ಚಿತ್ರದುರ್ಗ ನ. 20
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಗರದ ಜೋಗಿಮಟ್ಟಿ ರಸ್ತೆಯಲ್ಲಿನ ಶ್ರೀಮದ್ ಜಗದ್ಗುರು ಶ್ರೀ ಕೂಡಲಿ ಶೃಂಗೇರಿ ಮಹಾಸಂಸ್ಥಾನಮ್ ಶಾಖಾ ಮಠದಲ್ಲಿ ನ. 23 ರಂದು ಕಡೇ ಕಾರ್ತಿಕ ದೀಪೋತ್ಸವವನ್ನು ಆಯೋಜಿಸಲಾಗಿದೆ ಎಂದು ಮಹಾ ಸಂಸ್ಥಾನಮ್ ತಿಳಿಸಿದೆ.
ದಿ: 23-11-2025ನೇ ಭಾನುವಾರದಂದು ಶ್ರೀಮಠದಲ್ಲಿ ಕಡೆಯ ಕಾರ್ತೀಕ ದೀಪೋತ್ಸವವನ್ನು ಆಯೋಜಿ ಸಲಾಗಿದೆ. ಕಾರ್ಯಕ್ರಮವು ಸಂಜೆ 7 ಘಂಟೆಗೆ ಪ್ರಾರಂಭವಾಗುತ್ತದೆ. ನಂತರ ಅಷ್ಠಾವಧಾನ ಸೇವೆ ಹಾಗೂ ತೀರ್ಥ ಮಹಾಪ್ರಸಾದ ವಿನಿಯೋಗ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕಾಗಿ ಮನವಿ ಮಾಡಲಾಗಿದೆ.
Views: 13