ಕರ್ನಾಟಕ ನಡುಗುತ್ತಿದೆ! 21 ಜಿಲ್ಲೆಗಳಲ್ಲಿ 10 ಡಿಗ್ರಿಗಿಂತ ಕಡಿಮೆ ತಾಪಮಾನ.

ಬೀದರ್‌ನಲ್ಲಿ ದಾಖಲೆ 7 ಡಿಗ್ರಿ ಸೆಲ್ಸಿಯಸ್‌ – ಇನ್ನೂ 4 ದಿನ ಶೀತಗಾಳಿ ಎಚ್ಚರಿಕೆ

ಬೆಂಗಳೂರು:
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ತಾಪಮಾನದಲ್ಲಿ ತೀವ್ರ ಕುಸಿತ ಕಂಡುಬರುತ್ತಿದ್ದು, ರಾಜ್ಯಾದ್ಯಂತ ಚಳಿ ಹೆಚ್ಚಾಗಿದೆ. ಭಾನುವಾರ ಬೆಳಿಗ್ಗೆ ರಾಜ್ಯದ 21 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಅತಿ ಕಡಿಮೆ ತಾಪಮಾನ ಬೀದರ್‌ನಲ್ಲಿ 7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಶೀತಗಾಳಿ ಪ್ರಭಾವ ಹೆಚ್ಚಾಗಿದೆ. ಇದೇ ರೀತಿಯ ಚಳಿ ಡಿಸೆಂಬರ್ 18ರವರೆಗೆ (ಇನ್ನೂ ನಾಲ್ಕು ದಿನ) ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

7 ಡಿಗ್ರಿಯ ಸುತ್ತಮುತ್ತ ತಾಪಮಾನ ದಾಖಲಾಗಿರುವ ಜಿಲ್ಲೆಗಳು

  • ಬೀದರ್ – 7
  • ಚಿಕ್ಕಬಳ್ಳಾಪುರ – 7.1
  • ಧಾರವಾಡ – 7.4
  • ತುಮಕೂರು – 7.4
  • ಚಿಕ್ಕಮಗಳೂರು – 7.6
  • ಬೆಳಗಾವಿ – 7.8

ಜಿಲ್ಲಾವಾರು ಕನಿಷ್ಠ ತಾಪಮಾನ (ಡಿಗ್ರಿ ಸೆಲ್ಸಿಯಸ್‌ನಲ್ಲಿ)

ಜಿಲ್ಲೆತಾಪಮಾನ
ಬೀದರ್7
ಚಿಕ್ಕಬಳ್ಳಾಪುರ7.1
ಧಾರವಾಡ7.4
ತುಮಕೂರು7.4
ಚಿಕ್ಕಮಗಳೂರು7.6
ಬೆಳಗಾವಿ7.8
ಹಾಸನ8.3
ಕೊಡಗು8.5
ಬಾಗಲಕೋಟೆ8.6
ಹಾವೇರಿ8.7
ಮೈಸೂರು8.8
ವಿಜಯನಗರ8.8
ಗದಗ9
ವಿಜಯಪುರ9.3
ಕಲಬುರಗಿ9.4
ಮಂಡ್ಯ9.7
ಉತ್ತರ ಕನ್ನಡ9.8
ಕೋಲಾರ9.9
ಕೊಪ್ಪಳ9.9
ಚಾಮರಾಜನಗರ10
ಶಿವಮೊಗ್ಗ10
ಬೆಂಗಳೂರು ನಗರ10.8
ಉಡುಪಿ14.4
ದಕ್ಷಿಣ ಕನ್ನಡ15.5

ಉತ್ತರ ಕರ್ನಾಟಕದಲ್ಲಿ ‘ಥಂಡಾ’ ವಾತಾವರಣ

ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೀದರ್, ವಿಜಯಪುರ, ಬೆಳಗಾವಿ, ಕಲಬುರಗಿ ಸೇರಿದಂತೆ ಹಲವೆಡೆ ಕಳೆದ ಒಂದು ವಾರದಿಂದ ತೀವ್ರ ಚಳಿ ಅನುಭವವಾಗುತ್ತಿದೆ. ಬಿಸಿಲಿಗಿಂತ ಚಳಿ ಹೆಚ್ಚು ತೀವ್ರವಾಗಿದ್ದು, ಶೀತಗಾಳಿಯಿಂದ ಜನರು ನಡುಗುತ್ತಿದ್ದಾರೆ.

ಇನ್ನೂ 4 ದಿನ ಚಳಿ ಮುಂದುವರಿಕೆ

ಇದೇ ರೀತಿಯ ತಾಪಮಾನ ಇಳಿಕೆ ಇನ್ನೂ ಕೆಲ ದಿನಗಳು ಮುಂದುವರಿಯುವ ಸಾಧ್ಯತೆ ಇದ್ದು, ಬೆಳಗ್ಗೆ ಮತ್ತು ಸಂಜೆ ವೇಳೆ ಜನರ ಓಡಾಟ ಕಡಿಮೆಯಾಗಿದೆ. ಹಲವೆಡೆ ಮಾರುಕಟ್ಟೆಗಳು ಜನರಿಲ್ಲದೆ ಬಿಕೋ ಎನ್ನುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

Views: 80

Leave a Reply

Your email address will not be published. Required fields are marked *