Rose Water Health benefits : ಪ್ರತಿದಿನ ರೋಸ್ ವಾಟರ್‌ನಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದರಲ್ಲಿರುವ ಅಂಶಗಳು ಒತ್ತಡವನ್ನು ಸುಲಭವಾಗಿ ನಿಯಂತ್ರಿಸುತ್ತವೆ. ಆದ್ದರಿಂದ ಪ್ರತಿದಿನ ಈ ನೀರನ್ನು ಬಳಸುವುದರಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
![](https://samagrasuddi.co.in/wp-content/uploads/2023/11/image-17-300x169.png)
Rose Water : ಚರ್ಮವನ್ನು ರಕ್ಷಿಸುವ ಸಲುವಾಗಿ, ಅನೇಕ ಜನರು ರೋಸ್ ವಾಟರ್ ಸೌಂದರ್ಯವರ್ಧಕವನ್ನು ಬಳಸುತ್ತಾರೆ. ರೋಸ್ ವಾಟರ್ ನಲ್ಲಿ ತ್ವಚೆಗೆ ಅಗತ್ಯವಿರುವ ವಿವಿಧ ಪೋಷಕಾಂಶಗಳು ಇರುವುದರಿಂದ ಇದನ್ನು ಪ್ರತಿದಿನ ತ್ವಚೆಯ ಮೇಲೆ ಹಚ್ಚುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಇದಲ್ಲದೆ, ಚರ್ಮವು ಮೃದು ಮತ್ತು ಪ್ರಕಾಶಮಾನವಾಗಿರುತ್ತದೆ. ಆದರೆ ರೋಸ್ ವಾಟರ್ ಚರ್ಮಕ್ಕೆ ಮಾತ್ರವಲ್ಲದೇ ದೇಹಕ್ಕೂ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.
ಹೌದು.. ಚಳಿಗಾಲದ ಕಾರಣ ತೇವಾಂಶ ಹೆಚ್ಚಾಗುವುದರಿಂದ ಅನೇಕರಲ್ಲಿ ಕಣ್ಣಿನ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ತೇವಾಂಶದಿಂದಾಗಿ ಕೆಲವರಿಗೆ ಕಣ್ಣಿನ ತುರಿಕೆ, ಕಣ್ಣು ಕೆಂಪಾಗುವುದು ಸೇರಿದಂತೆ ಮುಂತಾದ ಸಮಸ್ಯೆಗಳಿರುತ್ತವೆ. ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರತಿದಿನ ರೋಸ್ ವಾಟರ್ ಅನ್ನು ಕಣ್ಣಿಗೆ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ರೋಸ್ ವಾಟರ್‌ನಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಸೆಪ್ಟಿಕ್ ಗುಣಲಕ್ಷಣಗಳು ಗಾಯಗಳನ್ನು ಗುಣಪಡಿಸಲು ಸಹ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಪ್ರತಿದಿನ ಈ ನೀರಿನಿಂದ ಗಾಯಗಳನ್ನು ತೊಳೆದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಇದಲ್ಲದೇ ನೋವಿನಿಂದಲೂ ಸುಲಭವಾಗಿ ಪಾರಾಗಬಹದು ಎನ್ನುತ್ತಾರೆ ಆರೋಗ್ಯ ತಜ್ಞರು. ಇದಲ್ಲದೆ, ಪ್ರತಿದಿನ ರೋಸ್ ವಾಟರ್ ಬಳಸುವುದರಿಂದ ಮಾನಸಿಕ ಸ್ಥಿತಿ ಸುಧಾರಿಸುತ್ತದೆ.
ಆಗಾಗ್ಗೆ ಖಿನ್ನತೆಯ ಒತ್ತಡದಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಈ ರೋಸ್ ವಾಟರ್ ಅನ್ನು ಪ್ರತಿದಿನ ಬಳಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಆಗಾಗ್ಗೆ ಉಸಿರಾಟದ ತೊಂದರೆ ಇರುವವರಿಗೆ ಈ ನೀರು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ. ಇದು ತಲೆನೋವನ್ನು ಕಡಿಮೆ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಪದೇ ಪದೇ ಮೈಗ್ರೇನ್ ಪೀಡಿತರು ಪ್ರತಿದಿನ ಇದರ ವಾಸನೆಯಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.
ಸೂಚನೆ : ಈ ಮೇಲೆ ನೀಡಿರುವ ಮಾಹಿತಿ ಮನೆಮದ್ದು ಆಧಾರಿತವಾಗಿದ್ದು, ಸಮಗ್ರ ಸುದ್ದಿ ಇದನ್ನು ಸ್ಪಷ್ಟಪಡಿಸುವುದಿಲ್ಲ. ಸಲಹೆಗಳನ್ನು ಪಾಲಿಸುವ ಮೊದಲು ವೈಧ್ಯರನ್ನು ಸಂಪರ್ಕಿಸುವುದು ಉತ್ತಮ.
Source : https://zeenews.india.com/kannada/health/rose-water-for-headache-and-stress-and-migraines-168195
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1