Malaysia Open 2023: ಪ್ರಣಯ್ ವಿರುದ್ಧ ಸೋತ ಲಕ್ಷ್ಯಸೇನ್; ಮೊದಲ ಸುತ್ತಿನಿಂದಲೇ ಹೊರಬಿದ್ದ ಸಿಂಧು- ಸೈನಾ..!

Malaysia Open 2023 Prannoy beats Lakshya Sen PV Sindhu Saina Nehwal out in first round

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಪಿವಿ ಸಿಂಧು ಮತ್ತು ಲಕ್ಷ್ಯ ಸೇನ್ (PV Sindhu and Lakshya Sen) ಹೊಸ ವರ್ಷವನ್ನು ಸೋಲಿನೊಂದಿಗೆ ಆರಂಭಿಸಿದ್ದಾರೆ. ಪ್ರಸ್ತುತ ಮಲೇಷ್ಯಾದಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್ (Malaysia Open) ಸೂಪರ್ 1000 ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಈ ಇಬ್ಬರೂ ಸ್ಟಾರ್ ಶೆಟ್ಲರ್ಸ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಅವರನ್ನು ಮಾಜಿ ಒಲಿಂಪಿಕ್ ಚಾಂಪಿಯನ್ ಕರೋಲಿನಾ ಮರಿನ್ ಸೋಲಿಸಿದರೆ, ದೇಶವಾಸಿ ಲಕ್ಷ್ಯಸೇನ್ ಅವರನ್ನು ಸೋಲಿಸಿದ ಎಚ್.ಎಸ್.ಪ್ರಣಯ್ ಮುಂದಿನ ಸುತ್ತಿಗೆ ಎಂಟ್ರಿಕೊಟ್ಟಿದ್ದಾರೆ. ಆದರೆ, ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ (Satwik Sairaj Ranki Reddy and Chirag Shetty) ಜೋಡಿ ಮಾತ್ರ ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇತ್ತ ಮತ್ತೊಬ್ಬ ಸ್ಟಾರ್ ಶೆಟ್ಲರ್ ಸೈನಾ ನೆಹ್ವಾಲ್ (Saina Nehwal) ಕೂಡ ಟೂರ್ನಿಯ ಮೊದಲ ದಿನವೇ ಮೊದಲ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.

source https://tv9kannada.com/sports/malaysia-open-2023-prannoy-beats-lakshya-sen-pv-sindhu-saina-nehwal-out-in-first-round-psr-au14-499452.html

Leave a Reply

Your email address will not be published. Required fields are marked *