KKR vs SRH Highlights, IPL 2024: ಗೆಲ್ಲುವ ಪಂದ್ಯ ಕೈಚೆಲ್ಲಿದ ಹೈದರಾಬಾದ್​

Kolkata Knight Riders vs Sunrisers Hyderabad Highlights in Kannada: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್ 2024) 17 ನೇ ಸೀಸನ್‌ನ ಮೂರನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 4 ರನ್‌ಗಳಿಂದ ಸೋಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿನ ಆರಂಭ ಪಡೆದುಕೊಂಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2024) 17 ನೇ ಸೀಸನ್‌ನ ಮೂರನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 4 ರನ್‌ಗಳಿಂದ ಸೋಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders vs Sunrisers Hyderabad) ಗೆಲುವಿನ ಆರಂಭ ಪಡೆದುಕೊಂಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿತು. ಉತ್ತರವಾಗಿ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 204 ರನ್ ಗಳಿಸಲಷ್ಟೇ ಶಕ್ತವಾಗಿ 4 ರನ್​​ಗಳಿಂದ ಸೋಲೊಪ್ಪಿಕೊಂಡಿತು. ಹೈದರಾಬಾದ್ ಪರ ಏಕಾಂಗಿ ಹೋರಾಟ ನಡೆಸಿದ ಹೆನ್ರಿಚ್ ಕ್ಲಾಸೆನ್ ಪಂದ್ಯದ ಹೀರೋ ಎನಿಸಿಕೊಂಡರು.

209 ರನ್‌ಗಳ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ಉತ್ತಮ ಆರಂಭ ಪಡೆದಿತ್ತು. ಆರಂಭಿಕರಾದ ಮಯಾಂಕ್ ಅಗರ್ವಾಲ್ ಮತ್ತು ಅಭಿಷೇಕ್ ಶರ್ಮಾ ಮೊದಲ ವಿಕೆಟ್‌ಗೆ 60 ರನ್ ಸೇರಿಸಿದರು. ಹರ್ಷಿತ್ ರಾಣಾ ಎಸೆತದಲ್ಲಿ ಮಯಾಂಕ್ 21 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್‌ ಸಹಿತ 32 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ತಂಡದ ಮೊತ್ತ 71 ರನ್​ಗಳಿರುವಾಗ ಅಭಿಷೇಕ್ ಶರ್ಮಾ ರೂಪದಲ್ಲಿ ಎರಡನೇ ವಿಕೆಟ್ ಪತನವಾಯಿತು

ಕುಸಿದ ಮಧ್ಯಮ ಕ್ರಮಾಂಕ

ರಾಹುಲ್ ತ್ರಿಪಾಠಿ ಮತ್ತು ಏಡನ್ ಮಾರ್ಕ್ರಾಮ್ ನಡುವೆ ಮೂರನೇ ವಿಕೆಟ್‌ಗೆ 36 ರನ್‌ಗಳ ಜೊತೆಯಾಟವಿತ್ತು. ವರುಣ್ ಚಕ್ರವರ್ತಿ 12ನೇ ಓವರ್ ನಲ್ಲಿ ಮಾರ್ಕ್ರಾಮ್ ವಿಕೆಟ್ ಪಡೆಯುವ ಈ ಜೊತೆಯಾಟವನ್ನೂ ಮುರಿದರು. ಮುಂದಿನ ಓವರ್‌ನಲ್ಲಿ ಸುನಿಲ್ ನರೈನ್ ರಾಹುಲ್ ತ್ರಿಪಾಠಿ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ತ್ರಿಪಾಠಿ 20 ಎಸೆತಗಳಲ್ಲಿ 1 ಸಿಕ್ಸರ್ ನೆರವಿನಿಂದ 20 ರನ್ ಗಳಿಸಿದರು. 17ನೇ ಓವರ್​ನಲ್ಲಿ ಹೈದರಾಬಾದ್ ತಂಡದ 5ನೇ ವಿಕೆಟ್ ಅಬ್ದುಲ್ ಸಮದ್ ರೂಪದಲ್ಲಿ ಪತನವಾಯಿತು.

ಶಹಬಾಜ್- ಕ್ಲಾಸೆನ್ ಹೋರಾಟ ವ್ಯರ್ಥ

ಶಹಬಾಜ್ ಅಹ್ಮದ್ ಮತ್ತು ಹೆನ್ರಿಚ್ ಕ್ಲಾಸೆನ್ ಆರನೇ ವಿಕೆಟ್‌ಗೆ 58 ರನ್‌ಗಳ ಜೊತೆಯಾಟ ನೀಡಿದರು. ಕೊನೆಯ ಓವರ್‌ನಲ್ಲಿ ಅಹ್ಮದ್ ಸಿಕ್ಸರ್ ಹೊಡೆಯುವ ಯತ್ನದಲ್ಲಿ ವಿಕೆಟ್ ಒಪ್ಪಿಸಿದರು. ಇಲ್ಲಿಂದ ಪಂದ್ಯ ಹೈದರಾಬಾದ್​​ ಕೈಯಿಂದ ಜಾರಿತು. ಅದೇ ಓವರ್‌ನಲ್ಲಿ ವಿಕೆಟ್‌ಕೀಪರ್ ಹೆನ್ರಿಚ್ ಕ್ಲಾಸೆನ್ ಕೂಡ ತಮ್ಮ ವಿಕೆಟ್ ಕಳೆದುಕೊಂಡರು. ಹೈದರಾಬಾದ್ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದ ಕ್ಲಾಸೆನ್ 29 ಎಸೆತಗಳಲ್ಲಿ 63 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೋಲ್ಕತ್ತಾ ಪರ ಹರ್ಷಿತ್ ರಾಣಾ 3, ಆಂಡ್ರೆ ರಸೆಲ್ 2 ಮತ್ತು ವರುಣ್ ಚಕ್ರವರ್ತಿ, ಸುನಿಲ್ ನರೈನ್ ತಲಾ 1 ವಿಕೆಟ್ ಪಡೆದರು.

208 ರನ್ ಬಾರಿಸಿದ್ದ ಕೆಕೆಆರ್

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 208 ರನ್ ಗಳಿಸಿತ್ತು. ತಂಡದ ಪರ ಆಂಡ್ರೆ ರಸೆಲ್ 25 ಎಸೆತಗಳಲ್ಲಿ 64 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರಲ್ಲದೆ ಫಿಲಿಪ್ ಸಾಲ್ಟ್ (54) ಕೂಡ ಅರ್ಧಶತಕ ಗಳಿಸಿದರು. ರಮಣದೀಪ್ ಸಿಂಗ್ 35 ರನ್ ಮತ್ತು ರಿಂಕು ಸಿಂಗ್ 23 ರನ್​ಗಳ ಕೊಡುಗೆ ನೀಡಿದರು. ಹೈದರಾಬಾದ್‌ ಪರ ಟಿ ನಟರಾಜನ್ 3 ಮತ್ತು ಮಯಾಂಕ್ ಮಾರ್ಕಾಂಡೆ 2 ವಿಕೆಟ್ ಪಡೆದರು.

Source: https://tv9kannada.com/sports/cricket-news/dc-vs-pbks-live-score-ipl-2024-match-scorecard-online-at-eden-gardens-kolkata-in-kannada-psr-804532.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *