ಕಿರಿಕ್ et 11: ಕನ್ನಡದಲ್ಲಿ ಕ್ರಿಕೆಟಿಗ ಕೆ.ಎಲ್.ರಾಹುಲ್​ ಕುರಿತ ಸಿನಿಮಾ?

ಸ್ಯಾಂಡಲ್ ವುಡ್​ನಲ್ಲಿ ಕ್ರಿಕೆಟ್ ಕುರಿತಾದ ಕಿರಿಕಿ ಇಟಿ 11 ಎಂಬ ಕೆ.ಎಲ್. ರಾಹುಲ್ ಜೀವನ ಆಧರಿತರಿತ ಸಿನಿಮಾ ಸೆಟ್ಟೇರಿದೆ.

ಬಾಲಿವುಡ್​ನಲ್ಲಿ ಕ್ರೀಡೆ ಹಾಗೂ ಕ್ರೀಡಾಪಟುಗಳ ಕುರಿತ ಸಿನಿಮಾಗಳು ಆಗಾಗ ತೆರೆ ಕಾಣುತ್ತಿರುತ್ತದೆ. ಆದರೆ ಈ ಸಂಸ್ಕೃತಿ ಈಗ ಸೌತ್ ಸಿನಿಮಾ ಇಂಡಸ್ಟ್ರಿಗೂ ಕಾಲಿಟ್ಟಿದೆ.

ಸ್ಯಾಂಡಲ್‌ವುಡ್​ನಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ಜೀವನ ಆಧರಿಸಿದ ಕಿರಿಕ್ ಇಟಿ ಸಿನಿಮಾ ತೆರೆಗೆ ತರಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಕೆ.ಎಲ್. ರಾಹುಲ್ ಆಗಲಿ ಚಿತ್ರತಂಡವಾಗಲಿ ಇದು ಕೆ.ಎಲ್.ರಾಹುಲ್​ರ ಬಯೋಪಿಕ್ ಸಿನಿಮಾ ಎಂದು ಅಧಿಕೃತವಾಗಿ ಪ್ರಕಟಿಸಿಲ್ಲ.

ಕಿರಿಕ್ ಇಟಿ ಸಿನಿಮಾದಲ್ಲಿ ಕಮೇಡಿಯನ್​ ದಾನಿಶ್ ಸೇಠ್ ಹಾಗೂ ಗುಲ್ಟು ಸಿನಿಮಾ ಖ್ಯಾತಿಯ ನವೀನ್ ಶಂಕರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಮನೋಜ್ ಕುಮಾರ್ ಕಾಲಾವನನ್ ಕಥೆ ಹೆಣೆದಿದ್ದಾರೆ. ಸುಮನ್ ಕುಮಾರ್ ನಿರ್ದೇಶಿಸಲಿದ್ದಾರೆ. ಸುಮನ್ ಕುಮಾರ್ ಈ ಹಿಂದೆ ರಘುತಾತ ಚಿತ್ರ ನಿರ್ದೇಶಿಸಿದ್ದು, ವೆಬ್ ಸೀರಿಸ್ ಲೋಕದಲ್ಲಿ ಬಹಳ ಜನಪ್ರಿಯವಾಗಿರುವ The Family Man ಮತ್ತು Farzi ಕಥೆ ಹೆಣೆದಿದ್ದರು.

ಗುಲ್ಟು ಸಿನಿಮಾ ಖ್ಯಾತಿಯ ನವೀನ್ ಶಂಕರ್

ಬಡವ ರಾಸ್ಕಲ್ ಚಿತ್ರಕ್ಕೆ ಸಂಗೀತ ನೀಡಿದ್ದ ವಾಸುಕಿ ವೈಭವ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಕಾರ್ತಿಕ್, ವಿಜಯ್ ಸುಬ್ರಮಣ್ಯಂ ಮತ್ತು ಯೋಗಿ ಜಿ. ರಾಜ್ ನಿರ್ಮಿಸಲಿದ್ದಾರೆ. ಕೆಆರ್​ಜಿ ಸ್ಟುಡಿಯೋಸ್‌ 6 ವರ್ಷಗಳ ಚಿತ್ರರಂಗದ ಪಯಣದಲ್ಲಿ ಇದು 4ನೇ ಚಿತ್ರ ನಿರ್ಮಾಣ. ಕಿರಿಕ್ et 11 ಚಿತ್ರೀಕರಣ ಈ ವರ್ಷ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಸಮಯದಲ್ಲೇ ಶುರುವಾಗಲಿದೆ.

ಕಿರಿಕ್ et 11 ಸಿನಿಮಾ ಕ್ರಿಕೆಟ್‌ನತ್ತ ಆಸಕ್ತಿ ಹೊಂದಿರುವ, ಸವಾಲಿನ ಸಂದರ್ಭಗಳನ್ನು ಎದುರಿಸುವ ಮೂಲಕ ತಾವು ಅಂದುಕೊಂಡಿದ್ದನ್ನು ಸಾಧಿಸುವ ವ್ಯಕ್ತಿಗಳ ಗುಂಪಿನ ಜೀವನ ಕುರಿತ ಕಥಾಹಂದರ ಒಳಗೊಂಡಿದೆ. ಚಲನಚಿತ್ರವು ಕ್ರಿಕೆಟ್ ಸುತ್ತಲಿನ ಉತ್ಸಾಹ ಮತ್ತು ಆಸಕ್ತಿ ಸೆರೆಹಿಡಿಯುವ ಗುರಿ ಹೊಂದಿದೆ.

Source : https://m.dailyhunt.in/news/india/kannada/etvbhar9348944527258-epaper-etvbhkn/kirik+et+11+kannadadalli+kriketiga+ke+el+raahul+kurita+sinima+-newsid-n513042220?listname=newspaperLanding&topic=bangaloreurban&index=12&topicIndex=38&mode=pwa&action=click

Leave a Reply

Your email address will not be published. Required fields are marked *