Signs of Kidney Problems: ಕಿಡ್ನಿ ವೈಫಲ್ಯದಿಂದ ದೇಹದ ಈ ಐದು ಭಾಗಗಳಲ್ಲಿ ತುಂಬಾ ನೋವು ಕಂಡುಬರುತ್ತದೆ. ಹಾಗಾದ್ರೆ, ಈ ಭಾಗಗಳು ಯಾವುವು? ಈ ನೋವನ್ನು ತಪ್ಪಿಸುವುದು ಹೇಗೆ ಎಂಬುದರ ಬಗ್ಗೆ ತಜ್ಞರು ತಿಳಿಸಿದ್ದಾರೆ.

Signs of Kidney Problems: ಇಂದಿನ ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯ ಬಗ್ಗೆ ಅಸಡ್ಡೆ ತೋರುವುದರಿಂದ ಅನೇಕ ಜನರು ವಿವಿಧ ರೀತಿಯ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನರು ಬಿಪಿ ಹಾಗೂ ಮಧುಮೇಹದಂತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ಹಲವು ಜನರಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಬಹಳ ಸಣ್ಣ ಪ್ರಮಾಣದಲ್ಲಿ ಸಂಭವಿಸುವ ಈ ಸಮಸ್ಯೆಯು ಸಾಮಾನ್ಯವಾಗಿ ಜನರನ್ನು ಹೆಚ್ಚು ತೊಂದರೆಗೊಳಿಸುವುದಿಲ್ಲ. ಕೆಲವು ತೀವ್ರತರವಾದ ಪ್ರಕರಣಗಳಲ್ಲಿ ನೋವು ಅಸಹನೀಯವಾಗಿರುತ್ತದೆ.
ಕಿಡ್ನಿಯಲ್ಲಿ ಯಾವುದೇ ಸಮಸ್ಯೆ ಉಂಟಾದರೆ ಅದರ ಲಕ್ಷಣಗಳು ಮೊದಲು ದೇಹದಲ್ಲಿ ನೋವಿನ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಭಾಗಗಳಲ್ಲಿ ನಿಮಗೆ ಇದ್ದಕ್ಕಿದ್ದಂತೆ ತೀವ್ರವಾದ ನೋವು ಕಂಡುಬಂದರೆ, ಜಾಗರೂಕರಾಗಿರಿ ಮತ್ತು ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ವೈದ್ಯಕೀಯ ತಜ್ಞರು ಸಲಹೆ ನೀಡುತ್ತಾರೆ.

ಕಿಡ್ನಿ
ಮೂತ್ರಪಿಂಡವು ದೇಹದ ಪ್ರಮುಖ ಭಾಗವಾಗಿದೆ. ಇದು ದೇಹದಲ್ಲಿರುವ ಕೊಳೆ ಮತ್ತು ವಿಷಕಾರಿ ಅಂಶಗಳನ್ನು ತೆಗೆದು ರಕ್ತವನ್ನು ಶುದ್ಧೀಕರಿಸುವ ಕೆಲಸ ಮಾಡುತ್ತದೆ. ಆದರೆ, ಕಿಡ್ನಿಯಲ್ಲಿ ಸಮಸ್ಯೆ ಉಂಟಾದಾಗ ದೇಹದ ಇತರ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ವಿಷಯಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವುದು ಬಹುಮುಖ್ಯವಾಗಿದೆ.
ದೇಹವು ಆರೋಗ್ಯವಾಗಿರಬೇಕಾದರೆ ನಮ್ಮ ಮೂತ್ರಪಿಂಡಗಳು ಆರೋಗ್ಯಕರವಾಗಿರುವುದು ಮುಖ್ಯವಾಗಿದೆ. ಮೂತ್ರಪಿಂಡದ ವೈಫಲ್ಯದ ನಂತರ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜನರು ಸಾಮಾನ್ಯವಾಗಿ ಈ ಲಕ್ಷಣಗಳನ್ನು ಸಣ್ಣ ನೋವು ಎಂದು ಪರಿಗಣಿಸಿ ನಿರ್ಲಕ್ಷ್ಯ ಮಾಡುತ್ತಾರೆ. ಸಕಾಲಿಕ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸದಿದ್ದರೆ, ಸಮಸ್ಯೆ ಗಂಭೀರವಾಗುತ್ತದೆ.
ಕಿಡ್ನಿ ವೈಫಲ್ಯದಿಂದ ದೇಹದ ಈ 5 ಭಾಗಗಳಲ್ಲಿ ನೋವು:
ಸೊಂಟ ನೋವು
1. ಸೊಂಟದ ಭಾಗದಲ್ಲಿ ನೋವು: ಕಿಡ್ನಿಯಲ್ಲಿ ಯಾವುದೇ ಸಮಸ್ಯೆ ಉಂಟಾದರೆ, ನೋವು ಮೊದಲು ಬೆನ್ನಿನ ಕೆಳಭಾಗದಲ್ಲಿ ಕಂಡುಬರುತ್ತದೆ. ಈ ನೋವು ಸಾಮಾನ್ಯವಾಗಿ ಕೆಳ ಬೆನ್ನಿನಲ್ಲಿ ಅಂದ್ರೆ, ಪಕ್ಕೆಲುಬುಗಳ ಕೆಳಗೆ, ಮೂತ್ರಪಿಂಡಗಳು ಇರುತ್ತವೆ. ಮೂತ್ರಪಿಂಡದಲ್ಲಿ ಊತ ಅಥವಾ ಯಾವುದೇ ಸಮಸ್ಯೆ ಇದ್ದರೆ ನಂತರ, ಈ ನೋವು ತುಂಬಾ ತೀವ್ರವಾಗುತ್ತದೆ.
2. ತೊಡೆಸಂದು ಪ್ರದೇಶದಲ್ಲಿ ನೋವು: ಮೂತ್ರಪಿಂಡದಲ್ಲಿ ಊತ ಇಲ್ಲವೇ ಕಲ್ಲುಗಳಿದ್ದರೆ, ತೊಡೆಸಂದು ಪ್ರದೇಶದಲ್ಲಿ ನೋವು ಕಾಣಿಸುತ್ತದೆ. ಈ ನೋವು ದೇಹದ ಎರಡೂ ಬದಿಗಳಲ್ಲಿ ಪಕ್ಕೆಲುಬುಗಳ ಸುತ್ತಲೂ ಹರಡುತ್ತದೆ. ಕಿಡ್ನಿಯಲ್ಲಿ ಗಂಭೀರ ಸಮಸ್ಯೆಯಿದ್ದರೆ ಈ ನೋವು ದೇಹದ ಒಂದಕ್ಕಿಂತ ಹೆಚ್ಚು ಭಾಗಗಳಿಗೆ ಹರಡುತ್ತದೆ.
3. ಹೊಟ್ಟೆ ನೋವು: ಕೆಲವು ಕಿಡ್ನಿ ಸಮಸ್ಯೆಯಿಂದಲೂ ಹೊಟ್ಟೆ ನೋವು ಬರುತ್ತದೆ. ಮೂತ್ರಪಿಂಡದ ಕಾರ್ಯದ ಮೇಲೆ ಪರಿಣಾಮ ಬೀರಿದರೆ ಅಥವಾ ಊತ ಇದ್ದರೆ ನೀವು ತೀವ್ರವಾದ ಹೊಟ್ಟೆ ನೋವು ಅನುಭವಿಸಬಹುದು. ಕೆಲವೊಮ್ಮೆ ಈ ನೋವು ಕಿಡ್ನಿ ವೈಫಲ್ಯದ ಸಂಕೇತವೂ ಆಗಿರಬಹುದು.

ಹೊಟ್ಟೆ ನೋವು
4. ವೃಷಣಗಳಲ್ಲಿ ನೋವು: ಮೂತ್ರಪಿಂಡದ ಕಲ್ಲುಗಳು ಇದ್ದರೆ, ನೋವು ಕೆಲವೊಮ್ಮೆ ವೃಷಣ ಪ್ರದೇಶಕ್ಕೆ ಹರಡುತ್ತದೆ. ಈ ನೋವು ತೀವ್ರವಾಗಿರುತ್ತದೆ. ವಿಶೇಷವಾಗಿ ಕಲ್ಲು ಮೂತ್ರನಾಳದ ಮೂಲಕ ಹಾದುಹೋದಾಗ. ಈ ನೋವು ಇನ್ನಷ್ಟು ತೀವ್ರವಾಗುತ್ತದೆ.
5. ತೊಡೆಯಲ್ಲಿ ನೋವು: ಮೂತ್ರಪಿಂಡದ ತೊಂದರೆಗಳಿಂದ ಉಂಟಾಗುವ ನೋವು ತೊಡೆಯವರೆಗೂ ಹರಡುತ್ತದೆ. ಈ ನೋವು ವಿಶೇಷವಾಗಿ ಕಲ್ಲುಗಳು ಇಲ್ಲವೇ ಸೋಂಕಿನಿಂದ ಉಂಟಾಗುತ್ತದೆ. ಮೂತ್ರಪಿಂಡದ ಕಲ್ಲುಗಳು ಇದ್ದರೆ ನೋವು ತೊಡೆಯಲ್ಲಿ ಒಳಗೊಂಡಂತೆ ದೇಹದ ಕೆಳಭಾಗಕ್ಕೆ ಹರಡಬಹುದು.
ಕಿಡ್ನಿ ಆರೋಗ್ಯಕ್ಕಾಗಿ ಸಾಕಷ್ಟು ನೀರು ಕುಡಿಯಿರಿ: ಒಬ್ಬ ವ್ಯಕ್ತಿಯು ದಿನಕ್ಕೆ ಕನಿಷ್ಠ 2.7 ಲೀಟರ್ ನೀರನ್ನು ಕುಡಿಯಬೇಕು. ಇದು ಮೂತ್ರಪಿಂಡಗಳು ನಮ್ಮ ದೇಹದಿಂದ ಮೂತ್ರದ ರೂಪದಲ್ಲಿ ತ್ಯಾಜ್ಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಸೋಂಕುಗಳು ಅಥವಾ ಮೂತ್ರಪಿಂಡದ ಕಲ್ಲುಗಳನ್ನು ಉಂಟುಮಾಡುವ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಇದು ಸಹಾಯ ಮಾಡುತ್ತದೆ. ನೀರನ್ನು ಹೊರತುಪಡಿಸಿ ನಿಂಬೆ, ಕಿತ್ತಳೆ ಹಾಗೂ ಕಲ್ಲಂಗಡಿಗಳಂತಹ ಹಣ್ಣಿನ ರಸಗಳು ಮೂತ್ರಪಿಂಡದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ನಿಯಮಿತವಾಗಿ ಮೂತ್ರಪಿಂಡ ಪರೀಕ್ಷೆ ಮಾಡಿ: ಆರಂಭಿಕ ಹಂತಗಳಲ್ಲಿ ಮೂತ್ರಪಿಂಡದ ಕಾಯಿಲೆಯ ಯಾವುದೇ ಲಕ್ಷಣಗಳು ಕಾಣಿಸುವುದಿಲ್ಲ. ಆದ್ದರಿಂದ ವರ್ಷಕ್ಕೊಮ್ಮೆಯಾದರೂ ನಿಮ್ಮ ಕಿಡ್ನಿಯನ್ನು ಪರೀಕ್ಷಿಸಿಕೊಳ್ಳುವುದು ಉತ್ತಮ. ಮೂತ್ರಪಿಂಡದ ಕೆಲವು ಸಾಮಾನ್ಯ ಪರೀಕ್ಷೆಗಳಲ್ಲಿ ರಕ್ತದ ಯೂರಿಯಾ, ಮೂತ್ರದ ದಿನನಿತ್ಯದ ವಿಶ್ಲೇಷಣೆ, ಅಲ್ಟ್ರಾಸೌಂಡ್ ಕೆಯುಬಿ ಮತ್ತು ವಿವಿಧ ಪರೀಕ್ಷೆಗಳು ಸೇರಿವೆ.
ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ಪ್ರಕಾರ, ಕಿಡ್ನಿ ಉತ್ತಮ ಕಾರ್ಯನಿವರ್ಹಿಸುವ ಜೊತೆಗೆ ಫಿಟ್ ಆಗಿರಲು ನಿಯಮಿತವಾಗಿ ವ್ಯಾಯಾಮ ಮಾಡಬೇಕಾಗುತ್ತದೆ. ಇದರೊಂದಿಗೆ ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಗಳನ್ನು ತಡೆಯಲು ಸಹಾಯವಾಗುತ್ತದೆ. ವಾಕಿಂಗ್, ಓಟ, ನೃತ್ಯ, ಸೈಕ್ಲಿಂಗ್ ನಿಮ್ಮ ದೇಹವನ್ನು ಆರೋಗ್ಯಕರವಾಗಿಡಲು ಸಹಾಯಕವಾಗಬಹುದು. ಆರೋಗ್ಯಕರ ಆಹಾರ ಪದ್ಧತಿ ಅನುಸರಿಸುವುದು, ಧೂಮಪಾನ ಮಾಡದಿರುವುದು ಮುಖ್ಯವಾಗಿದೆ ಎಂದು ತಜ್ಞರು ತಿಳಿಸುತ್ತಾರೆ.
ಇತರ ಆರೋಗ್ಯ ಸ್ಥಿತಿಗಳ ಮೇಲ್ವಿಚಾರಣೆ: ಮಧುಮೇಹ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಮನಿಸುವುದರ ಮೂಲಕ ನಿಮ್ಮ ಮೂತ್ರಪಿಂಡದ ಸಮಸ್ಯೆಗಳು ಅಥವಾ ರೋಗಗಳ ಬೆಳವಣಿಗೆಯ ಅಪಾಯ ಕಡಿಮೆ ಮಾಡುತ್ತದೆ. ಭಾರತದಲ್ಲಿ ಮೂತ್ರಪಿಂಡ ವೈಫಲ್ಯಕ್ಕೆ ಮಧುಮೇಹವೇ ಮುಖ್ಯ ಕಾರಣ. ಮಧುಮೇಹ ಹೊಂದಿರುವ ಜನರಲ್ಲಿ ಮೂತ್ರಪಿಂಡದ ಹಾನಿ ಸಂಭವಿಸುತ್ತದೆ. ಏಕೆಂದರೆ ಹೆಚ್ಚಿನ ಸಕ್ಕರೆ ಮಟ್ಟವು ನಿಮ್ಮ ರಕ್ತವನ್ನು ಫಿಲ್ಟರ್ ಮಾಡಲು ನಿಮ್ಮ ಮೂತ್ರಪಿಂಡಗಳು ಹೆಚ್ಚು ಕೆಲಸ ಮಾಡಲು ಒತ್ತಾಯಿಸುತ್ತದೆ.