೇರಿಯಲ್ಲಿನ ಚುನಾವಣಾ ಶಾಖೆಯಲ್ಲಿ ನಿಗಧಿತವಾದ ಫಾರಂ ಭರ್ತಿ ಮಾಡುವುದರ ಮೂಲಕ ತಮ್ಮ ಹೆಸರನ್ನು ನೊಂದಾಯಿಸಬಹುದಾಗಿದೆ ಎಂದರು.

ಆಗ್ನೇಯ ಪದವೀಧರ ಕ್ಷೇತ್ರವೂ ರಾಜ್ಯದ ಐದು ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಚಿತ್ರದುರ್ಗ ಹಾಗೂ ದಾವಣಗೆರೆಯನ್ನು ಹೊಂದಿದೆ. ಈ ಚುನಾವಣೆಯಲ್ಲಿ ಚುನಾವಣಾ ಆಯೋಗ ಮತದಾನವನ್ನು ಮಾಡುವವರಿಗೆ ಹೆಸರನ್ನು ನೊಂದಾಯಿಸಲು ನ. 06 ಕೊನೆಯ ದಿನವನ್ನಾಗಿ ನೀಡಿದೆ ಆದರೆ ಇಲ್ಲಿಯವರೆಗೂ ಹಲವಾರು ಜನತೆ ತಮ್ಮ ಹೆಸರನ್ನು ನೊಂದಾಯಿಸಿಲ್ಲ ಈ ಹಿನ್ನಲೆಯಲ್ಲಿ ಮತದಾರರಿಗೆ ತಮ್ಮ ಹೆಸರನ್ನು ನೊಂದಾಯಿಸಲು ಈ ವರ್ಷದ ಕೊನೆಯವರೆಗೂ ಅವಕಾಶವನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ ಡಾ.ನಾಗರಾಜ್, 2022ಕ್ಕಿಂತ ಮುಂಚೆ ಪದವಿಯನ್ನು ಪೂರ್ಣ ಮಾಡಿದವರು ತಮ್ಮ ಪದವಿ ಪ್ರಮಾಣ ಪತ್ರದೊಂದಿಗೆ ತಮ್ಮ ಹೆಸರನ್ನು ಫಾರಂ 8ರಲ್ಲಿ ದಾಖಲಾತಿಯನ್ನು ನೀಡುವುದರ ಮೂಲಕ ನೊಂದಾಯಿಸಬಹುದಾಗಿದೆ ಎಂದು ತಿಳಿಸಿದರು.

ನಾನು ಈಗಾಗಲೇ ಶಿಕ್ಷಕರ ಹಾಗೂ ಪದವೀಧರರ ಹಲವಾರು ಸಮಸ್ಯೆಗಳನ್ನು ಅರಿತ್ತಿದ್ದೇನೆ ಅವುಗಳನ್ನು ಪರಿಹಾರಕ್ಕೆ ಹೋರಾಟವನ್ನು ಮಾಡಲು ಸಹಾ ನೆರವಾಗಿದ್ದೇನೆ, ಕಳೆದ ಒಂದುವರೆ ವರ್ಷದಿಂದ ಈ ಕ್ಷೇತ್ರದಲ್ಲಿ ನಿರಂತರವಾಗಿ ಓಡಾಡುವುದರ ಮೂಲಕ ಮತದಾರರನ್ನು ಸಂಪರ್ಕದಲ್ಲಿ ಇದ್ದೇನೆ, ಮುಂದಿನ ದಿನದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮತದಾರರು ನನಗೆ ಮೊದಲ ಪ್ರಾಶಸ್ಯದ ಮತವನ್ನು ನೀಡುವುದರ ಮೂಲಕ ನನ್ನನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ. ನಾನು ಜಯಶಾಲಿಯಾಗಿ ಬಂದಲ್ಲಿ ಸರ್ಕಾರದಲ್ಲಿ ಖಾಲಿ ಇರುವ ವಿವಿಧ ರೀತಿಯ ಹುದ್ದೆಗಳಿಗೆ ನೇಮಕಾತಿಯನ್ನು ಪ್ರಾರಂಭ ಮಾಡಲು ಒತ್ತಾಯವನ್ನು ಹೇರಲಾಗುವುದು, ಎನ್.ಪಿ.ಎಸ್.ನಿಂದ ಓ.ಪಿ.ಎಸ್. ಪದ್ದತಿಯನ್ನು ಜಾರಿ ಮಾಡಲು ಪ್ರಯತ್ನ ಮಾಡಲಾಗುವುದು, ಅತಿಥಿ ಉಪನ್ಯಾಸಕರುಗಳಿಗೆ ಮತ್ತು ಶಿಕ್ಷಕರುಗಳಿಗೆ ಸೇವಾ ಭದ್ರತೆಯನ್ನು ಒದಗಿಸಲಾಗುವುದು, ಎಲ್ಲರಿಗೂ ಸಹಾ ಜ್ಯೋತಿ ಸಂಜೀವಿನಿ ಯೋಜನೆಯನ್ನು ಜಾರಿ ಮಾಡಲಾಗುವುದು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಉಚಿತ ಐಎಎಸ್, ಕೆಎಎಸ್ ತರಬೇತಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು, ಗ್ರಾಮೀಣ ಭಾಗದ ಪದವೀದರರಿಗೆ ಸ್ವಯಂ ಉದ್ಯೋಗಕ್ಕೆ ಅದ್ಯತೆಯನ್ನು ನೀಡಿ ಪ್ರೋತ್ಸಾಹವನ್ನು ನೀಡುವ ಕಾರ್ಯವನ್ನು ಮಾಡಲಾಗುವುದೆಂದರು.

ಗೋಷ್ಟಿಯಲ್ಲಿ ಜೆಡಿಯು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಶಿವಶಂಕರಪ್ಪ, ರಾಕೇಶ್, ರಾಜೀವ್, ಸಂಧ್ಯಾ, ಸುನೀಲ್, ಭರತ್, ರಾಮಚಂದ್ರಪ್ಪ, ನಾರಾಯಣಸ್ವಾಮಿ ಗೌಡ, ನಾಗರಾಜ್ ಸುಧಾಕರ್ ಪಂಪಣ್ಣ ಭಾಗವಹಿಸಿದ್ದರು.

Views: 93

Leave a Reply

Your email address will not be published. Required fields are marked *