
ಈಚೆಗೆ ಚೆನ್ನೈನಲ್ಲಿ ನಡೆದ ‘ಥಗ್ ಲೈಫ್’ ಸಿನಿಮಾದ ಇವೆಂಟ್‌ನಲ್ಲಿ ಕಮಲ್ ಹಾಸನ್ ಅವರು ನೀಡಿದ ಹೇಳಿಕೆ ಈಗ ವಿವಾದದ ಬೆಂಕಿ ಹೊತ್ತಿಸಿದೆ. ಕನ್ನಡ ನಟ ಶಿವರಾಜ್‌ಕುಮಾರ್ ಅವರ ಎದುರಿನಲ್ಲೇ “ತಮಿಳಿನಿಂದ ಕನ್ನಡ ಹುಟ್ಟಿತು” ಎಂಬ ಮಾತನ್ನ ಕಮಲ್ ಹಾಸನ್ ಹೇಳಿದ್ದರು. ಅದು ವಿವಾದವನ್ನು ಹುಟ್ಟುಹಾಕಿತ್ತು. ಆ ಬಗ್ಗೆ ಕಮಲ್ ಅವರೇ ಕೇರಳದಲ್ಲಿ ಸ್ಪಷ್ಟನೆ ನೀಡಿದ್ದಾರೆ.
- ಥಗ್ ಲೈಫ್’ ಸಿನಿಮಾ ಇವೆಂಟ್‌ನಲ್ಲಿ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಮಲ್
- ಕಮಲ್ ಹಾಸನ್ ಅವರ ಹೇಳಿಕೆಗೆ ಕನ್ನಡಿಗರಿಂದ ಭಾರೀ ಆಕ್ರೋಶ
- ತಮ್ಮ ಹೇಳಿಕೆಯ ಕುರಿತು ಇದೀಗ ಕಮಲ್ ಹಾಸನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬಹುಭಾಷಾ ನಟ ಕಮಲ್ ಹಾಸನ್ ಅವರು ಸದ್ಯ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. “ತಮಿಳಿನಿಂದ ಕನ್ನಡ ಹುಟ್ಟಿತು” ಎಂದು ಅವರ ಹೇಳಿಕೆ ಕನ್ನಡಿಗರ ಕಣ್ಣನ್ನು ಕೆಂಪಾಗಿಸಿದೆ. ಈಗಾಗಲೇ ಅವರ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ತಮ್ಮ ಹೇಳಿಕೆಯಿಂದ ಉಂಟಾಗಿರುವ ವಿವಾದಕ್ಕೆ ಪ್ರತಿಕ್ರಿಯೆ ನೀಡಿರುವ ಕಮಲ್ ಹಾಸನ್, “ಪ್ರೀತಿ ಎಂದಿಗೂ ಕ್ಷಮೆ ಕೇಳುವುದಿಲ್ಲ” ಎಂದು ಹೇಳಿದ್ದಾರೆ.
ತಮಿಳುನಾಡು ವಿಶೇಷವಾದ ರಾಜ್ಯ
“ನನ್ನ ಮಾತನ್ನು ತಪ್ಪಾ ಅರ್ಥೈಸಲಾಗಿದೆ. ನಾನು ಏನೂ ಹೇಳಿದ್ದೇನೋ, ಅದೆಲ್ಲವನ್ನು ಬಹಳಷ್ಟು ಪ್ರೀತಿಯಿಂದಲೇ ಹೇಳಿದ್ದೇನೆ. ನನಗೆ ಭಾಷಾ ಇತಿಹಾಸದ ಬಗ್ಗೆ ಸಾಕಷ್ಟು ಇತಿಹಾಸಕಾರರು ನನಗೆ ಕಲಿಸಿದ್ದಾರೆ. ಇಷ್ಟರ ಹೊರತಾಗಿ ಬೇರೆ ಯಾವ ಉದ್ದೇಶದಿಂದಲೂ ನಾನು ಆ ಮಾತನ್ನು ಹೇಳಿಲ್ಲ. ನಾನು ಒಂದು ಮಾತು ಹೇಳುತ್ತೇನೆ. ತಮಿಳುನಾಡು ವಿಶೇಷವಾದ ರಾಜ್ಯ. ಹಾಗಂತ, ಬೇರೆ ಯಾವ ರಾಜ್ಯಗಳು ಆ ರೀತಿ ಇಲ್ಲ ಎಂದಲ್ಲ” ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಮಂಡ್ಯದವರು ನಮ್ ರಾಜ್ಯದಲ್ಲಿ ಸಿಎಂ ಆಗಿದ್ದರು
“ತಮಿಳುನಾಡು ಯಾಕೆ ವಿಶೇಷ ಎಂದರೆ, ಅಲ್ಲಿ ಒಬ್ಬ ಮೆನನ್ ಮುಖ್ಯಮಂತ್ರಿಯಾಗಿದ್ದಾರೆ. ಓರ್ವ ರೆಡ್ಡಿ ನಮ್ಮ ಸಿಎಂ ಆಗಿದ್ದಾರೆ. ತಮಿಳಿನವರು ಮುಖ್ಯಮಂತ್ರಿಯಾಗಿದ್ದಾರೆ. ಮಂಡ್ಯದ ಕನ್ನಡಿಗ ಐಯ್ಯಂಗಾರ್ ಕೂಡ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ ಮತ್ತು ಅದೇ ಸಿಎಂನಿಂದ ನನಗೆ ಚೆನ್ನೈನಲ್ಲಿ ತೊಂದರೆ ಆಗಿತ್ತು. ಆಗ ಕರ್ನಾಟಕ ನನಗೆ ಸಪೋರ್ಟ್ ಮಾಡಿತ್ತು. ‘ಬನ್ನಿ ಇಲ್ಲಿ, ನಿಮಗೆ ನಾವು ಮನೆ ಕೊಡುತ್ತೇವೆ. ನೀವು ಎಲ್ಲಿಗೂ ಹೊಗಬೇಡಿ’ ಎಂದು ಕನ್ನಡಿಗರು ಹೇಳಿದ್ದರು. ಅವರು ಥಗ್ ಲೈಫ್ ಅನ್ನು ಕ್ಷೇಮವಾಗಿ ನೋಡಿಕೊಳ್ಳುತ್ತಾರೆ” ಎಂದು ಕಮಲ್ ಹಾಸನ್ ಹೇಳಿಕೊಂಡಿದ್ದಾರೆ.
ರಾಜಕಾರಣಿಗಳಿಗೆ ಭಾಷಾ ಜ್ಞಾನ ಇಲ್ಲ!
“ನಾನು ಸೇರಿದಂತೆ ಯಾವ ರಾಜಕಾರಣಿಗಳಿಗೂ ಭಾಷೆಯ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ. ಯಾರಿಗೂ ಕೂಡ ಭಾಷೆಯ ಬಗ್ಗೆ ಮಾತನಾಡುವಷ್ಟು ಶಿಕ್ಷಣ ಪಡೆದಿಲ್ಲ. ಆದ್ದರಿಂದ ಈ ಭಾಷೆ ಕುರಿತ ಆಳವಾದ ಚರ್ಚೆಯನ್ನು ಇತಿಹಾಸಕಾರರು, ಪುರಾತತ್ವ ತಜ್ಞರು ಹಾಗೂ ಭಾಷಾ ಪಂಡಿತರಿಗೆ ನೀಡೋಣ” ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಸಂಶೋಧಕರು ಯಾವುದು ಸರಿ ಎಂದು ಹೇಳಬೇಕು
“ರಾಜ್‌ಕುಮಾರ್ ಅಣ್ಣ ನನಗೆ ತಂದೆಯಂತೆ, ಸಹೋದರಂತೆ. ನಾವೆಲ್ಲಾ ಒಂದು ಕುಟುಂಬ. ಪ್ರೀತಿಯಿಂದ ಹೇಳಿದ ಮಾತನ್ನು ಟೀಕೆ ಮಾಡಲಾಗಿದೆ. ಅವರ ದೃಷ್ಟಿಕೋನದಿಂದ ನೋಡಿದಾಗ ಅವರದ್ದು ಹೇಳಿದ್ದು ಸರಿ ಅನ್ನಿಸಬಹುದು. ನನ್ನ ದೃಷ್ಟಿಕೋನದಿಂದ ನೋಡಿದಾಗ ನನಗೆ ನಾನು ಹೇಳಿದ್ದೇ ಸರಿ ಎನಿಸಬಹುದು. ಆದರೆ ಅದಕ್ಕೆ ಮೂರನೇ ಆಂಗಲ್ ಕೂಡ ಒಂದು ಇದೆ. ಸಂಶೋಧಕರು, ಭಾಷಾ ತಜ್ಞರು ಈ ಎರಡರಲ್ಲಿ ಯಾವುದು ಸರಿ ಎಂದು ಹೇಳಬೇಕು” ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಪ್ರೀತಿ ಎಂದಿಗೂ ಕ್ಷಮೆ ಕೇಳುವುದಿಲ್ಲ
“ಈಗ ನಾವೆಲ್ಲರೂ ಒಂದು ಎಲ್ಲರೂ ನಿರ್ಣಯ ಮಾಡಬೇಕಿದೆ. ಕುಟುಂಬದ ಜೊತೆಗೆ ಇರಬೇಕೋ ಅಥವಾ ಉತ್ತರದಿಂದ ಬಂದ ಭಾಷೆಯ ಜೊತೆಗೆ ಇರಬೇಕೋ ಎಂಬುದನ್ನು ನಾವು ನಿರ್ಧಾರ ಮಾಡಬೇಕಿದೆ. ಇದು ಪ್ರಜಾಪ್ರಭುತ್ವ ದೇಶ. ಇದು ನಿಮಗೆ ನಾನು ನೀಡಿರುವುದು ಉತ್ತರವಲ್ಲ, ಸ್ಪಷ್ಟನೆ. ಪ್ರೀತಿ ಎಂದಿಗೂ ಕ್ಷಮೆ ಕೇಳುವುದಿಲ್ಲ” ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.
Vijayakarnataka
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1