

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು (IPL 2023) ಎರಡು ಮಹತ್ವದ ಪಂದ್ಯಗಳನ್ನು ಆಯೋಜಿಸಲಾಗಿದೆ. ಮೊದಲ ಮ್ಯಾಚ್ನಲ್ಲಿ ನಿತೀಶ್ ರಾಣ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಗುಜರಾತ್ ಟೈಟಾನ್ಸ್ (KKR vs GT) ತಂಡ ಸೆಣೆಸಾಟ ನಡೆಸುತ್ತಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದೆ. ಕೆಕೆಆರ್ ಆಡಿದ 8 ಪಂದ್ಯಗಳಲ್ಲಿ 3 ಗೆಲುವು, 5 ಸೋಲು ಕಂಡು 6 ಅಂಕದೊಂದಿಗೆ ಏಳನೇ ಸ್ಥಾನದಲ್ಲಿದೆ. ಇತ್ತ ಜಿಟಿ ಆಡಿದ 8 ಪಂದ್ಯಗಳಲ್ಲಿ 5 ಗೆಲುವು, 3 ಸೋಲು ಕಂಡು 10 ಅಂಕದೊಂದಿಗೆ ತೃತೀಯ ಸ್ಥಾನದಲ್ಲಿದೆ. ಪಾಯಿಂಟ್ ಟೇಬಲ್ನಲ್ಲಿ ಮೇಲಕ್ಕೇರಲು ಉಭಯ ತಂಡಗಳಿಗೆ ಇಂದಿನ ಪಂದ್ಯ ಮುಖ್ಯವಾಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಎನ್ ಜಗದೀಸನ್ (ವಿಕೆಟ್ ಕೀಪರ್), ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಡೇವಿಡ್ ವೈಸ್, ವೈಭವ್ ಅರೋರಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ, ಸುಯಶ್ ಶರ್ಮಾ, ಮನದೀಪ್ ಸಿಂಗ್, ಲಿಟ್ಟನ್ ದಾಸ್, ಅನುಕುಲ್ ರಾಯ್, ಕುಲ್ವಂತ್ ಖೆಜ್ರೋಲಿಯಾ, ಟಿಮ್ ಸೌಥಿ, ಲಾಕಿ ಫರ್ಗುಸನ್, ಶಾರ್ದೂಲ್ ಠಾಕೂರ್, ರಹಮಾನುಲ್ಲಾ ಗುರ್ಬಾಜ್, ಹರ್ಷಿತ್ ರಾಣಾ, ಆರ್ಯ ದೇಸಾಯಿ.
ಗುಜರಾತ್ ಟೈಟಾನ್ಸ್ ತಂಡ: ವೃದ್ಧಿಮಾನ್ ಸಾಹ, ಶುಭ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ರಾಹುಲ್ ತೇವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಜೋಶ್ವಾ ಲಿಟಲ್, ಯಶ್ ದಯಾಳ್, ಅಲ್ಜರಿ ಜೋಸೆಫ್, ಜಯಂತ್ ಯಾದವ್, ಮೋಹಿತ್ ಶರ್ಮಾ, ಶ್ರೀಕರ್ ಭರತ್, ಅಭಿನವ್ ಮನೋಹರ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ಒಡಿಯನ್ ಸ್ಮಿತ್, ಡೇವಿಡ್ ಮಿಲ್ಲರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಶಿವಂ ಮಾವಿ, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್.