ಚಿತ್ರದುರ್ಗ|ಶ್ರೀ ಸಿದ್ದಾರೂಢ ಮಹಾಸ್ವಾಮಿಗಳವರ ಜ್ಯೋತಿ ಯಾತ್ರೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 12: ಹುಬ್ಬಳ್ಳಿಯ ಶ್ರೀ ಸಿದ್ದರೂಢಸ್ವಾಮಿಯವರ ಮಠ ಟ್ರಸ್ಟ್ ಕಮಿಟಿವತಿಯಿಂದ ಶ್ರೀ ಸಿದ್ದಾರೂಢರ 190ನೇ ಜಯಂತ್ಯುತ್ಸವ ಹಾಗೂ ಶ್ರೀ ಗುರುನಾಥಾರೂಢರ 115ನೇ ಜಯಂತ್ಯುತ್ಸವ ಶ್ರೀ ಸಿದ್ದರೂಢರ ಕಥಾಮೃತದ ಶತಮಾನೋತ್ಸವ ಕಾರ್ಯಕ್ರಮದ ನಿಮಿತ್ತವಾಗಿ
2024 ಡಿ.23 ರಿಂದ 2025 ಫೆ.19ರವರೆಗೆ ಹಮ್ಮಿಕೊಂಡಿದ್ದ ಜಗದ್ಗುರು ಶ್ರೀ ಸಿದ್ದಾರೂಢ ಮಹಾಸ್ವಾಮಿಗಳವರ ಜ್ಯೋತಿ ಯಾತ್ರೆ
ಶನಿವಾರ ಸಂಜೆ ಚಿತ್ರದುರ್ಗ ನಗರಕ್ಕೆ ಆಗಮಿಸಿದಾಗ ಶ್ರೀ ಕಬೀರಾನಂದಶ್ರಾಮದವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ನಗರದ ಮದಕರಿ ವೃತ್ತದಲ್ಲಿ ಹಿರಿಯೂರು ಕಡೆಯಿಂದ ಆಗಮಿಸಿದ ಜ್ಯೋತಿ ಯಾತ್ರೆಯನ್ನು ಪೂರ್ಣ ಕುಂಭ, ನಾಗಸ್ವರ ಹಾಗೂಆರತಿ ತಟ್ಟೆಯೊಂದಿಗೆ ಭಕ್ತಾಧಿಗಳ ಸಮ್ಮುಖದಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು. 2024ರ ಡಿ.23ರಂದು ಶ್ರೀ ಸಿದ್ದರೂಢ ಜನ್ಮ ಸ್ಥಳವಾದ ಸುಕ್ಷೇತ್ರ ಚಳಖಾಪುರದಿಂದ ಪ್ರಾರಂಭವಾದ ಜ್ಯೋತಿ ಯಾತ್ರೆ ಕರ್ನಾಟಕ, ಮಹಾರಾಷ್ಟ್ರ, ಆಂದ,್ರ ಗೋವಾ ರಾಜ್ಯಗಳ ಪ್ರಮುಖ ಸ್ಥಳಗಳಲ್ಲಿ ಸಂಚಾರ ಮಾಡಿ 2025 ಫೆ, 18 ರಂದು ಉಣಕಲ್ ಶ್ರೀ ಸಿದ್ದಪ್ಪಜ್ಜನ ದೇವಸ್ಥಾನದಿಂದ ಶ್ರೀ ಮಠ ತಲುಪಲಿದೆ. ಜ. 12ರ ಬೆಳಿಗ್ಗೆ ಜ್ಯೋತಿ ಯಾತ್ರೆಯೂ ಚಿತ್ರದುರ್ಗದ ಮಾರ್ಗದಿಂದ ಹೊಸದುರ್ಗದ ಕಡೆ ಪಯಾಣವನ್ನು ಬೆಳಸಿತು.

ನಗರದ ಮದಕರಿ ವೃತ್ತದಿಂದ ಪ್ರಾರಂಭವಾದ ಜ್ಯೋತಿ ಯಾತ್ರೆಯೂ ಜೋಗಿಮಟ್ಟಿ ರಸ್ತೆಯ ಮೂಲಕ ತಾರಾ ವಾಣಿಜ್ಯ ಸಂಸ್ಥೆಯ ಪಕ್ಕದ ರಸ್ತೆಯಿಂದ ಕರುವಿನಕಟ್ಟೆ ವೃತ್ತವನ್ನು ಹಾದು ಕಬೀರಾನಂದಾಶ್ರಮವನ್ನು ತಲುಪಿತು. ದಾರಿಯುದ್ದಕ್ಕೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಸಿದ್ದರೂಢರವರ ನಾಮಸ್ಮರಣೆಯನ್ನು ಮಾಡಿಕೊಂಡು ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.

ಫೆ. 19 ರಂದು ಹುಬ್ಬಳ್ಳಿಯ ಶ್ರೀ ಜಡಿಸಿದ್ದಾಶ್ರಮದಿಂದ ಶ್ರೀ ಸಿದ್ಧಾರೂಢರ ಹಾಗೂ ಶ್ರೀ ಗುರುನಾಥಾರೂಢರ ಮೂರ್ತಿಗಳ
ಮೆರವಣಿಗೆಯ ಮೂಲಕ ಸದ್ಬಕ್ತರು ಶ್ರೀ ಸಿದ್ದಾರೂಢರ ಕಥಾಮೃತವನ್ನು ಮಸ್ತಕದ ಮೇಲೆ ಇರಿಸಿಕೊಂಡು ಮೆರವಣಿಗೆಯ ಮೂಲಕ
ಶ್ರೀ ಮಠವನ್ನು ತಲುಪಲಿದೆ. ಫೆ. 20 ರಿಂದ 26ರವರೆಗೆ ವಿಶ್ವಶಾಂತಿಗಾಗಿ ವಿಶ್ವವೇದಾಂತ ಪರಿಷತ್ ನಡೆಯಲಿದ್ದು, ಇದರಲ್ಲಿ ನಾಡಿನ
ವಿವಿಧ ಮಠಾಧೀಶರು ಜಗದ್ಗುರು, ಮಹಾಮಂಡಲೇಶ್ವರರು, ಸಾಧುಸಂತರು ಆಗಮಿಸಲಿದ್ದಾರೆ.

ಚಿತ್ರದುರ್ಗಕ್ಕೆ ಆಗಮಿಸಿದ ಜ್ಯೋತಿ ಯಾತ್ರೆಯನ್ನು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು,
ಕಾರ್ಯದರ್ಶಿಗಳಾದ ವಿ.ಎಲ್.ಪ್ರಶಾಂತ್, ಶ್ರೀ ಸಿದ್ದಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿಯ ಜ್ಯೋತಿ ಯಾತ್ರೆಯ
ಸದಸ್ಯರಾದ ಶಂಕರಗೌಡ ಎಚ್.ಸಂಗೊಂದಿ, ಈರಣ್ಣ ಎಸ್.ಪಾಳೇದ ಶಿವಮೂರ್ತಿ ಶಿವಸಿಂಪಿ, ನಿತ್ಯಾನಂದ ಶ್ರೀಗಳು, ಗಣಪತಿ
ಶಾಸ್ತ್ರಿ, ತಿಪ್ಪೇಸ್ವಾಮಿ, ನಿರಂಜನ ಮೂರ್ತಿ, ಈರಣ್ಣ, ವಿ.ಎಲ್.ಪ್ರವೀಣ್ ಸೇರಿದಂತೆ ಇತರರು ಭಾಗವಹಿಸಿದ್ದರು.

Views: 0

Leave a Reply

Your email address will not be published. Required fields are marked *