ಜುಲೈ 1 ರಾಷ್ಟ್ರೀಯ ವೈದ್ಯರ ದಿನಾಚರಣೆ ವೈದ್ಯ ನಾರಾಯಣೋ ಭವಃ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ದೇವರು ಒಬ್ಬನೆ ಎಲ್ಲೆಡೆ ಅವನಿರಲಾಗದು ಅವನ ಜಾಗದಲ್ಲಿ ವೈದ್ಯರನ್ನು ಭೂಮಿಗೆ ಕಳಿಸುತ್ತಾನೆ. ಇದಕ್ಕೆ ಸಾಕ್ಷಿ
ಡಾ:ಬಿಧನ್‍ಚಂದ್ರರಾಯ್. ಇಂದು ಜುಲೈ 1 ಮಹನೀಯರ ಜನ್ಮದಿನ. ಇಂತಹ ಪುಣ್ಯ ಪುರುಷನ ನೆನಪಲ್ಲಿ ಭಾರತದಾದ್ಯಂತ
ವೈದ್ಯರ ದಿನವಾಗಿ ಆಚರಿಸಲಾಗುತ್ತಿದೆ.

ಡಾ: ಬಿ.ಸಿ.ರಾಯ್ ಬಿಹಾರದಪಾಟ್ನಾದವರು, ಕಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿಪದವಿ ಪಡೆದು, ಇಂಗ್ಲೇಂಡ್ ನ ಎಂ.ಆರ್.ಸಿ.ಪಿ
ವೈದ್ಯಕೀಯ ಕಾಲೇಜಿನಲ್ಲಿ ಪಿಜಿಶಿಯನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕಲ್ಕತ್ತಾದ ಹೆಸರಾಂತ ವೈದ್ಯರಾಗಿ ಜನಗಳ
ಪ್ರೀತಿ ಗಳಿಸಿದವರು.ಎರಡು ಬಾರಿ ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿಯಾಗಿ ಸೇವೆ ಮಾಡಿದವರು. ವೈದ್ಯನಾಗಿರೋಗಿಗಳ ಸೇವೆ
ಮಾಡಲೂ ಸೈ. ಮುಖ್ಯಮಂತ್ರಿಯಾಗಿ ಪ್ರಜೆಗಳ ನಾಗರೀಕ ಸೇವೆ ಮಾಡಲೂ ಸೈಎನಿಸಿಕೊಂಡವರು.

ಡಾ:ಬಿ.ಸಿ.ರಾಯ್ ಅವರು ಪಶ್ಚಿಮ ಬಂಗಾಳದಿಂದ ಹಿಡಿದು ದೇಶದಾದ್ಯಂತ ವೈದ್ಯಕೀಯ ರಂಗದಲ್ಲಿ ಸುಧಾರಣೆ, ಅಭಿವೃದ್ಧಿಗಳ
ಹರಿಕಾರ ಹಾಕಿದವರು. ರಾಷ್ಟ್ರಮಟ್ಟದಲ್ಲಿ ಪ್ರತಿಷ್ಠಿತ ವೈದ್ಯರನ್ನು ಗುರುತಿಸಿಸತ್ಕಾರ-ಸನ್ಮಾನ ಮಾಡುವ ಪದ್ದತಿಗೆಓಂಕಾರ
ಬರೆದವರು.

ವೈದ್ಯ ನಾರಾಯಣೋ ಭವಃ* ಅನಾದಿ ಕಾಲದಿಂದಭಾರತ ವಾಸಿಗಳು ವೈದ್ಯರಲ್ಲಿಭಗವಂತನನ್ನೆ ಕಾಣುವ ಅಪ್ಪಟ ಶುದ್ಧ
ಮಾನಸಿಕತೆ ನಮ್ಮದು. ಹೌದು ನಮ್ಮ ಪುರಾಣ, ವೇದ ಉಪನಿಷತ್‍ಗಳಲ್ಲಿ ವೈದ್ಯರನ್ನು ಉನ್ನತ ಸ್ಥಾನದಲ್ಲಿರಿಸಿ
ಆರಾಧಿಸುವರುನಾವು. ಸಮುದ್ರ ಮಂಥನದಿಂದ ವೈದ್ಯದೇವಧನ್ವಂತರಿಭೂಮಿಗೆ ಬಂದವನು. ಶುಶೃತ, ಚರಕ ಮಹರ್ಷಿಗಳು
ವೈದ್ಯಕೀಯವನ್ನೇ ತಪಸ್ಸೆಂದುರೋಗಿಗಳ ಸೇವೆ ಮಾಡಿದವರು. ಶುಶೃತ ಕಣ್ಣಿನವೈದ್ಯನಾದರೆ, ಚರಕ ರೋಗಿಯ ನಾಡಿ
ಮಿಡಿತದಿಂದಲೇ ರೋಗವನ್ನುಪತ್ತಹಚ್ಚಿ ವಾಸಿಮಾಡಬಲ್ಲವರಾಗಿದ್ದವರು. ಅವರ ಬಳಿ ರೋಗಿ ನರಳುತ್ತ, ಕುಂಟುತ್ತಾ ಹೋದವನು
ಚಿಕಿತ್ಸೆ ಪಡೆದುಕುಣಿಯುತ್ತಾ ಬರುತ್ತಿದ್ದನೆಂದುಉಲ್ಲೇಖಗಳಿವೆ. ಅವರ ವೈದ್ಯಕೀಯ ಜ್ಞಾನ ಸಂಪತ್ತು ಅಯಾ ಸಂಹಿತೆಗಳಲ್ಲಿ
ಜೀವಂತವಾಗಿವೆ. ಎಲ್ಲಕ್ಕಿಂತಮಿಗಿಲಾಗಿ ಶಿವನೆ ಜಗತ್ತಿನ ಮೊದಲ ಅಂಗಾಗ ಕಸಿ ಮಾಡಿದನೆಂದು ಪುರಾಣ ಹೇಳುತ್ತಿವೆ ಇಂತಹ
ಪುಣ್ಯ ಭಾರತ ಮಾತೆಯ ಮಣ್ಣಲ್ಲಿ ಹುಟ್ಟಿದವರು ನಾವೇಧನ್ಯರು.

ವೈದ್ಯಕೀಯ ಕ್ಷೇತ್ರ ಭಾರಿ ಬದಲಾವಣೆಯಾಗುತ್ತ ಸಾಗುತ್ತಿದೆಅದರೊಂದಿಗೆ ನಿಷ್ಣಾತ ವೈದ್ಯರಸಂಖ್ಯೆಯೂ
ಗಣನೀಯವಾಗಿಹೆಚ್ಚುತ್ತಿದೆ. ಬೆಳೆಯುತ್ತಿರುವಜನಸಂಖ್ಯೆಗೆ ಹೋಲಿಸಿದರೆ ಇದು ಸಾಲದು. ಹಾಗೆಯೆ ಆಸ್ಪತ್ರೆಗಳು ಹೆಚ್ಚಾಗಬೇಕು.
ವೈದ್ಯಕೀಯ ವಿಷಯಗಳಲ್ಲಿಹಲವು ಪದ್ದತಿಗಳಿವೆ ಅಲೋಪಥಿ, ಅಯುರ್ವೇದ, ಹೋಮಿಯೋ ಪಥಿ, ಯುನಾನಿ ಮುಂತಾದವು.ನಾನೇ
ಶ್ರೇಷ್ಟ, ಅವರದು ಶ್ರೇಷ್ಟವಲ್ಲ ಅನ್ನಲಾಗದು ಆಯ್ಕೆ ರೋಗಿಗಳ ಮೇಲೆ ಬಿಡಬೇಕು, ಪರಸ್ಪರ ಒಬ್ಬರಿಗೊಬ್ಬರುಜನಗಳಿಗೆ
ಧೂಷಿಸುವುದುಸಲ್ಲದು. ಒಟ್ಟಾರೆ ಜನಗಳ ಆರೋಗ್ಯವೇ ಭಾಗ್ಯವಂತಾಗಬೇಕು.

ಜನಮಾನಸದಲ್ಲಿ ಇತ್ತೀಚೆಗೆತಾಳ್ಮೆ ಕಳೆದುಕೊಂಡು ವೈದ್ಯರಮೇಲೆ ನನ್ನ ಸಂಬಂಧಿಯಸಾವಿಗೆ ವೈದ್ಯರೆ ಕಾರಣ ಎಂದು ಹಲ್ಲೆ
ಮಾಡುವ ಅಸಹನೀಯ ಮಾನದಿಕತೆಹೆಚ್ಚಾಗುತ್ತಿದೆ. ಯಾವ ವೈದ್ಯನೂ ರೋಗಿಯ ಸಾವನ್ನು ಬಯಸಲ್ಲ.ಅವರ ಕೈ ಮೀರಿದರೆ
ಅವರೂ ಅಸಹಾಯಕರೆಂದು ಅರ್ಥಮಾಡಿಕೊಂಡು ಮುನ್ನಡೆಯಬೇಕು .ಕೋವಿಡ್ ಮಹಾಮಾರಿ ದುರ್ದಿನಗಳಲ್ಲಿಕೇವಲ ರೋಗಿಗಳು
ಸಾಯಲಿಲ್ಲಅದರೊಂದಿಗೆ ಚಿಕಿತ್ಸೆ ನೀಡುತ್ತಿದ್ದ ಹಲವು ವೈದ್ಯರೂ ಸಾವನ್ನುಕಂಡರು.

ಸಮಸ್ತ ವೈದ್ಯಕೀಯ ರಂಗದವೈದ್ಯ ಮಹನೀಯರಿಗೆಇಂದಿನ ರಾಷ್ಟ್ರೀಯ ವೈದ್ಯರದಿನಾಚರಣೆಯ ಮನದಾಳದಶುಭ
ಹಾರೈಕೆಗಳನ್ನು ನಾವೆಲ್ಲಒಂದಾಗಿ ಸಲ್ಲಿಸೋಣ. ಭಾರತಅಭಿವೃದ್ಧಿಯತ್ತ ಸಮಸ್ತ ರಂಗಗಳಲ್ಲಿ ದಾಪುಗಾಲು ಇಟ್ಟಾಗಿದೆ.
ಅದರಲ್ಲಿವೈದ್ಯಕೀಯ ಕ್ಷೇತ್ರವೂ ಮುಂದಾಗಲಿ. ವೈದ್ಯೊನಾರಾಯಣೋ ಭವಃಸದಾ ಜೀವಂತವಾಗಿರಲಿ ಎನ್ನುವ ಆಶಯ
ನಮ್ಮೆಲ್ಲರದು.

ವೀರಣ್ಣ ಬ್ಯಾಗೋಟಿ. ಬೀದರ.

Leave a Reply

Your email address will not be published. Required fields are marked *