ಯುದ್ಧದಲ್ಲಿ ಸಿಲುಕಿಕೊಂಡಿದ್ದ ಚಿತ್ರದುರ್ಗದ ವಿದ್ಯಾರ್ಥಿಯನ್ನ ರಕ್ಷಣೆ ಮಾಡಿದ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ: ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಚಿತ್ರದುರ್ಗ ಜಿಲ್ಲೆಯ ಯುವಕ ಜಬಿಉಲ್ಲಾ ಎಂ.ಎ ಸಿಲುಕಿಕೊಂಡಿದ್ದರು, ಈ ವಿಚಾರವನ್ನ ಜಬಿಉಲ್ಲಾ ಸಂಭದೀಕರು ಶಾಸಕರ ಗಮನಕ್ಕೆ ತಂದಿದ್ದು ಶಾಸಕರು ದೆಹಲಿಯಲ್ಲಿ ಇರುವಂತಹ ಸಂಬಂಧ ಇಲಾಖೆ ಅಧಿಕಾರಿಗಳಿಗೆ ಸಂಪರ್ಕಿಸಿ ಯುವಕನನ್ನ ರಕ್ಷಣೆ ಮಾಡಿಸಿದ್ದಾರೆ.

ಯುದ್ಧದ ನಡುವೆ ಸಿಕ್ಕಿಕೊಂಡ  ಜಬಿಉಲ್ಲಾ ಎಂ.ಎ ಅವರಿಗೆ ಚಿತ್ರದುರ್ಗ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ಫೋನ್ ಮೂಲಕ ಸಂಪರ್ಕಿಸಿ ಯೋಗ ಕ್ಷೇಮವನ್ನು ವಿಚಾರಿಸಿ ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಕರೆಸಿ, ಬೆಂಗಳೂರು ಮೂಲಕ ತನ್ನ ತಾಯ್ನಾಡು ಚಿತ್ರದುರ್ಗ ಜಿಲ್ಲೆಗೆ ಯುವಕನನ್ನ ಕರೆ ತಂದಿದ್ದಾರೆ.

ಚಿತ್ರದುರ್ಗ ಜಿಲ್ಲೆ ವ್ಯಕ್ತಿ ಜಬಿಉಲ್ಲಾ ಎಂ.ಎ  ಅವರು ಇಸ್ರೇಲ್ ನಲ್ಲಿ ಎಂಎಸ್ಸಿ ( ಪರಿಸರ ಸೂಕ್ಷ್ಮ ಜೀವವಿಜ್ಞಾನ) ವಿದ್ಯಾಭ್ಯಾಸಕ್ಕೆ ತೆರಳಿದ್ದರು, ಈ ನಡುವೆ ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದ್ದು, ಭಾರತೀಯ ಪ್ರಜೆಗಳನ್ನು ಭಾರತ ಸರ್ಕಾರ ರಕ್ಷಣೆ ಮಾಡಿ ದೆಹಲಿಗೆ ಕರೆತರಲಾಗಿತ್ತು, ಇದರಲ್ಲಿ ನನ್ನನು ಕೂಡ ದೆಹಲಿಯ ಕರ್ನಾಟಕ ಭವನದಲ್ಲಿ ಇರಿಸಲಾಗಿತ್ತು,  ದೆಹಲಿಯಿಂದ ಬೆಂಗಳೂರಿಗೆ ಬರುವುದಕ್ಕೆ ಹಣ ನನ್ನ ಬಳಿ ಇರಲಿಲ್ಲ, ನನ್ನ ಅದೃಷ್ಟಕ್ಕೆ ಶಾಸಕರ ನನಗೆ ಕಾಲ್ ಮಾಡಿ ನನ್ನ ಯೋಗ ಕ್ಷೇಮವನ್ನು ವಿಚಾರಿಸಿ ತಮ್ಮ ಸ್ವಂತ ಖರ್ಚಿನಲ್ಲೇ ದೆಹಲಿಯಿಂದ ಬೆಂಗಳೂರುವರೆಗೆ ವಿಮಾನದಲ್ಲಿ ಬರುವುದಕ್ಕೆ ವ್ಯವಸ್ಥೆ ಹಾಗೂ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ  ನನ್ನನ್ನು ಕರೆಸಿಕೊಂಡಿದ್ದಾರೆ ಅವರಿಗೆ ಅನಂತ ಅನಂತ ಧನ್ಯವಾದಗಳು ಎಂದು ಜಬಿಉಲ್ಲಾ ಎಂ.ಎ ತಿಳಿಸಿದ್ದಾರೆ.

Leave a Reply

Your email address will not be published. Required fields are marked *