Kidney Health : ಅತಿಯಾದ ಸಕ್ಕರೆ, ಉಪ್ಪು ಸೇವನೆಯಿಂದ ಕಿಡ್ನಿ ಮೇಲಾಗುವ ಪರಿಣಾಮವೇನು?

ನಾವು ಏನು ಕುಡಿಯುತ್ತೇವೆ, ಏನು ತಿನ್ನುತ್ತೇವೆ ಎಲ್ಲವೂ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ನಾವು ಕೆಲವೊಮ್ಮೆ ಅದನ್ನು ಗ್ರಹಿಸಲು ವಿಫಲರಾಗುತ್ತೇವೆ. ನಮ್ಮ ದೇಹದಲ್ಲಿನ ಹುರುಳಿ ಆಕಾರದ ಚೀಲಗಳಾದ ಮೂತ್ರಪಿಂಡಗಳು (Kidney) ನಾವು ಸೇವಿಸುವ ಆಹಾರದಿಂದ ಪ್ರಭಾವಿತವಾಗಿರುವ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ನಾವು ಸೇವಿಸುವ ಆಹಾರ ಮೂತ್ರಪಿಂಡಗಳ ಅತ್ಯುತ್ತಮ ಕಾರ್ಯನಿರ್ವಹಣೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ನಮ್ಮ ದೇಹದಲ್ಲಿನ ಎಲ್ಲಾ ಖನಿಜಗಳನ್ನು ಸಮತೋಲನಗೊಳಿಸಲು ರಕ್ತದೊತ್ತಡವನ್ನು (Blood Pressure Control) ನಿಯಂತ್ರಿಸಲು ಸಹಾಯ ಮಾಡುತ್ತದೆ.

ಹೆಚ್ಚು ಉಪ್ಪು ಮತ್ತು ಸಕ್ಕರೆ ಮೂತ್ರಪಿಂಡಗಳಿಗೆ ಏಕೆ ಹಾನಿಕಾರಕ?:

ಹೆಚ್ಚು ಉಪ್ಪು, ಸಕ್ಕರೆ ಮತ್ತು ಮಾಂಸವನ್ನು ಸೇವಿಸುವುದರಿಂದ ಮೂತ್ರಪಿಂಡಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡಬಹುದು. ಇದು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ದೀರ್ಘಕಾಲದ ಕಿಡ್ನಿ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಇದರ ಬದಲು ಹಣ್ಣುಗಳು, ತರಕಾರಿಗಳು, ಧಾನ್ಯಗಳಂತಹ ಸಸ್ಯ ಆಧಾರಿತ ಆಹಾರವನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಮೂತ್ರಪಿಂಡಗಳ ಮೇಲಿನ ಹೆಚ್ಚುವರಿ ಹೊರೆಯನ್ನು ಕಡಿಮೆ ಮಾಡುತ್ತದೆ. ಈ ರೀತಿಯ ಆಹಾರವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ನಮ್ಮ ಮೂತ್ರಪಿಂಡಗಳು ಒತ್ತಡವಿಲ್ಲದೆ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ನಮ್ಮ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು ಸೋಡಿಯಂ, ಸಕ್ಕರೆ ಮತ್ತು ಪ್ರೊಟೀನ್ ಅನ್ನು ಮಿತವಾಗಿ ಸೇವನೆ ಮಾಡುವುದು ಮುಖ್ಯ. ವಿಶೇಷವಾಗಿ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಪೊಟ್ಯಾಸಿಯಮ್ ಮತ್ತು ರಂಜಕದ ಸಮತೋಲನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಸಂಸ್ಕರಿಸಿದ ಆಹಾರಗಳ ಬದಲಿಗೆ ನೈಸರ್ಗಿಕ ಆಹಾರವನ್ನು ಸೇವಿಸುವುದರಿಂದ ನಮ್ಮ ಮೂತ್ರಪಿಂಡಗಳು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ನಾವು ಸೇವಿಸುವ ಆಹಾರದಲ್ಲಿ ಹೆಚ್ಚು ಉಪ್ಪು ಅಥವಾ ಸಕ್ಕರೆ ಅಡಗಿದೆಯೇ ಎಂದು ನೋಡಲು ಯಾವಾಗಲೂ ಆಹಾರ ಉತ್ಪನ್ನಗಳ ಮೇಲೆ ಪೌಷ್ಟಿಕಾಂಶದ ಲೇಬಲ್ ಅನ್ನು ಪರಿಶೀಲಿಸಬೇಕು. ಅಲ್ಲದೆ, ಸಾಕಷ್ಟು ನೀರು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದು ನಮ್ಮ ದೇಹದಿಂದ ವಿಷವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ ಮತ್ತು ನಮ್ಮ ಮೂತ್ರಪಿಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

Source : https://tv9kannada.com/health/kidney-care-in-kannada-how-eating-too-much-salt-and-sugar-impact-your-kidney-health-sct-819052.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *