ಸಿರಿಗೆರೆಯಲ್ಲಿ ಸೆ. 20 ರಿಂದ 24ರ ವರೆಗೆ 5 ದಿನಗಳ ಕಾಲ ಲಿಂ. ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಸಮಾರಂಭ. ಭಕ್ತರ ಹೃದಯಸಿಂಹಾಸನಾಧೀಶ – ಲಿಂ. ಶಿವಕುಮಾರ ಶ್ರೀಗಳು

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಸೆ. 18: ಸಿರಿಗೆರೆ ಬೃಹನ್ಮಠದ ಹಿರಿಯ ಲಿಂ. ಶ್ರೀಗಳಾದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 32ನೇ ಶ್ರದ್ಧಾಂಜಲಿ ಸಮಾರಂಭವು ಸೆ.20 ರಿಂದ 24ರವರೆಗೆ ಸಿರಿಗೆರೆಯ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಅದ್ದೂರಿಯಾಗಿ ಜರುಗಲಿದ್ದು, ಸಿದ್ದತೆಗಳು ಭರದಿಂದ ಸಾಗಿವೆ ಎಂದು ಸಿರಿಗೆರಡ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಕಾರ್ಯದರ್ಶಿ ಜಿ.ಆರ್.ಓಂಕಾರಪ್ಪ ತಿಳಿಸಿದರು.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,

ಸೆ. 20 ಶುಕ್ರವಾರ ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಾವಣಗೆರೆ ಲೋಕಸಭಾ ಸದಸ್ಯರಾದ
ಡಾ.ಪ್ರಭಾಮಲ್ಲಿಕಾರ್ಜುನ್, ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ವಿಧಾನಪರಿಷÀತ್ ಶಾಸಕರಾದ ಡಾ. ಧನಂಜಯ ಸರ್ಜಿ
ಹಾಗೂ ಅತಿಥಿಗಳಾಗಿ ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಶಿವಮೊಗ್ಗ ಹಾಲುಒಕ್ಕೂಟಸಂಘದ ಅಧ್ಯಕ್ಷರಾದ ವಿದ್ಯಾಧರ್, ಹಾಸ್ಯ
ಸಾಹಿತಿಗಳಾದ ಎಂ.ಎಸ್.ನರಸಿಂಹಮೂರ್ತಿ ಆಗಮಿಸಲಿದ್ದು, ಬಸವರಾಜ ಗಿರಿಯಾಪುರ ಉಪನ್ಯಾಸ ನೀಡಲಿದ್ದು, ಅಕ್ಕನ ಬಳಗದಿಂದ
ವಚನಗೀತೆ, ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಜೊತೆಗೆ ತರಳಬಾಳು ಕಲಾ ಸಂಘದಿಂದ ಭರತನಾಟ್ಯ ಕಾರ್ಯಕ್ರಮಗಳು
ಜರುಗಲಿದೆ.

ಸೆ.21ರ ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಿತ್ರದುರ್ಗ ಲೋಕಸಭಾ ಸದಸ್ಯರಾದ ಗೋವಿಂದ
ಕಾರಜೋಳ, ಶಾಸಕ ಎಚ್.ಡಿ.ತಮ್ಮಯ್ಯ, ಮಾಜಿ ಸಚಿವ ಹೆಚ್. ಆಂಜನೇಯ, ಅತಿಥಿಗಳಾಗಿ ದಾವಣಗೆರೆಯ ಜಿಲ್ಲಾಧಿಕಾರಿ
ಡಿ.ಎಂ.ಗಂಗಾಧರಸ್ವಾಮಿ, ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿಗಳಾದ ರಂಜಿತ್‍ಕುಮಾರ್‍ಮೀನಾ, ಮಾಜಿ ಶಾಸಕ ಬೆಳ್ಳಿಪ್ರಕಾಶ್
ಆಗಮಿಸಲಿದ್ದು, ಸುಮತಿ ಜಯಪ್ಪರವರು ಉಪನ್ಯಾಸ ನೀಡಲಿದ್ದು, ವಚನಗೀತೆ, ನೃತ್ಯ ಪ್ರದರ್ಶನ, ಮೂಡಲಪಾಯ ಯಕ್ಷಗಾನ
ಕಾರ್ಯಕ್ರಮಗಳು ಜರುಗಲಿವೆ.

ಸೆ. 22ರ ಭಾನುವಾರ ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕ ಡಾ.ಎಂ.ಚಂದ್ರಪ್ಪ, ಶಾಸಕರಾದ
ಶಿವಗಂಗಾಬಸವರಾಜ್, ಬಿ.ದೇವೇಂದ್ರಪ್ಪ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಶುಭಧನಂಜಯ್,
ರಂಗಕರ್ಮಿಗಳಾದ ಎಸ್.ಎನ್.ಸೇತುರಾಂ, ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್, ವೈ.ವೃಷಬೇಂದ್ರಪ್ಪ
ಉಪನ್ಯಾಸ ನೀಡಲಿದ್ದು, ಹಿಂದುಸ್ತಾನಿ ಗಾಯಕರಾದ ಯಶವಂತ ಬಡೀಗೇರ ಅವರಿಂದ ವಚನಗಾಯನ, ತರಳಬಾಳು ಕಲಾಸಂಘದಿಂದ
ಮಲ್ಲಿಹಗ್ಗ ಮತ್ತು ಯಕ್ಷಗಾನ ಪ್ರಸ್ತುತಿ ಜರುಗಲಿವೆ.

ಸೆ. 23ರ ಸೋಮವಾರ ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕರಾದ
ಬಿ.ವೈ.ವಿಜಯೇಂದ್ರ, ಡಿ.ಜೆ.ಶಾಂತನಗೌಡ, ಅಂತರಾಷ್ಟ್ರೀಯ ಕೃಷಿ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಎಲ್.ಕೃಷ್ಣಮೂರ್ತಿ, ಕರ್ನಾಟಕ
ನಾಟಕ ಅಕಾಡೆಮಿ ಅಧ್ಯಕ್ಷರಾದ ನಾಗರಾಜ ಮೂರ್ತಿ, ಕುಲಪತಿಗಳಾದ ಸೂರ್ಯಪ್ರಸಾದ್ ಆಗಮಿಸಲಿದ್ದು, ನಿವೃತ್ತ ಪ್ರಾಚಾರ್ಯರಾದ
ಡಾ.ನಾ.ಲೋಕೇಶ್ ಒಡೆಯರ್ ಉಪನ್ಯಾಸ ನೀಡಲಿದ್ದು, ಸಿರಿಗೆರೆಯ ತರಳಬಾಳು ಕಲಾಸಂಘದಿಂದ ಮಲ್ಲಕಂಬ ಮತ್ತು ಶರಣಸಂಕುಲ
ನೃತ್ಯ ರೂಪಕಗಳು ಜರುಗಲಿವೆ.

ಸೆ.24ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯಸಾನಿಧ್ಯ
ವಹಿಸಲಿದ್ದು, ಸುಪ್ರೀಂ ಕೋಟ್ ನಿವೃತ್ತ ನ್ಯಾಯಾಧೀಶರಾದ ಶಿವರಾಜ್.ವಿ. ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಮಾನ್
ಸಾಧುಸಧರ್ಮ ವೀರಶೈವ ಸಂಘದ ಅಧ್ಯಕ್ಷರಾದ ಹೆಚ್.ಆರ್.ಬಸವರಾಜಪ್ಪ ಗುರುವಂದನೆ ನಡೆಸಿಕೊಡಲಿದ್ದು, ಮುಖ್ಯ ಅತಿಥಿಗಳಾಗಿ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹಸಚಿವ ಡಾ.ಜಿ.ಪರಮೇಶ್ವರ್, ಸಚಿವ ಎಂ.ಬಿ.ಪಾಟೀಲ್, ಸಚಿವರಾದ
ಈಶ್ವರ್.ಬಿ.ಖಂಡ್ರೆ, ಮಾಜಿ ಕೇಂದ್ರಸಚಿವ ಜಿ.ಎಂ.ಸಿದ್ದೇಶ್ವರ, ಶಂಕರ.ಎಂ.ಬಿದರಿ ಆಗಮಿಸಲಿದ್ದು, ನೀರಾವರಿ ನಿಗಮದ ವ್ಯವಸ್ಥಾಪಕ
ನಿರ್ದೇಶಕರಾದ ರಾಜೇಶ್ ಅಮ್ಮಿನಭಾವಿ, ಶಾಸಕ ಯು.ಬಿ.ಬಣಕಾರ ಆಗಮಿಸಲಿದ್ದ, ತೋಟಪ್ಪ ಉತ್ತಂಗಿ ಅವರಿಂದ ವಚನಗೀತೆ ಹಾಗೂ
ತರಳಬಾಳು ಕಲಾಸಂಘದಿಂದ ವಚನ ನೃತ್ಯಗಳು ಜರುಗಲಿವೆ.

ಕೃತಿಗಳ ಲೋಕಾರ್ಪಣೆ : ತರಳಬಾಳು ಪ್ರಕಾಶನದ ಸಾಹಿತ್ಯ ಸಿರಿ ಮಾಲಿಕೆಯ ಕೃತಿಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ
ಸ್ವಾಮೀಜಿಗ¼ ವಿರಚಿತ ಆತ್ಮ ನಿವೇದನೆ, ಸಂಕಲ್ಪ, ಅಕ್ಕಮಹಾದೇವಿ ಕೆ ವಚನ್, ಅಲ್ಲಮ್ಮಪ್ರಭು ಕೆ ವಚನ್ ಕೃತಿಗಳು
ಲೋಕಾರ್ಪಣೆಗೊಳ್ಳಲಿವೆ.

ದಾಸೋಹಕ್ಕೆ ಭಕ್ತಿ ಸಮರ್ಪಣೆ. : ಪ್ರತಿವರ್ಷದಂತೆ ಈ ವರ್ಷವೂ ಸಹ ಲಿಂ. ಶ್ರೀಗಳ ಶ್ರದ್ಧಾಂಜಲಿಗೆ ಚನ್ನಗಿರಿಯ ತುಮ್ಕೋಸ್ ಅವರಿಂದ
ಲಾಡು ಪ್ರಸಾದ, ನಾಗತಿಬೆಳಗಲು, ಭದ್ರಾವತಿ, ಶಿವಮೊಗ್ಗ, ಹರಿಹರ, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಶಿಷ್ಯ ಮಂಡಳಿ, ಯಲವಟ್ಟಿ,
ಎಂ.ಹನುಮನಹಳ್ಳಿ ಗ್ರಾಮಸ್ಥರು, ಹಾಗೂ ಸಿರಿಗೆರೆ ಮತ್ತು ಸುತ್ತಮುತ್ತಲ ಗ್ರಾಮಾಂತರ ಶಿಷ್ಯ ಮಂಡಳಿಯವರಿಂದ ಅಕ್ಕಿ, ಬೇಳೆ, ಬೆಲ್ಲ
ಮುತಾಂದ ದಾಸೋಹ ಸಾಮಗ್ರಿಗಳನ್ನು ಸಮರ್ಪಿಸಲಿದ್ದಾರೆ. ಸಿರಿಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಜೊತೆಗೆ ಹರಪನಹಳ್ಳಿ
ತಾಲೂಕಿನ ಶಿಷ್ಯ ಮಂಡಳಿಯವರು ದಾಸೋಹ ಸೇವಕರ್ತರಾಗಿ ಸೇವೆ ಸಲ್ಲಿಸಲಿದ್ದಾರೆ.

ಸಮಾಜಮುಖಿ ಕಾರ್ಯಕ್ರಮಗಳು.
ಸೆ.22ರ ಭಾನುವಾರ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಪಶು ಚಿಕಿತ್ಸಾಲಯದಲ್ಲಿ ಉಚಿತ ಪಶು ಚಿಕಿತ್ಸೆ ಜರುಗಲಿದ್ದು, 23ರ
ಸೋಮವಾರ ಬೆಳಗ್ಗೆ ಐಕ್ಯಮಂಟಪದ ಆವರಣದಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಶಿವಮಂತ್ರಲೇಖನ, 10 ಗಂಟೆಗೆ ರಕ್ತದಾನ ಮತ್ತು
ಉಚಿತ ಕಣ್ಣಿನ ತಪಾಸಣೆ ಹಾಗೂ 11 ಗಂಟೆಗೆ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ
ನೌಕರರ ಸಮಾವೇಶ ಜರಗಲಿದೆ. ಸಂಜೆ 4 ಗಂಟೆಗೆ ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಭಾವಚಿತ್ರದ
ಮೆರವಣಿಗೆಯು ಸಿರಿಗೆರೆಯ ಪ್ರಮುಖ ಬೀದಿಗಳಲ್ಲಿ ಜನಪದ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಜರುಗಲಿದೆ. ಸೆ.24ರ ಮಂಗಳವಾರ
ಐಕ್ಯಮಂಟಪದಲ್ಲಿ ಲಿಂ. ಶಿವಕುಮಾರ ಶ್ರೀಗಳ ಕತೃ ಗದ್ದಿಗೆ ವಿಶೇಷ ಪೂಜೆ ಹಾಗೂ ಮಹಾರುದ್ರಾಭಿಷೇಕ, ಶ್ರೀಗಳಿಂದ ಪುಷ್ಪ ನಮನ,
10.30ಕ್ಕೆ ಶಿವ ಧ್ವಜಾರೋಹಣ ಮುಂತಾದ ಕಾರ್ಯಕ್ರಮಗಳು ಜರುಗಲಿವೆ.

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿ ಗಳವರ 32ನೇ ಶ್ರದ್ಧಾಂಜಲಿ ಸಮಾರಂಭದ ವೇದಿಕೆ. ಈ ಸಭಾ ವೇದಿಕೆಯಲ್ಲಿ ಸುಮಾರು
5000 ಜನ ಕುಳಿತುಕೊಂಡು ಸಭಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಪ್ರಸಾದದ ವ್ಯವಸ್ಥೆಯಲ್ಲಿ ಸುಮಾರು ನಾಲ್ಕು ಸಾವಿರ ಜನ
ಒಂದೇ ಬಾರಿ ಕುಳಿತುಕೊಂಡು ಪ್ರಸಾದ ವ್ಯವಸ್ಥೆ ಮಾಡಬಹುದು. ಇಪ್ಪತ್ತನೇ ತಾರೀಕಿನಿಂದ 25 ರ ತನಕ ತಿಂಡಿ ಪ್ರಸಾದ ವ್ಯವಸ್ಥೆ
ಇರುತ್ತದೆ. ಪ್ರಸಾದದಲ್ಲಿ ಪಲ್ಯ. ಅನ್ನ ಸಾಂಬಾರು ಪಾಯಸ. ಮಜ್ಜಿಗೆ ವ್ಯವಸ್ಥೆ ಇದ್ದು. 23 ಮತ್ತು 24ರಂದು ಲಾಡು ಜುಲಾಬಿಯ ವ್ಯವಸ್ಥೆ
ಇರುತ್ತದೆ.

Leave a Reply

Your email address will not be published. Required fields are marked *