ಚಿತ್ರದುರ್ಗ ನ. 8
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಆಗ್ನೇಯ ಪದವಿಧರ ಕ್ಷೇತ್ರದ ಮತದಾರರ ಪಟ್ಟಿಯ ನೊಂದಣಿ ಪ್ರಕ್ರಿಯೆಯಲ್ಲಿ ಚುನಾವಣೆ ಆಯೋಗ ಸರಿಯಾದ ರೀತಿಯಲ್ಲಿ ಜಾಗೃತಿಯನ್ನು ಮಾಡದೆ ಇರುವುದರಿಂದ ಸಮರ್ಪಕವಾಗಿ ಪದವೀಧರರ ನೊಂದಣಿ ಆಗಿಲ್ಲ ಎಂದು ವಕೀಲರು, ಕಾಂಗ್ರೇಸ್ ಪಕ್ಷದ ಟಿಕೇಟ್ ಆಕಾಂಕ್ಷಿ ಅನೀಸ್ ಪಾಷ ಆಯೋಗದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಕೀಲರುಗಳ ಬಳಿಯಲ್ಲಿ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡುವಂತೆ ಮನವಿ ಮಾಡಿ ಮಾತನಾಡಿದ ಅವರು, 2026ನೇ ಸಾಲಿನ ಆಗ್ನೇಯ ಪದವಿದಾರರ ಕ್ಷೇತ್ರದ ಚುನಾವಣೆಯ ಮತದಾರರ ಹೆಸರನ್ನು ನೊಂದಾಯಿಸಲು ದಿನಾಂಕ:30-10-2025ರಿಂದ ದಿನಾಂಕ:06-11-2025ವರೆಗೆ ಚುನಾವಣೆ ಆಯೋಗ ತಿಳಿಸಿದ್ದು, ಅಲ್ಪ ಸಮಯದಲ್ಲಿ ಲಕ್ಷಾಂತರ ಪದವೀಧರರಿಗೆ ವಿಷಯ ತಲುಪಿರುವುದಿಲ್ಲ.
ಏಕೆಂದರೆ ಪ್ರತಿಚುನಾವಣೆಗೂ ಸಹ ಮತದಾರರ ಪಟ್ಟಿಯನ್ನು ನವೀಕರಿಸುವುದರಿಂದ ಎಷ್ಟೋ ಪದವೀಧರರು ನಾವು ಈ ಹಿಂದೆ ಮಾಡಿಸಿದ್ದೇವೆ ಎಂದು ಸುಮ್ಮನಿದ್ದಾರೆ. ಈ ವಿಚಾರದ ಬಗ್ಗೆಯು ಚುನಾವಣೆ ಆಯೋಗವು ಪ್ರತಿ ಚುನಾವಣೆಗೂ ಸಹ ನವೀಕರಿಸಬೇಕೆಂದು ಮಾಹಿತಿಯನ್ನು ನೀಡದೆ ಇರುವುದರಿಂದ ಈ ಬಾರಿಯು ಆಗ್ನೇಯ ಪದವಿಧರ ಕ್ಷೇತ್ರದ ನೊಂದಣಿ ಸಂಖ್ಯೆಯು ಸಹ ಕುಂಠಿತವಾಗಿರುತ್ತದೆ. ಇದಕ್ಕೆ ನೇರ ಹೊಣೆ ಚುನಾವಣೆ ಆಯೋಗದ ನಿರ್ಲಕ್ಷವೇ ಕಾರಣವಾಗಿರುತ್ತದೆ ಎಂದರು.
ಪ್ರಸ್ತುತ ದಿನಗಳಲ್ಲಿ ಐ.ಎ.ಎಸ್ ಮತ್ತು ಕೆ.ಎ.ಎಸ್ ಗೆಜಿಟೆಡ್ ಆಫೀಸರ‍್ಸ್‌ಗಳ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿಯೇ ಅರ್ಜಿಗಳನ್ನು ಸಲ್ಲಿಸುತ್ತಾರೆ. ಅದೇ ರೀತಿ ಪದವೀಧರ ಕ್ಷೇತ್ರದಲ್ಲಿಯೂ ಸಹ ಮತದಾನ ಪ್ರಕ್ರಿಯೆಯನ್ನು ಆನ್‌ಲೈನಿನ ಮೂಲಕ ನೊಂದಣಿ ಪ್ರಕ್ರಿಯೆಯನ್ನು ಚುನಾವಣೆ ಆಯೋಗ ಅಳವಡಿಸಬೇಕೆಂದು ಒತ್ತಾಯಿಸಿದು, ಚುನಾವಣೆ ಆಯೋಗವು ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಯಾವ ರೀತಿ ಬಿ.ಎಲ್.ಓಗಳು ಮನೆ ಮನೆಗೆ ಹೋಗಿ ಮತದಾರರ ಪಟ್ಟಿಯನ್ನು ತಯಾರಿಸಿರುತ್ತಾರೋ ಹಾಗೆಯೇ ಆಗ್ನೇಯ ಪದವೀಧರ ಕ್ಷೇತ್ರದಲ್ಲಿಯೂ ಸಹ ಪ್ರಕ್ರಿಯೆ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.
ಕಳೆದ ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನಪರಿಷತ್ ಸದಸ್ಯರಾದ ಚಿದಾನಂದ ಗೌಡ ೫ ವರ್ಷಗಳಲ್ಲಿ ಒಂದು ಬಾರಿಯೂ ಶಾಲೆಗಳಿಗಾಗಲೀ, ವಕೀಲರ ಸಂಘಗಳಿಗಾಗಲೀ, ಕಾಲೇಜುಗಳಿಗಾಗಲೀ ಬೇಟಿ ನೀಡಿರುವುದಿಲ್ಲ. ಪದವೀಧರ ನಿರುದ್ಯೋಗಿಗಳ ಸಮಸ್ಯೆಗಳ ಬಗ್ಗೆ, ಉದ್ಯೋಗದ ವಿಚಾರಗಳಿಗಾಗಲೀ, ವರ್ಗಾವಣೆ ಸಮಸ್ಯೆಗಳನ್ನು ಸೌಜನ್ಯಕ್ಕಾದರೂ ಸದನದಲ್ಲಾಗಲೀ ಅಥವಾ ಸರ್ಕಾರದ ಮುಂದೆ ಸೌಜನ್ಯಕ್ಕೂ ಸಹ ಪ್ರಸ್ತಾಪ ಮಾಡದಿರುವುದು ನಾಚಿಗೆ ಗೇಡಿನ ಸಂಗತಿಯಾಗಿದ್ದು, ವಕೀಲರುಗಳಿಂದ ಗೆದ್ದು, ವಕೀಲರಗಳ ಸಮಸ್ಯೆ ಬಂದಾಗ ಮತ್ತು ಅವರ ಆರೋಗ್ಯ ವಿಮೆ ವಿಚಾರವಾಗಲೀ ಎಂದೂ ಸಹ ಧ್ವನಿ ಎತ್ತದೆ ತಾನು ಶಿರಾ ತಾಲ್ಲೂಕನ್ನು ಬಿಟ್ಟು ಬೇರೆ ಎಲ್ಲಿಯೂ ಸಹ ಕೆ.ಡಿ.ಪಿ ಮೀಟಿಂಗ್‌ಗಾಗಲೀ, ಸರ್ಕಾರಿ ಆಚರಣೆಗಾಗಲೀ, ಸರ್ಕಾರಿ ಕಾರ್ಯಕ್ರಮಗಳಿಗಾಗಲೀ ಭಾಗವಹಿಸದೆ ಇರುವುದು ಶೋಚನಿಯ ಸಂಗತಿಯಾಗಿದೆ ಎಂದು ಅನೀಸ್ ಪಾಷ ತಿಳಿಸಿದರು.
ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಕೀಲರುಗಳ ಸಮಸ್ಯೆಗಳ ಬಗ್ಗೆ ಮತ್ತು ನಿರುದ್ಯೋಗಿ ಪದವೀಧರರ ಬಗ್ಗೆ ಗಮನಹರಿಸುತ್ತೇನೆಂದು ಪ್ರಚಾರ ಮಾಡಿ ವಕೀಲರಿಗೆ ಮತ್ತು ಶಿಕ್ಷಕ ವೃಂದದವರಿಗೆ ನನಗೆ ನಿಮ್ಮ ಬೆಂಬಲವನ್ನು ನೀಡಿದರೆ ನಾನು ಸೇವೆ ಮಾಡಲು ಬದ್ಧನಿರುತ್ತೇನೆಂದು ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಯಾದವರೆಡ್ಡಿ, ಪ್ರೊ|| ಶಿವಕುಮಾರ್, ವಕೀಲರ ಸಂಘದ ಖಜಾಂಚಿಯಾದ ಸೋಮಶೇಖರರೆಡ್ಡಿ, ಮಾಜಿ ಕಾರ್ಯದರ್ಶಿಗಳಾದ ಗಂಗಾಧರ್, ಉಷಾ ಕೈಲಾಸದ್, ಸಿರಾಜುದ್ದೀನ್, ಪ್ರತಾಪ್‌ಜೋಗಿ, ಬೋಸಯ್ಯ, ಶಿವಕುಮಾರ್, ಮನ್ಸೂರ್ ಪಾಷ, ಮದುಕುಮಾರ್, ಓಂಕಾರಪ್ಪ, ತಿಪ್ಪೇಸ್ವಾಮಿ, ಗುರುಮೂರ್ತಿ, ವೆಂಕಟೇಶ್, ಗಿರೀಶ್‌ನಾಯ್ಕ, ಅಕೀಬ್, ಇತರರು ಉಪಸ್ಥಿತರಿದ್ದರು.
Views: 21