Health Benefits Of Consuming Sesame Seeds: ಅಭ್ಯಂಗ ಸ್ನಾನಕ್ಕೆ ಎಳ್ಳೆಣ್ಣೆ ಅತ್ಯುತ್ತಮ. ಪ್ರತಿದಿನ ಎಳ್ಳೆಣ್ಣೆಯನ್ನು ದೇಹಕ್ಕೆ ಮಾಲಿಶ್ ಮಾಡುವುದರಿಂದ ರಕ್ತ ಸಂಚಾರ ಸರಿಯಾಗಿ, ರಕ್ತವಿಕಾರ ಕಟಿಶೂಲೆ ವಾತ ದೂರವಾಗುತ್ತದೆ. ದೇಹ ಹಾಗೂ ಚರ್ಮದ ಕಾಂತಿ ಹೆಚ್ಚುತ್ತದೆ.
![](https://samagrasuddi.co.in/wp-content/uploads/2024/07/image-111.png)
- ಪ್ರತಿದಿನ 20 ಗ್ರಾಂನಷ್ಟು ಎಳ್ಳನ್ನು ಅಗಿದು ತಿನ್ನುವುದರಿಂದ ಹಲ್ಲುಗಳು ಸದೃಢವಾಗುತ್ತವೆ
- ಕೆಮ್ಮಿನ ಸಮಸ್ಯೆಗೆ ಎಳ್ಳಿನ ಚೂರ್ಣದ ಕಷಾಯಕ್ಕೆ ಕಲ್ಲು ಸಕ್ಕರೆ ಸೇರಿಸಿ ಸೇವಿಸಬೇಕು
- ಕಿವಿ ನೋವಿಗೆ ಸ್ವಲ್ಪ ಬಿಸಿ ಮಾಡಿ ಆರಿದ ನಂತರ ಮೂರ್ನಾಲ್ಕು ಹನಿ ಹಾಕಬಹುದು
Benefits of Sesame Seeds: ಎಳ್ಳಿನ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ಎಳ್ಳು ಹಚ್ಚಿದ ಸಜ್ಜಿ ರೊಟ್ಟಿ, ಎಳ್ಳಿನ ಹೋಳಿಗೆ, ಎಳ್ಳಿನ ಉಂಡಿ, ಎಳ್ಳಿನ ಚಿಗಳಿ, ಸಂಕ್ರಾಂತಿ ಹಬ್ಬದಲ್ಲಿ ಕುಸರೆಳ್ಳು ಹೀಗೆ ಹಲವಾರು ರೀತಿಯಲ್ಲಿ ಬಳಸಲ್ಪಡುವ ಈ ಎಳ್ಳು ಔಷಧೀಯ ಗುಣಗಳ ಆಗರ. ಸ್ವಲ್ಪ ಕಹಿ, ಮಧುರ, ವಗರು ರುಚಿಗಳ ಸಮ್ಮಿಳಿತದಿಂದ ಕೂಡಿದ ಈ ಎಳ್ಳು ಕಫ ಪಿತ್ತ ನಾಶಕವಾಗಿದೆ. ಚರ್ಮಕ್ಕೆ ಕಾಂತಿ ಹಾಗೂ ದೇಹಕ್ಕೆ ಬಲ ನೀಡುತ್ತದೆ. ಕಪ್ಪು /ಬಿಳಿ/ಕಂದು ಹೀಗೆ ಮೂರು ಬಣ್ಣದ ಎಳ್ಳು ಸಿಗುತ್ತದೆ. .
ಆಯುರ್ವೇದದಲ್ಲಿ ಕಪ್ಪು ಎಳ್ಳನ್ನು ಶ್ರೇಷ್ಠ, ಬಿಳಿ ಎಳ್ಳನ್ನು ಮಧ್ಯಮ ಮತ್ತು ಕಂದು ಎಳ್ಳನ್ನು ತೃತೀಯ ಹೀಗೆ ವಿಂಗಡಿಸಲಾಗಿದೆ. ಎಳ್ಳು ಅತ್ಯಧಿಕ ಕ್ಯಾಲ್ಸಿಯಂ, ಐರನ್, ಮೆಗ್ನೀಷಿಯಂ, ಪೊಟ್ಯಾಷಿಯಂ, ವಿಟಮಿನ್ ಮತ್ತು ಫೈಬರ್ ಅಂಶಗಳಿಂದ ಸಮೃದ್ಧವಾಗಿದೆ. ಹಲವಾರು ಔಷಧೀಯ ಗುಣ ಹೊಂದಿರುವ ಎಳ್ಳು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಎಳ್ಳಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಎಳ್ಳಿನ ಅದ್ಭುತ ಆರೋಗ್ಯ ಪ್ರಯೋಜನಗಳು
- ಪ್ರತಿದಿನ 20 ಗ್ರಾಂನಷ್ಟು ಎಳ್ಳನ್ನು ಬಾಯಿಯಲ್ಲಿ ನಿಧಾನವಾಗಿ ಅಗಿದು ತಿನ್ನುವುದರಿಂದ ಹಲ್ಲುಗಳು ಸದೃಢವಾಗುತ್ತವೆ. ವಸಡುಗಳು ಗಟ್ಟಿಯಾಗಿ ಹಲ್ಲುಗಳಿಗೆ ಹೊಳಪು ಬರುತ್ತದೆ. ದಂತ ರೋಗ ಬಾಧಿಸುವುದಿಲ್ಲ.
- ಎಳ್ಳು ಗಿಡದ ಬೇರು ಹಾಗೂ ಎಲೆಗಳನ್ನು ನೀರಿನಲ್ಲಿ ಕುದಿಸಿ ಕೂದಲು ತೊಳೆಯುವುದರಿಂದ ಕೂದಲಿಗೆ ಕಪ್ಪು ಬಣ್ಣ ಬರುತ್ತದೆ.
- ಕೆಮ್ಮಿನ ಸಮಸ್ಯೆಗೆ ಎಳ್ಳಿನ ಚೂರ್ಣದ ಕಷಾಯಕ್ಕೆ ಕಲ್ಲು ಸಕ್ಕರೆ ಸೇರಿಸಿ ಸೇವಿಸಬೇಕು.
- ರಕ್ತಾತಿಸಾರಕ್ಕೆ 5 ಗ್ರಾಂನಷ್ಟು ಚೂರ್ಣವನ್ನು ಆಡಿನ ಹಾಲಿನಲ್ಲಿ ಕುದಿಸಿ ಕಲ್ಲು ಸಕ್ಕರೆ ಸೇರಿಸಿ ಸೇವಿಸಬೇಕು.
- ಮಹಿಳೆಯರ ಮಾಸಿಕ ಧರ್ಮದಲ್ಲಿ ಏರುಪೇರಾದರೆ ಎಳ್ಳು-ಬೆಲ್ಲ ಸೇರಿಸಿ ಸೇವಿಸಿದರೆ ಒಳ್ಳೆಯದು ಅಥವಾ ಎಳ್ಳಿನ ಕಷಾಯ ಸೇವನೆ ಮಾಡಬಹುದು.
- ಎಳ್ಳು ಹಾಗೂ ಅಗಸಿ ಬೀಜಗಳ ಚೂರ್ಣವನ್ನು ಬೆಳಗ್ಗೆ ಮತ್ತು ರಾತ್ರಿ ಊಟಕ್ಕಿಂತ ಮುಂಚೆ 5 ಗ್ರಾಂನಷ್ಟು ತಿನ್ನುವುದರಿಂದ ಪುರುಷತ್ವ ವೃದ್ಧಿಗೆ ಸಹಕಾರಿ.
- ಮಕ್ಕಳು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಪ್ರತಿದಿನ ಕರಿ ಎಳ್ಳಿನ ಜೊತೆಗೆ ಬೆಲ್ಲ ಸೇರಿಸಿ ಉಂಡೆ ಮಾಡಿ ತಿನ್ನಿಸಬೇಕು.
- ಹಿರಿಯರ ಬಹುಮೂತ್ರಕ್ಕೆ ಎಳ್ಳು ಅಜವಾನ(ಓಂಕಾಳು) ಸೇರಿಸಿ ಸೇವಿಸಿದರೆ ಒಳ್ಳೆಯದು.
- ಎಳ್ಳಿನ ಎಳೆಯ ಎಲೆ ಹೂವು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿ ದಿನಾಲು ಬೆಳಗ್ಗೆ ಐದು ಗ್ರಾಂನಷ್ಟು ಚೂರ್ಣವನ್ನು ಜೇನು ಮತ್ತು ಹಾಲು ಸೇರಿಸಿ ಸೇವಿಸುವುದರಿಂದ ಕಿಡ್ನಿ ಸ್ಟೋನ್ ಕರಗಿಸಲು ಸಹಕಾರಿಯಾಗಿದೆ.
- ಸಂಧಿವಾತ ಮಂಡಿ ನೋವಿಗೆ ಎಳ್ಳು, ಒಣ ಶುಂಠಿ ಮತ್ತು ಮೆಂತೆ ಬೀಜವನ್ನು ಸಮ ಪ್ರಮಾಣದಲ್ಲಿ ಸೇರಿಸಿ ಪುಡಿ ಮಾಡಿ 5 ಗ್ರಾಂನಷ್ಟು ದಿನದಲ್ಲಿ ಮೂರು ಬಾರಿ ಸೇವಿಸಬೇಕು.
- ಕಿವಿ ನೋವಿಗೆ ಸ್ವಲ್ಪ ಬಿಸಿ ಮಾಡಿ ಆರಿದ ನಂತರ ಮೂರ್ನಾಲ್ಕು ಹನಿ ಹಾಕಬಹುದು.
- ಅಭ್ಯಂಗ ಸ್ನಾನಕ್ಕೆ ಎಳ್ಳೆಣ್ಣೆ ಅತ್ಯುತ್ತಮ. ಪ್ರತಿದಿನ ಎಳ್ಳೆಣ್ಣೆಯನ್ನು ದೇಹಕ್ಕೆ ಮಾಲಿಶ್ ಮಾಡುವುದರಿಂದ ರಕ್ತ ಸಂಚಾರ ಸರಿಯಾಗಿ, ರಕ್ತವಿಕಾರ ಕಟಿಶೂಲೆ ವಾತ ದೂರವಾಗುತ್ತದೆ. ದೇಹ ಹಾಗೂ ಚರ್ಮದ ಕಾಂತಿ ಹೆಚ್ಚುತ್ತದೆ.
- ಸಾಸಿವೆ ಜೀರಿಗೆಯೊಂದಿಗೆ ಎಳ್ಳನ್ನು ಬೆರೆಸಿ ಒಗ್ಗರಣೆಗೆ ಬಳಸಬಹುದಾಗಿದೆ.