ಬೇಸಿಗೆ ಎಂದು ಎಳನೀರು ಕುಡಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆಯ ಹಿನ್ನೆಲೆ ಏನು? ಹೇಗೆ ನಡೆಯಿತು? ತಿಳಿದುಕೊಳ್ಳೋಣ.

ರೋಗಿಗಳಿಗೆ, ದುರ್ಬಲ ವ್ಯಕ್ತಿಗಳಿಗೆ ವೈದ್ಯರು ಶಿಫಾರಸು ಮಾಡುವುದೇ ಎಳನೀರನ್ನು! ಆದರೆ ಇಂತಹ ಎಳನೀರನ್ನು ಕುಡಿದು ಒಬ್ಬ ವ್ಯಕ್ತಿ ಸತ್ತೇ ಹೋಗಿದ್ದಾನೆ. ಅಸಲಿಗೆ ಏನಾಗಿತ್ತು ಗೊತ್ತಾ?

ಸಾಮಾನ್ಯವಾಗಿ ಬೇಸಿಗೆ ಬಂದರೆ ನಮ್ಮ ಮೈಯಲ್ಲಿರುವ ನೀರೆಲ್ಲಾ ಬೆವರಾಗಿ ಹರಿದು ಹೋಗಿ ನಮ್ಮನ್ನು ಬರಡು ಮಾಡುತ್ತದೆ. ಈ ಸಂದರ್ಭದಲ್ಲಿ ಮಜ್ಜಿಗೆ, ಪಾನಕ, ಏಳನೀರು ಎಂದೆಲ್ಲಾ ಕುಡಿದು ದೇಹ ತಂಪು ಮಾಡಿಕೊಳ್ಳುತ್ತೇವೆ. ಏಕೆಂದರೆ ಇವುಗಳಲ್ಲಿ ದೇಹಕ್ಕೆ ಪೌಷ್ಟಿಕಾಂಶಗಳು ಸಿಗುವುದು ಮಾತ್ರವಲ್ಲ, ನಮ್ಮ ದೇಹದ ಕಡಿಮೆಯಾಗಿರುವ ನೀರಿನ ಅಂಶ ಸಮತೋಲನಗೊಳ್ಳುತ್ತದೆ. ಇವೆಲ್ಲ ಬಹಳ ಆರೋಗ್ಯಕರ ಎಂದು ನಾವು ತಿಳಿದುಕೊಂಡಿದ್ದೇವೆ.

ಆದರೆ ನಿಮಗೆ ಆಶ್ಚರ್ಯ ಹುಟ್ಟು ಹಾಕುವ ಒಂದು ಸುದ್ದಿ ಇದೆ. ಅದೇನೆಂದರೆ ಬೇಸಿಗೆ ಎಂದು ಎಳನೀರು ಕುಡಿದು ಒಬ್ಬ ವ್ಯಕ್ತಿ ಸಾವನ್ನಪ್ಪಿರುವ ಘಟನೆ. ಕೇಳಿದರೆ ನಿಮಗೆ ಭಯ ಆಗಬಹುದು. ಆದರೂ ಇದು ಸತ್ಯ. ಈ ಘಟನೆಯ ಹಿನ್ನೆಲೆ ಏನು, ಹೇಗೆ ನಡೆಯಿತು, ಈ ಎಲ್ಲಾ ವಿಷಯಗಳನ್ನು ಇಂದಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಅಂದ ಹಾಗೆ ಈ ಘಟನೆ ನಡೆದಿರುವುದು ನಮ್ಮ ದೇಶದಲ್ಲಲ್ಲ. ಡೆನ್ಮಾರ್ಕ್ ನಲ್ಲಿ. ಆ ವ್ಯಕ್ತಿ ಎಳನೀರು ಕುಡಿಯುವ ಹೊತ್ತಿಗೆ ಅದರಿಂದ ಕೆಟ್ಟ ವಾಸನೆ ಬರುತ್ತಿತ್ತು ಮತ್ತು ಒಳಭಾಗದಲ್ಲಿ ಕೊಳೆತು ಹೋಗಿತ್ತು ಎಂದು ಆರೋಗ್ಯ ವರದಿ ಹೇಳುತ್ತದೆ. ಇದಕ್ಕೆ ಕಾರಣ ಆತ ತೆಗೆದುಕೊಂಡ ಎಳನೀರನ್ನು ಸರಿಯಾಗಿ ರೆಫ್ರಿಜರೇಷನ್ ಮಾಡದೇ ಇರುವುದು ಎಂದು ತಿಳಿದು ಬಂದಿದೆ….

ಕೆಲವೇ ಗಂಟೆಗಳಲ್ಲಿ ರೋಗ ಲಕ್ಷಣಗಳು ಶುರುವಾಯಿತಂತೆ!

ಕೆಲವೇ ಗಂಟೆಗಳಲ್ಲಿ ರೋಗ ಲಕ್ಷಣಗಳು ಶುರುವಾಯಿತಂತೆ!
  • ಆ ವ್ಯಕ್ತಿಗೆ ಸುಮಾರು 69 ವರ್ಷ ವಯಸ್ಸಾಗಿತ್ತು. ಈ ಕೊಳೆತು ನಾರುವ ಎಳನೀರನ್ನು ಕುಡಿದ ಕೆಲವೇ ಗಂಟೆಗಳಲ್ಲಿ ಆತನಿಗೆ ವಾಕರಿಕೆ, ವಾಂತಿ ಆಗುವುದರ ಜೊತೆಗೆ ಮೈಯೆಲ್ಲಾ ಬೆವರಿ ಹೋಯಿತು. ಸರಿಯಾಗಿ ಸಮತೋಲನದಿಂದ ನಡೆಯಲು ಕೂಡ ಸಾಧ್ಯವಾಗಲಿಲ್ಲವಂತೆ!
  • ಮೆದುಳು ಗೊಂದಲಮಯವಾಯಿತಂತೆ. ಆತನ ದೇಹದ ಸ್ವರೂಪ ಕೂಡ ಬದಲಾಯಿತಂತೆ. ಹಾಸ್ಪಿಟಲ್ ನಲ್ಲಿ ಎಂ ಆರ್ ಐ ಸ್ಕ್ಯಾನ್ ಮಾಡಲಾಗಿ ಆತನ ಮೆದುಳು ಒಳಗಿನಿಂದಲೇ ನಿಧಾನವಾಗಿ ಊತ ಬರುತ್ತಿರುವುದು ಕಾಣಿಸಿತಂತೆ. ಆ ಸಂದರ್ಭದಲ್ಲಿ ವೈದ್ಯಕೀಯ ಲೋಕಕ್ಕೆ ಇದೊಂದು ಸವಾಲಿನ ಪ್ರಕರಣ ಎನಿಸಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.​

ಮೆದುಳು ನಿಷ್ಕ್ರಿಯ!

ಮೆದುಳು ನಿಷ್ಕ್ರಿಯ!

ಮೆಟಬಾಲಿಸಂ ಸಮಸ್ಯೆಯಿಂದ ಮೆದುಳು ನಿಷ್ಕ್ರಿಯಗೊಂಡ ಬಗ್ಗೆ ವೈದ್ಯರಿಗೆ ತಿಳಿಯಿತು. ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ 26 ಗಂಟೆಗಳ ನಂತರ ಮತ್ತು ಆತನಿಗೆ ನೀಡಲಾಗಿದ್ದ ಲೈಫ್ ಸಪೋರ್ಟ್ ಆಫ್ ಮಾಡಿದ ಮೇಲೆ ಆತನ ಮೆದುಳು ನಿಷ್ಕ್ರಿಯವಾಗಿತ್ತು.

ನಾಲ್ಕುವರೆ ಗಂಟೆಗಳ ಮುಂಚೆ ಎಳನೀರು ಸೇವಿಸಿದ್ದ!

ನಾಲ್ಕುವರೆ ಗಂಟೆಗಳ ಮುಂಚೆ ಎಳನೀರು ಸೇವಿಸಿದ್ದ!

ಆಸ್ಪತ್ರೆಗೆ ದಾಖಲಾಗುವ ನಾಲ್ಕುವರೆ ಗಂಟೆಗಳ ಮುಂಚೆ ಅಷ್ಟೇ ಆ ವ್ಯಕ್ತಿ ಸ್ಟ್ರಾ ಬಳಸಿ ಎಳನೀರು ಸೇವಿಸಿದ್ದ. ಎಳನೀರು ಕೊಳೆತ ವಾಸನೆ ಇದ್ದ ಕಾರಣ ಕೇವಲ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಆತ ಎಳನೀರನ್ನು ಸೇವಿಸಿದ್ದ. ಆನಂತರದಲ್ಲಿ ಎಳನೀರನ್ನು ಓಪನ್ ಮಾಡಿ ಅದು ಕೊಳೆತು ಹೋಗಿದ್ದನ್ನು ತನ್ನ ಹೆಂಡತಿಗೆ ತೋರಿಸಿ ತಿಳಿಸಿದ್ದ. ಹೀಗೆಂದು ಜರ್ನಲ್ ಎಮರ್ಜಿನ್ ಇನ್ಫೆಕ್ಟಿಯಸ್ ಡಿಸೀಸಸ್ ನಲ್ಲಿನ ವರದಿಯಲ್ಲಿ ಗೊತ್ತಾಗಿದೆ.

ಅಷ್ಗಕ್ಕೆ ಆಗಿದ್ದೇನು?

ಅಷ್ಗಕ್ಕೆ ಆಗಿದ್ದೇನು?

ಮನೆಗೆ ಪಾರ್ಸೆಲ್ ತರುವಾಗ ನಾವು ಹೇಗೆ ಎಳನೀರನ್ನು ಸಿಪ್ಪೆ ತೆಗೆಸಿ ತರುತ್ತೇವೆ ಅದೇ ರೀತಿ ಆತನು ಕೂಡ ಮೊದಲೇ ಹೊಡೆಸಿಕೊಂಡು ಸ್ಟ್ರಾ ಜೊತೆಗೆ ಮನೆಗೆ ತಂದಿದ್ದ. ಇದನ್ನು ಕುಡಿಯುವವರೆಗೂ ರೆಫ್ರಿಜರೇಟರ್ ನಲ್ಲಿ ನಾಲ್ಕರಿಂದ ಐದು ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇರಿಸಬೇಕೆಂದು ಎಳನೀರು ಕೊಟ್ಟವರು ಹೇಳಿ ಕಳುಹಿಸಿದ್ದರು. ಆದರೆ ಆತನು ಅವರ ಮಾತನ್ನು ನಿರ್ಲಕ್ಷ್ಯ ಮಾಡಿ ಒಂದು ತಿಂಗಳ ಕಾಲ ಕಿಚನ್ ಟೇಬಲ್ ಮೇಲೆ ಹಾಗೆ ಇಟ್ಟಿದ್ದನು ಎಂದು ವರದಿಯಲ್ಲಿ ತಿಳಿದು ಬಂದಿದೆ.

ಎಳನೀರಿನ ಶೇಖರಣೆ ಬಹಳ ಮುಖ್ಯ ಅಂತೆ!

ಎಳನೀರಿನ ಶೇಖರಣೆ ಬಹಳ ಮುಖ್ಯ ಅಂತೆ!
  • ಈ ರೀತಿ ತೆರೆದ ಎಳನೀರನ್ನು ರೆಫ್ರಿಜರೇಟರ್ ನಲ್ಲಿ ಕುಡಿಯುವ ದಿನದವ ರೆಗೂ ಶೇಖರಣೆ ಮಾಡಲೇಬೇಕು. ಏಕೆಂದರೆ ಇವುಗಳಿಗೆ ಜೀವಿತಾವಧಿ ಬಹಳ ಕಡಿಮೆ ಇರುತ್ತದೆ. ಸ್ವಲ್ಪವೂ ಕೂಡ ಓಪನ್ ಮಾಡದೇ ಇರುವ ತೆಂಗಿನಕಾಯಿಗಳನ್ನು ಸಾಧಾರಣ ಕೊಠಡಿಯ ತಾಪಮಾನದಲ್ಲಿ ಕೆಲವು ತಿಂಗಳುಗಳವರೆಗೆ ಇರಿಸಬಹುದು ಎಂದು ಸಿಂಗಪುರ್ ಹಾಸ್ಪಿಟಲ್ ನಲ್ಲಿನ ವೈದ್ಯರಾದ ಡಾ. ಸ್ಯಾಮುವೆಲ್ ಚೌದರಿ ಹೇಳುತ್ತಾರೆ.
  • ಆದರೆ ಈ ರೀತಿ ಹೊಡೆಸಿಕೊಂಡು ಬಂದ ಎಳನೀರನ್ನು ಒಂದು ಏರ್ ಟೈಟ್ ಕಂಟೇನರ್ ಅಥವಾ ಜಿಪ್ ಲಾಕ್ ಇರುವಂತಹ ಬ್ಯಾಗ್ ನಲ್ಲಿ ಹಾಕಿ ರೆಫ್ರಿಜರೇಟರ್ ನಲ್ಲಿ ತಕ್ಷಣ ಶೇಖರಿಸಿ ಇಡಬೇಕು. ಮೂರರಿಂದ ಐದು ದಿನಗಳ ಇದು ತಾಜಾ ಆಗಿರುತ್ತದೆ.​​

ಫ್ರೀಜರ್ ನಲ್ಲಿ ಶೇಖರಿಸಿ!

ಫ್ರೀಜರ್ ನಲ್ಲಿ ಶೇಖರಿಸಿ!

ಇನ್ನೂ ಹೆಚ್ಚು ದಿನಗಳ ಕಾಲ ನಿಮಗೆ ಬೇಕು ಎನ್ನುವುದಾದರೆ, ಎಳನೀರಿನ ತೆಂಗಿನಕಾಯಿಯನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿ ಫ್ರೀಜರ್ ನಲ್ಲಿ ಶೇಖರಿಸಿ. ಶೇಖರಿಸುವ ಮುಂಚೆ ಇದರಲ್ಲಿ ಹೆಚ್ಚಿನ ನೀರಿನ ಅಂಶ ಇಲ್ಲದಂತೆ ನೋಡಿಕೊಳ್ಳಿ. ಇದರ ಮೇಲೆ ದಿನಾಂಕವನ್ನು ಬರೆದು ಸುಮಾರು ಆರು ತಿಂಗಳುಗಳವರೆಗೆ ನೀವು ಇದನ್ನು ಶೇಖರಿಸಬಹುದು. ಹೆಚ್ಚು ಹೊತ್ತು ಕೊಠಡಿಯ ತಾಪಮಾನದಲ್ಲಿ ಇರಿಸಬೇಡಿ. ಎಳನೀರಿಗೆ ಬ್ಯಾಕ್ಟೀರಿಯಾ, ವೈರಸ್ ಮತ್ತು ರೋಗಕಾರಕ ಅಂಶಗಳು ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ.

ಹಕ್ಕು ನಿರಾಕರಣೆ: ಈ ಲೇಖನವು ಕೇವಲ ಮಾಹಿತಿಗಾಗಿ ಮಾತ್ರ. ಇದು ಯಾವುದೇ ರೀತಿಯಲ್ಲೂ ಯಾವುದೇ ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಸಮಗ್ರ ಸುದ್ದಿ ಇದರ ಸತ್ಯತೆ, ನಿಖರತೆ ಮತ್ತು ಪರಿಣಾಮದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

Vijayakarnataka

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *