ವಿಶ್ವ ಮೆಮೊರಿ ಚಾಂಪಿಯನ್ ಶಿಪ್ ಎಂಬ ಜಾಗತಿಕ ವೇದಿಕೆಯಲ್ಲಿ ಕನ್ನಡದ ಕುವರನ ಕಮಾಲ್.

Memory Championship: ಸದ್ಯ ವಿಶ್ವ ಮೆಮೊರಿ ಅಥ್ಲಿಟ್ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಅಚಿಂತ್ ಅಗ್ರಸ್ಥಾನಕ್ಕೇರುವ ಗುರಿ ಹೊಂದಿದ್ದಾರೆ.

ಬೆಂಗಳೂರು: ವಿಶ್ವ ಮೆಮೊರಿ ಚಾಂಪಿಯನ್ ಶಿಪ್ (The World Memory Championships) ಎಂಬ ಜಾಗತಿಕ ವೇದಿಕೆಯಲ್ಲಿ ಕನ್ನಡದ ಕುವರನೊಬ್ಬ ಕಮಾಲ್ ಮಾಡಿದ್ದಾನೆ. ಘಟಾನುಘಟಿಗಳನ್ನು ಹಿಂದಿಕ್ಕಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾನೆ. ಈ ಬಾಲಕನಿಗೆ 12 ವರ್ಷ. ಆದರೆ ಆತನ ಸಾಧನೆ ಬೆಟ್ಟದಷ್ಟು. ಕೋಲಾರ ಮೂಲದ ಅಚಿಂತ್ (Achinth) ಈಗ ಇಡೀ ವಿಶ್ವದ ಗಮನ ತನ್ನತ್ತ ಸೆಳೆದಿದ್ದಾನೆ. ವಿಶ್ವ ಮೆಮೊರಿ ಚಾಂಪಿಯನ್ ಶಿಪ್‌‌ನಲ್ಲಿ ಭಾರತದ (India) ಕೀರ್ತಿ ಪತಾಕೆ ಹಾರಿಸಿದ್ದಾನೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ವರ್ಲ್ಡ್ ಮೆಮೊರಿ ಚಾಂಪಿಯನ್ ಶಿಪ್‌‌‌ನಲ್ಲಿ ಕನ್ನಡದ ಹುಡುಗ ಅಚಿಂತ್ ಇಡೀ ವಿಶ್ವಕ್ಕೆ ಎರಡನೇ ಸ್ಥಾನಗಳಿಸಿ ಭಾರತದ ಹೆಮ್ಮೆ ಎನಿಸಿಕೊಂಡಿದ್ದಾನೆ.

ಬೆಂಗಳೂರಿನ ಜಯನಗರದಲ್ಲಿರುವ ಭೋದಿ ವಿದ್ಯೆ ಎಂಬ ಸೆಂಟರ್ ನಲ್ಲಿ ಕಳೆದ ಎಂಟು ತಿಂಗಳಿನಿಂದ ಅಚಿಂತ್ ತರಬೇತಿ ಪಡೆಯುತ್ತಿದ್ದಾನೆ. ಟ್ರೈನರ್ ವೈಷ್ಣವಿ ಅವರು ಅಚಿಂತ್ ಅನ್ನು ಮೆಮೊರಿ ಅಥ್ಲಿಟ್ ಗೆ ಪರಿವರ್ತಿಸಿದ್ದಾರೆ.

ಹೇಳುವ, ಬರೆಯುವ ಕಲೆ ಕರಗತ

ಈಗಾಗಲೇ ಹಲವು ಚಿನ್ನದ ಪದಕಗಳನ್ನು ಗೆದ್ದಿರುವ ಅಚಿಂತ್ ಜ್ಞಾಪಕ ಶಕ್ತಿ ಅಪಾರವಾದದ್ದು‌. ಕ್ಷಣ ಮಾತ್ರದಲ್ಲಿ ಕೇಳಿಸಿಕೊಂಡಿದ್ದನ್ನು ತಕ್ಷಣವೇ ತಪ್ಪಿಲ್ಲದೆ ಹೇಳುವ ಅಥವಾ ಬರೆಯುವ ಕಲೆ ಈ ಹುಡುಗನಿಗೆ ಕರಗತ‌‌. ಅಚಿಂತ್ ನ ಈ ಸಾಧನೆಗೆ ಪೋಷಕರು ಸದಾ ಹೆಮ್ಮೆ ಪಡುವಂತೆ ಮಾಡಿದೆ.

ಅಚಿಂತ್ ಸಾಧನೆ ಅನನ್ಯವಾದದ್ದು.

ಭಾರತೀಯ ಸಂಪ್ರದಾಯದಲ್ಲಿ ಈ ಜ್ಞಾಪಕಶಕ್ತಿ ಕಲೆಗೆ ವಿಶೇಷವಾದ ಸ್ಥಾನವಿದೆ. ಆದರೆ ಇದನ್ನು ಪ್ರಯೋಗಿಸುವವರ ಮಂದಿ ತೀರ ವಿರಳ.‌ ಅದರೂ ಇಂಥದ್ದೊಂದು ಅಪರೂಪದ ಕ್ಷೇತ್ರದಲ್ಲಿ ಅಚಿಂತ್ ಸಾಧನೆ ಅನನ್ಯವಾದದ್ದು.

ಅಚಿಂತ್ ಪೋಷಕರ ಸಂತಸ

ಇನ್ನು ಅಚಿಂತ್ ಸಾಧನೆಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಮುಂದೆ ಅವನು ಇಷ್ಟಪಟ್ಟಿರುವ ಕೆಲಸವನ್ನೇ ಮಾಡಲಿ. ಬಾಲ್ಯದಿಂದಲೂ ಆತ ತುಂಬಾ ಚುರುಕು, ಶಾಲೆಯಲ್ಲಿಯೂ ಅವನ ಜ್ಞಾಪಕಶಕ್ತಿ ಬಗ್ಗೆ ಹೆಚ್ಚು ಚರ್ಚೆ ಆಗುತ್ತದೆ ಎಂದು ಅಚಿಂತ್ ಪೋಷಕರು ಸಂತಸ ವ್ಯಕ್ತಪಡಿಸುತ್ತಾರೆ.

ಸದ್ಯ ವಿಶ್ವ ಮೆಮೊರಿ ಅಥ್ಲಿಟ್ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಅಚಿಂತ್ ಅಗ್ರಸ್ಥಾನಕ್ಕೇರುವ ಗುರಿ ಹೊಂದಿದ್ದಾರೆ. ಈ ಮೂಲಕ ದೇಶ ಹೆಮ್ಮೆ ಪಡುವಂತಾಗಲಿ ಎಂದು ಹಾರೈಸೋಣ.

Source : https://kannada.news18.com/news/state/second-place-for-boy-from-karnataka-in-world-memory-championship-mrq-1483012.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *