ಜೀವನ ಪ್ರಮಾಣ ಪತ್ರದ ಅಭಿಯಾನಕ್ಕೆ ಚಾಲನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನ. 06 ಕರ್ನಾಟಕ ಅಂಚೆ ಮತ್ತು ದೂರಸಂಪರ್ಕ ನಿವೃತ್ತ ನೌಕರರ ಸಂಘ ಬೆಂಗಳೂರು ಇವರಿಂದ ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ದಿನಾಂಕ 9.11.2024ರ ಶನಿವಾರ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕೇಂದ್ರ ರಾಜ್ಯ ಹಾಗೂ ಸಾರ್ವಜನಿಕ ಕ್ಷೇತ್ರದ ನಿವೃತ್ತ ನೌಕರರಿಗೆ ಪಿಂಚಣಿಯನ್ನು ಮುಂದುವರೆಸಲು ಬೇಕಾಗುವ ಜೀವನ ಪ್ರಮಾಣ ಪತ್ರ
ಅಭಿಯಾನವನ್ನು ((Digital life certificate campaign)) ಉಚಿತವಾಗಿ ಏರ್ಪಡಿಸಲಾಗಿದೆ.

ಈ ಅಭಿಯಾನಕ್ಕೆ ಸ್ವಯಂಸೇವಕರಾಗಿ ಸಂಘದ ಉಪಾಧ್ಯಕ್ಷರಾದ ಬೆಂಗಳೂರಿನ ಜನರಲ್ ಮ್ಯಾನೇಜರ್ ಫೈನಾನ್ಸ್ ಅಂಡ್ ಅಕೌಂಟ್ಸ್
ಕಛೇರಿಯ ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ಶ್ರೀಮತಿ ಎನ್ ನಾಗಲಕ್ಷ್ಮಿ, ಮೈಸೂರಿನ ಅಂಚೆ ತರಬೇತಿ ಕೇಂದ್ರದ ನಿವೃತ್ತ ಉಪ
ನಿರ್ದೇಶಕರಾದ ಎಸ್ ರಾಜಶೇಖರ್, ನಿವೃತ್ತ ಹಿರಿಯ ಅಂಚೆ ಅಧೀಕ್ಷಕರಾದ ಡಿ. ಶಿವಯ್ಯ, ನಿವೃತ್ತ ಹಿರಿಯ ಅಂಚೆ ಅಧೀಕ್ಷಕರಾದ ಪ್ರಕಾಶ್,
ದಾವಣಗೆರೆಯ ನಿವೃತ್ತ ಉಪ ಅಂಚೆ ಪಾಲಕ(ಲೆಕ್ಕ)ರಾದ ಬಿ. ಟಿ.ಚಂದ್ರಶೇಖರ್ ಭಾಗವಹಿಸಲಿದ್ದಾರೆ.

ಚಿತ್ರದುರ್ಗದ ಎಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿವೃತ್ತ ನೌಕರರು ಹಾಗೂ ಕೇಂದ್ರ ಸಾರ್ವಜನಿಕ ಸಂಸ್ಥೆಯ ನಿವೃತ್ತ ನೌಕರರು
ಅಭಿಯಾನದ ಸದುಪಯೋಗ ಪಡೆದುಕೊಂಡು ತಮ್ಮ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕೆಂದು ವಿನಂತಿಸಿಕೊಳ್ಳಲಾಗಿದೆ.

ಜೀವನ ಪ್ರಮಾಣ ಪತ್ರದ ಅಭಿಯಾನಕ್ಕೆ ಬರುವ ನಿವೃತ್ತ ನೌಕರರು ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ತರತಕ್ಕದ್ದು1. ತಮ್ಮ
ಪಿಂಚಣಿ ಪುಸ್ತಕ, 2. ಪಿಂಚಣಿ ಜಮಾ ಆಗುತ್ತಿರುವ ಬ್ಯಾಂಕ್ ಅಥವಾ ಅಂಚೆ ಇಲಾಖೆಯ ಉಳಿತಾಯ ಖಾತೆಪಾಸ್ ಬುಕ್, 3. ಆಧಾರ್
ಕಾರ್ಡ್, 4. ಆಧಾರ್ ಕಾರ್ಡಿಗೆ ಜೋಡಣೆ ಯಾಗಿರುವ ಮೊಬೈಲ್‍ನ್ನು ತರಬೇಕಾಗಿ ಕರ್ನಾಟಕ ಅಂಚೆ ಮತ್ತು ದೂರಸಂಪರ್ಕ ನಿವೃತ್ತ
ನೌಕರರ ಸಂಘ ಬೆಂಗಳೂರು ಇವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *