ಕೋಟೆ ಪೊಲೀಸ್ ಠಾಣೆ ಪೊಲೀಸರ ಕಾರ್ಯಾಚರಣೆ : ನಕಲಿ ದಾಖಲೆ ಸೃಷ್ಟಿಸಿ ನೌಕರಿ ಪಡೆದ ಮತ್ತು ಸಹಕರಿಸಿದ ಆರೋಪಿಗಳ ಬಂಧನ

ಚಿತ್ರದುರ್ಗ : ನಕಲಿ ದಾಖಲೆ ಸೃಷ್ಟಿಸಿ ಸರ್ಕಾರ ಮತ್ತು ಬೆವಿಕಂ(ಬೆಸ್ಕಾಂ) ಗೆ ವಂಚನೆ ಮಾಡಿದ ಆರೋಪದ ಮೇಲೆ ಫೈಜಾನ್ ಮುಜಾಹಿದ್.ಸಿ.ಕೆ ಮತ್ತು ಈತನಿಗೆ ಸಹಕರಿಸಿದ ಆರೋಪದ ಮೇಲೆ ಮೂವರು ಸಿಬ್ಬಂದಿ ಸೇರಿದಂತೆ ನಾಲ್ವರನ್ನು ಕೋಟೆ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮತ್ತಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಎಸ್.ಪಿ. ಪರುಶುರಾಮ ಅವರು ಹೇಳಿದರು.

 

ಈ ಕುರಿತು ನಗರದ ಎಸ್ ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್.ಪಿ. ಪರುಶುರಾಮ ಅವರು ಮಾಹಿತಿ ನೀಡಿದರು.

ಎಸ್. ಪಿ. ಪರುಶುರಾಮ ಅವರ ಸುದ್ದಿಗೋಷ್ಠಿ

ಬೆಸ್ಕಾಂ ಇಲಾಖೆಯಲ್ಲಿ ತನ್ನ ಅಣ್ಣನಾದ ಮಹಮದ್ ಷೇಕ್.ಸಿ.ಕೆ  ಮೃತಪಟ್ಟಿದ್ದರಿಂದ ಅನುಕಂಪದ ಆಧಾರದ ಮೇಲೆ ಆ ಹುದ್ದೆಗೆ ತನ್ನನ್ನು ನೇಮಕಾತಿ ಮಾಡಿಕೊಳ್ಳಲು ಕೋರಿ ಅರ್ಜಿ ಸಲ್ಲಿಸಿದ್ದನು.

ಈ ದಾಖಲಾತಿಗಳ ಪರಿಶೀಲನೆ ಮಾಡುವ ಸಮಯದಲ್ಲಿ ಮಹಮದ್ ಷೇಕ್.ಸಿ.ಕೆ
ಅನುಕಂಪ ಆಧಾರಿತ ನೌಕರಿ ಕೋರಿ ಸಲ್ಲಿಸಿರುವ ಮನವಿ ಮತ್ತು ದಾಖಲೆಗಳು ನಕಲಿ ದಾಖಲೆಗಳಾಗಿದ್ದು
ಅಕ್ರಮವಾಗಿ ನೌಕರಿ ಪಡೆಯಲು ಫೈಜಾನ್ ಮುಜಾಯಿದ್ ಇವರು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸರ್ಕಾರ
ಮತ್ತು ಬೆವಿಕಂ ಗೆ ವಂಚನೆ ಎಸಗಿರುವುದು ತಿಳಿದು ಬಂದಿದೆ.

ನಾಗರಾಜು, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್,
ಕಾರ್ಯ ಮತ್ತು ಪಾಲನಾ ನಗರ ಉಪವಿಭಾಗ, ಬೆವಿಕಂ, ಚಿತ್ರದುರ್ಗ ಇವರು ನೀಡಿದ ದೂರಿನ ಮೇರೆಗೆ
ಚಿತ್ರದುರ್ಗ ಕೋಟೆ ಪೊಲೀಸರು  ಪ್ರಕರಣದ ದಾಖಲಿಸಿಕೊಂಡಿದ್ದರು.

ಈ ಪ್ರಕರಣದ ತನಿಖೆ ಸಂಬಂಧವಾಗಿ ಶ್ರೀ.ಪರಶುರಾಮ್.ಕೆ ಪೊಲೀಸ್ ಅಧೀಕ್ಷಕರು ಚಿತ್ರದುರ್ಗ
ಜಿಲ್ಲೆ, ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕುಮಾರ ಸ್ವಾಮಿ, ಮತ್ತು ಚಿತ್ರದುರ್ಗ ನಗರ
ಉಪವಿಭಾಗದ ಡಿವೈ.ಎಸ್.ಪಿಯವರಾದ ಶ್ರೀ ಹೆಚ್.ಆರ್.ಅನಿಲ್ ಕುಮಾರ್, ಚಿತ್ರದುರ್ಗ ಡಿ.ಸಿ.ಆರ್.ಬಿ
ಡಿವೈ.ಎಸ್.ಪಿಯವರಾದ ಶ್ರೀ ಲೋಕೇಶಪ್ಪ ರವರ ಮಾರ್ಗದರ್ಶನದಲ್ಲಿ ಚಿತ್ರದುರ್ಗ ಕೋಟೆ ಪೊಲೀಸ್
ಠಾಣೆಯ ಶ್ರೀ ರಮೇಶ್ ರಾವ್ ಎಂ.ಎಸ್ ಪಿ.ಐ ಮತ್ತು ಶ್ರೀ ಮಂಜುನಾಥ ಅರ್ಜುನ ಲಿಂಗಾರೆಡ್ಡಿ,
ಪಿ.ಎಸ್.ಐ ರವರ ನೇತೃತ್ವದಲ್ಲಿ ಪಿ.ಎಸ್.ಐ ರವರಾದ ಶ್ರೀ ಸಚಿನ್ ಬೀರಾದಾರ್, ಶ್ರೀ
ಚಂದ್ರಶೇಖರ್ ಹಾಗೂ ಸಿಬ್ಬಂದಿಯವರಾದ ಶ್ರೀ ಆರ್.ಇ.ತಿಪ್ಪೆಸ್ವಾಮಿ, ಶ್ರೀ.ಡಿ.ತಿಪ್ಪೆಸ್ವಾಮಿ, ಶ್ರೀ ಸಿ.ಮಲ್ಲೇಶಪ್ಪ, ಶ್ರೀ ಎಂ.ಹಾಲೇಶಪ್ಪ, ಶ್ರೀ ಎಂ.ಬಾಬು, ಶ್ರೀ ಜಿ.ಸಿ.ಚಿದಾನಂದ, ಶ್ರೀ ನಾಗರಾಜ್ ಹಲುವಾಗಿಲು, ಶ್ರೀ ಚಂದ್ರಶೇಖರಪ್ಪ ರವರುಗಳನ್ನೊಳಗೊಂಡ ತಂಡವನ್ನು ರಚಿಸಿದ್ದು, ಸದರಿ ತಂಡದವರು
ತನಿಖೆಯ ಸಮಯದಲ್ಲಿ

1) ಫೈಜಾನ್ ಮುಜಾಹಿದ್ (ನಕಲಿ ಅನುಕಂಪ ಆಧಾರಿತ ಮಾರ್ಗದಾಳು ಹುದ್ದೆಗೆ ಅರ್ಜಿ ಸಲ್ಲಿಸಿದವನು)

2) ಎಲ್.ರವಿ. ಸಹಾಯಕ ಬೆಸ್ಕಾಂ ಅಧಿಕಾರಿ, ಖಾಯಂ ಬೆಸ್ಕಾಂ ನೌಕರ

3) ಹೆಚ್.ಸಿ.ಪ್ರೇಮ್ ಕುಮಾರ್, ಸಹಾಯಕ, ಖಾಯಂ ಬೆಸ್ಕಾಂ ನೌಕರ

4) ಎಸ್.ಟಿ.ಶಾಂತಮಲ್ಲಪ್ಪ, ಅಧೀಕ್ಷಕ ಇಂಜಿನಿಯರ್, ಖಾಯಂ ಬೆಸ್ಕಾಂ ನೌಕರ

ಇವರನ್ನು ಪೊಲೀಸರು ವಶಕ್ಕೆ ಪಡೆದಿರುತ್ತಾರೆ ಎಂದು ಎಸ್. ಪಿ. ಪರುಶುರಾಮ ಅವರು ತಿಳಿಸಿದ್ದಾರೆ.

The post ಕೋಟೆ ಪೊಲೀಸ್ ಠಾಣೆ ಪೊಲೀಸರ ಕಾರ್ಯಾಚರಣೆ : ನಕಲಿ ದಾಖಲೆ ಸೃಷ್ಟಿಸಿ ನೌಕರಿ ಪಡೆದ ಮತ್ತು ಸಹಕರಿಸಿದ ಆರೋಪಿಗಳ ಬಂಧನ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/gG6w4Mx
via IFTTT

Views: 0

Leave a Reply

Your email address will not be published. Required fields are marked *