MPL 2023: ಹೊಸ ಲೀಗ್​ನಲ್ಲಿ ಕೇದಾರ್ ಜಾಧವ್ ಐಕಾನ್ ಪ್ಲೇಯರ್

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​(MCA) ಆಯೋಜಿಸುತ್ತಿರುವ ಹೊಸ ಟೂರ್ನಿಗೆ​ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ ಎಂದು ಹೆಸರಿಡಲಾಗಿದೆ. ಈ ಲೀಗ್​ನಲ್ಲಿ ಒಟ್ಟು 6 ನಗರಗಳನ್ನು ಪ್ರತಿನಿಧಿಸುವ ಆರು ತಂಡಗಳನ್ನು ಘೋಷಿಸಲಾಗಿದೆ.ಅದರಂತೆ ಪುಣೆ, ಕೊಲ್ಲಾಪುರ, ನಾಸಿಕ್, ಸಂಭಾಜಿನಗರ್, ರತ್ನಗಿರಿ ಹಾಗೂ ಸೋಲಾಪುರ್ ತಂಡಗಳು ಮಹಾರಾಷ್ಟ್ರ ಪ್ರೀಮಿಯರ್ ಲೀಗ್​ನಲ್ಲಿ ಕಣಕ್ಕಿಳಿಯಲಿದೆ.ಈ ಆರು ತಂಡಗಳಿಗೆ ಐಕಾನ್ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಸಿಎಸ್​ಕೆ ತಂಡದ ಸ್ಟಾರ್ ಆಟಗಾರ ರುತುರಾಜ್ ಗಾಯಕ್ವಾಡ್ ಪುಣೆ ತಂಡವನ್ನು ಮುನ್ನಡೆಸಲಿದ್ದಾರೆ.ಹಾಗೆಯೇ ನಾಸಿಕ್ ತಂಡದಲ್ಲಿ ಐಕಾನ್ ಆಟಗಾರನಾಗಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಟಗಾರ ರಾಹುಲ್ ತ್ರಿಪಾಠಿ ಕಾಣಿಸಿಕೊಂಡಿದ್ದಾರೆ.ಇನ್ನು ರತ್ನಗಿರಿ ತಂಡದ ಐಕಾನ್ ಪ್ಲೇಯರ್ ಆಗಿ ಮಹಾರಾಷ್ಟ್ರದ ಅನುಭವಿ ಆಟಗಾರ ಅಝಿಂ ಖಾಝಿ ಆಯ್ಕೆಯಾಗಿದ್ದಾರೆ. ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ವಿಕ್ಕಿ ಒಸ್ತ್ವಾಲ್ ಸೋಲಾಪುರ್ ತಂಡದ ಐಕಾನ್ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ.ಹಾಗೆಯೇ ಆರ್​ಸಿಬಿ ತಂಡದ ಹಿರಿಯ ಆಟಗಾರ ಕೇದಾರ್ ಜಾಧವ್ ಅವರನ್ನು ಕೊಲ್ಲಾಪುರ ತಂಡದ ಐಕಾನ್ ಪ್ಲೇಯರ್ ಆಗಿ ಆಯ್ಕೆ ಮಾಡಲಾಗಿದೆ.ಈ ಟೂರ್ನಿಯು ಜೂನ್ 15 ರಂದು ಪ್ರಾರಂಭವಾಗಲಿದ್ದು, ಎಲ್ಲಾ ಪಂದ್ಯಗಳು ಪುಣೆಯ ಹೊರವಲಯದಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಮೈದಾನದಲ್ಲಿ ನಡೆಯಲಿವೆ.

source https://tv9kannada.com/photo-gallery/cricket-photos/maharashtra-premier-league-icon-players-list-kannada-news-zp-594974.html

Leave a Reply

Your email address will not be published. Required fields are marked *