
ಶಬರಿ ಮಲೆಗೆ ಹೋಗುವ ಅಯ್ಯಪ್ಪ ಮಾಲಾಧಾರಿಗಳು ಕಾಲ್ನಡಿಗೆಯಲ್ಲಿ ದರ್ಶನಕ್ಕೆ ಹೋಗುವವರು ಇಷ್ಟವಾದ ಸ್ಟಾರ್ ಹಾಗೂ ರಾಜಕಾರಣಿಗಳ ಫೋಟೋ ತೆಗೆದುಕೊಂಡು ಹೋಗುವುದು ವಾಡಿಕೆ. ಇತ್ತಿಚೆಗೆ ಅಪ್ಪು ಮತ್ತು ರಾಜ್ಕುಮಾರ್ ಅವರ ಫೋಟೋಗಳನ್ನು ತೆಗೆದುಕೊಂಡು ಹೋಗಿದ್ದರು. ಜೊತೆಗೆ ಕುಮಾರಣ್ಣನೇ ಈ ಬಾರಿ ಮುಖ್ಯಮಂತ್ರಿಯಾಗಬೇಕು ಎಂದು ಅಭಿಮಾನಿಗಳು ಮಾಲೆ ಧರಿಸಿದ ಬಳಿಕ, ಅವರ ಫೋಟೋ ಹಿಡಿದು ಪಾದಯಾತ್ರೆ ಹೊರಟಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕೇರಳ ಹೈಕೋರ್ಟ್ ಸೂಚನೆಯನ್ನು ನೀಡಿದೆ. ಶಬರಿಮಲೆಗೆ ಬರುವವರು ಸ್ಟಾರ್ ಹಾಗೂ ರಾಜಕಾರಣಿಗಳ ಫೋಟೋಗಳನ್ನು ತರುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಯಾತ್ರಾರ್ಥಿಗಳು ಸೆಲೆಬ್ರೆಟಿಗಳು ಹಾಗೂ ರಾಜಕಾರಣಿಗಳ ಪೋಸ್ಟರ್ ತೆಗೆದುಕೊಂಡು ಹೋಗುವಂತಿಲ್ಲ. ದೇವರನ್ನು ಪೂಜಿಸುವ ಹಕ್ಕು ಸಂಪ್ರದಾಯದಂತೆ ಇರಬೇಕು.
ಎಲ್ಲಾ ಭಕ್ತಾಧಿಗಳು ಶಬರಿಮಲೆ ಸಂಪ್ರದಾಯಕ್ಕೆ ಅನುಗುಣವಾಗಿ ದರ್ಶನ ಪಡೆಯಬೇಕು. ಶಬರಿಮಲೆ ಆವರಣದಲ್ಲಿ ಡ್ರಮ್ಮರ್ ಅಥವಾ ಬೇರೆ ಸಂಗೀತ ಉಪಕರಣವನ್ನು ಬಳಸುವಂತಿಲ್ಲ ಎಂದು ಕೂಡ ಕೇರಳ ಹೈಕೋರ್ಟ್ ಸೂಚನೆ ನೀಡಿದೆ.
The post ಶಬರಿಮಲೆಗೆ ಸಂಬಂಧಿಸಿದಂತೆ ಮಹತ್ವದ ಆದೇಶ ಹೊರಡಿಸಿದ ಕೇರಳ ಹೈಕೋರ್ಟ್..! first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/zfn5TWH
via IFTTT