ಮಹೇಶ್ ಬಾಬು ಶ್ರೀಮಂತರೆ. ಆದ್ರೆ ಶ್ರೀಮಂತ ಮನೆಯಲ್ಲಿ ಹುಟ್ಟಿರುವ ಸಿತಾರ ಈಗಲೇ ದುಡಿಮೆ ಮಾಡುವುದಕ್ಕೆ ಆರಂಭಿಸಿದ್ದಾಳೆ. ಅದು ತನ್ನ ಹತ್ತು ವರ್ಷಕ್ಕೆ ಲಕ್ಷ ಲಕ್ಷ ಹಣ ದುಡಿಯುತ್ತಿದ್ದಾಳೆ. ಸಿನಿಮಾದಿಂದಾನೋ, ಧಾರಾವಾಹಿಯಿಂದನೋ ಅಲ್ಲ. ಸಿತಾರ ದುಡಿಯುತ್ತಿರುವುದು ತನ್ನ ಸೋಷಿಯಲ್ ಮೀಡಿಯಾ ಮೂಲಕ.
ಸಿತಾರ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿರುತ್ತಾರೆ. ಒಳ್ಳೆ ಡ್ಯಾನ್ಸರ್ ಕೂಡ. ಆಗಾಗ ಡ್ಯಾನ್ಸ್ ಮಾಡಿದ ವಿಡಯೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾ ಇರುತ್ತಾರೆ. ಹಾಗೇ ಸಿತಾರಾಗೆ ಇನ್ಸ್ಟಾಗ್ರಾಮ್ನಲ್ಲಿ 1 ಮಿಲಿಯನ್ ಗಿಂತ ಹೆಚ್ಚಿನ ಫಾಲೋವರ್ಸ್ ಇದ್ದಾರೆ. ಈಗಾಗಲೇ ಸ್ಟಾರ್ ಕಿಡ್ ಆಗಿ ಸಿತಾರ ಸಾಕಷ್ಟು ಫೇಮಸ್ ಆಗಿ ಬಿಟ್ಟಿದ್ದಾಳೆ.
ಸಿತಾರಾಗೆ ಇನ್ನು 10 ವರ್ಷ. ನಿರ್ಮಾಪಕರೆಲ್ಲಾ ಅದ್ಯಾವಾಗ ಸಿತಾರಳನ್ನು ಯಾವಾಗ ಲಾಂಚ್ ಮಾಡುತ್ತೀವೋ ಅಂತ ಕಾಯುತ್ತಿದ್ದಾರೆ. ಈಗಾಗಲೇ ಸಿತಾರ ಬಾಲ ನಟಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಪ್ಪನ ಸಿನಿಮಾಗಳನ್ನು ಹೆಚ್ಚಿನ ಮಟ್ಟದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪ್ರಮೋಟ್ ಮಾಡುವುದೇ ಸಿತಾರ.
ಬರೀ ತಂದೆಯ ಸಿನಿಮಾಗಳನ್ನು ಮಾತ್ರವಲ್ಲ, ಬೇರೆ ಬೇರೆ ಸಿನಿಮಾಗಳನ್ನು ಸಪೋರ್ಟ್ ಮಾಡುತ್ತಾರೆ. ಇವರು ಒಂದೊಂದು ವಿಡಿಯೋ ಹಾಕುದ್ರು ದೊಡ್ಡ ಮಟ್ಟದಲ್ಲೊಯೇ ಶೇರ್ ಆಗುತ್ತೆ. ಇದೀಗ ಈ ಸ್ಟಾರ್ ಕಿಡ್ ಅಪ್ಪನ ಸಿನಿಮಾ ಆಥಡು ಸಿನಿಮಾದ ತ್ರಿಶಾ ಹೆಜ್ಜೆ ಹಾಕಿರುವ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಕೂಡ ಸಾಕಷ್ಟು ರೀಚ್ ಆಗಿದೆ.
ಹೀಗೆ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಂ ಮೂಲಕ ಸಿತಾರ ಈಗಲೇ ಲಕ್ಷ ಲಕ್ಷ ದುಡಿಯುತ್ತಿದ್ದಾರೆ. ಈಗಲೇ ತನ್ನ ಕಾಲ ಮೇಲೆ ತಾನು ನಿಂತಿದ್ದಾಳೆ. ಸಿತಾರ ಸೋಷಿಯಲ್ ಮೀಡಿಯಾವನ್ನು ಅವರ ತಾಯಿ ಮೆಂಟೈನ್ ಮಾಡುತ್ತಿದ್ದಾರೆ.
The post ಕೇವಲ 10 ವರ್ಷಕ್ಕೆ ಲಕ್ಷ ಲಕ್ಷ ದುಡಿಯುತ್ತಿದ್ದಾಳೆ ಮಹೇಶ್ ಬಾಬು ಮಗಳು..! first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/wLymtlM
via IFTTT