T-20 World Cup : ಟಿ20 ವಿಶ್ವಕಪ್‌ನ ನ್ಯೂಜಿಲೆಂಡ್‌ನ ಅಂತಿಮ ಪಂದ್ಯದಲ್ಲಿ ಕ್ರಿಕೆಟ್ ಶಿಶು ಪಿಎನ್ಜಿ ವಿರುದ್ಧ ಬಲಗೈ ವೇಗದ ಬೌಲರ್ ವೃತ್ತಿ ಜೀವನದ ಅತ್ಯುತ್ತಮ ಸ್ಪೆಲ್ ಮಾಡಿದ್ದಾರೆ. ದಾಖಲೆಯ 24 ಡಾಟ್ ಬಾಲ್‌ಗಳನ್ನು ಬೌಲ್ ಮಾಡುವ ಮೂಲಕ ನಂಬಲಸಾಧ್ಯವಾದ ದಾಖಲೆ ಮಾಡಿದ್ದಾರೆ.

ಟ್ರಿನಿಡಾಡ್‌ನಲ್ಲಿ ಸೋಮವಾರ ನಡೆದ ಪಪುವಾ ನ್ಯೂಗಿನಿಯಾ ವಿರುದ್ಧದ ಸಿ ಗುಂಪಿನ ಹಣಾಹಣಿಯಲ್ಲಿ ನ್ಯೂಜಿಲೆಂಡ್‌ನ ವೇಗಿ ಲಾಕಿ ಫರ್ಗುಸನ್ ಟಿ20 ವಿಶ್ವಕಪ್ನಲ್ಲಿ ಯಾರೂ ಊಹೆ ಮಾಡಲಾಗದ ವಿಶೇಷ ದಾಖಲೆ ಮಾಡಿದ್ದಾರೆ.
ಟಿ20 ವಿಶ್ವಕಪ್‌ನ ನ್ಯೂಜಿಲೆಂಡ್‌ನ ಅಂತಿಮ ಪಂದ್ಯದಲ್ಲಿ ಕ್ರಿಕೆಟ್ ಶಿಶು ಪಿಎನ್ಜಿ ವಿರುದ್ಧ ಬಲಗೈ ವೇಗದ ಬೌಲರ್ ವೃತ್ತಿ ಜೀವನದ ಅತ್ಯುತ್ತಮ ಸ್ಪೆಲ್ ಮಾಡಿದ್ದಾರೆ. ಫರ್ಗುಸನ್ ದಾಖಲೆಯ 24 ಡಾಟ್ ಬಾಲ್‌ಗಳನ್ನು ಬೌಲ್ ಮಾಡುವ ಮೂಲಕ ನಂಬಲಸಾಧ್ಯವಾದ ದಾಖಲೆ ಮಾಡಿದ್ದಾರೆ.
ಈ ಪಂದ್ಯದಲ್ಲಿ ಕೀವಿಸ್ ವೇಗಿ ತಾನೆಸೆದ ಎಲ್ಲಾ 4 ಓವರ್ಗಳನ್ನ ಮೇಡನ್ ಮಾಡಿ ಮೂರು ವಿಕೆಟ್ ಪಡೆಯುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ವಿಶ್ವದಾಖಲೆ ಬರೆದಿದ್ದಾರೆ.
ಪವರ್ ಪ್ಲೇ ವೇಳೆ ನಾಲ್ಕನೇ ಓವರ್ನಲ್ಲಿ ಬೌಲಿಂಗ್ಗೆ ಇಳಿದ ಫರ್ಗ್ಯಸನ್ ಸತತವಾಗಿ 24 ಡಾಟ್ ಬಾಲ್ ಎಸೆದರು. W,0,0,0,0,0,0,0,0,0,0,0,0,W,0,0,0,0,0,W,0,0,0,0. ಹೀಗೆ ಸತತ 24 ಎಸೆತಗಳನ್ನ ಡಾಟ್ ಬಾಲ್ ಮಾಡಿದರು. ಜೊತೆ ಮೂರು ವಿಕೆಟ್ ಪಡೆದು ಅಂತಾರಾಷ್ಟ್ರೀಯ ಟಿ20ಯಲ್ಲಿ ಹೊಸ ದಾಖಲೆ ನಿರ್ಮಿಸಿದರು.
ಟಿ20 ಕ್ರಿಕೆಟ್ನಲ್ಲಿ 0 ಎಕಾನಮಿಯಲ್ಲಿ ಬೌಲಿಂಗ್ ಮಾಡಿರುವ ಫರ್ಗ್ಯಸನ್, ಕ್ರಿಕೆಟ್ ಚರಿತ್ರೆಯಲ್ಲೇ ಯಾರೂ ಮಾಡದ ದಾಖಲೆ ಮಾಡಿದ್ದಾರೆ. ಭವಿಷ್ಯದಲ್ಲಿ ಈ ದಾಖಲೆಯನ್ನ ಯಾವೊಬ್ಬ ಬೌಲರ್ ಮುರಿಯುವ ಸಾಧ್ಯತೆ ಕೂಡ ಇಲ್ಲ. ಚುಟುಕು ಕ್ರಿಕೆಟ್ನಲ್ಲಿ ಇದೊಂದು ವಿಶೇಷ ದಾಖಲೆಯಾಗಿ ಉಳಿದುಕೊಳ್ಳುತ್ತದೆ ಎಂದು ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದಕ್ಕೂ ಮೊದಲು ಕಡಿಮೆ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ ವಿಶ್ವದಾಖಲೆ ಕೂಡ ಕಿವೀಸ್ ಬೌಲರ್ ಹೆಸರಿನಲ್ಲಿತ್ತು. ಅನುಭವಿ ವೇಗಿ ಟಿಮ್ ಸೌಥಿ 4 ಓವರ್ ಎಸೆದು 3 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಇದೇ ಅವರದ್ದೇ ದೇಶದ ಫರ್ಗ್ಯುಸನ್ ಆ ದಾಖಲೆಯನ್ನ ಮುರಿದಿದ್ದಾರೆ.
ಲಾಕಿ ಫರ್ಗ್ಯುಸನ್ಗೂ ಮೊದಲು ಇದೇ ಸಾಧನೆಯನ್ನ ಮತ್ತೊಬ್ಬ ಬೌಲರ್ ಕೂಡ ಮಾಡಿದ್ದರು. ನೆದರ್ಲೆಂಡ್ಸ್ನ ಸಾದ್ ಬಿನ್ ಜಫರ್ ಕೂಡ 4 ಓವರ್ ಮೇಡನ್ ಮಾಡಿದ್ದರು. ಆದರೆ ಅವರು 2 ವಿಕೆಟ್ ಪಡೆದಿದ್ದರು. ಆದರೆ ವಿಶ್ವಕಪ್ ಇತಿಹಾಸದಲ್ಲಿ ಎಲ್ಲಾ 24 ಎಸೆತಗಳನ್ನ ಡಾಟ್ ಮಾಲ್ ಮಾಡಿದ ಏಕೈಕ ಬೌಲರ್ ಎಂಬ ಖ್ಯಾತಿಗೆ ಫರ್ಗ್ಯುಸನ್ ಪಾತ್ರರಾಗಿದ್ದಾರೆ.