
ಚಿತ್ರದುರ್ಗ, ಡಿ.20 : ಚಿತ್ರದುರ್ಗ ನಗರದ ಸಮಸ್ತ ಧ್ಯಾನಾಸಕ್ತರಿಗೆ ಈ ಮೂಲಕ ತಿಳಿಯಪಡಿಸುದೇನೆದರೆ ದಿನಾಂಕ:21-12-2024ರಂದು ವಿಶ್ವ ಸಂಸ್ಥೆಯು “ವಿಶ್ವ ಧ್ಯಾನ ದಿನ” ಎಂದು ಘೋಶಿಸಿರುವುದರಿಂದ ರಾಷ್ಟ್ರಕ್ಕೆ ಒಂದು ಮಹತ್ವದ ಸಂದರ್ಭವಾಗಿದೆ ಯುಎನ್ ಜನರಲ್ ಅಸೆಂಬ್ಲಿ ಯೋಗ ಮತ್ತು ಧ್ಯಾನದ ನಡುವಿನ ಸಂಬಂಧವನ್ನು ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಪೂರಕ ವಿಧಾನಗಳಾಗಿ ಅಂಗೀಕರಿಸಿದೆ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಅತ್ಯುನ್ನತ ಗುಣಮಟ್ಟದ ಆನಂದವನ್ನು ಅನಭವಿಸುವ ಪ್ರತಿಯೊಬ್ಬರ ಹಕ್ಕನ್ನು ನೆನಪಿಸುತ್ತದೆ, ಧ್ಯಾನವು ಭಾರತದ ಅದ್ಭುತ ಆಧ್ಯಾತ್ಮಿಕತೆಯ ಅವಿಭಾಜ್ಯಂಗವಾಗಿದೆ.
ಈ ದಿನವನ್ನು ಸ್ಮರಿಸುತ್ತಾ ಭಾರತೀಯ ಯೋಗ ಶಿಕ್ಷಣ ಸಂಸ್ಥೆ, ಚಿತ್ರದುರ್ಗ ಇವರು ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ಚಿತ್ರದುರ್ಗ, ಹಾರ್ಟ್ ಫುಲ್ ನೆಸ್ ಧ್ಯಾನ ಕೇಂದ್ರ, ಚಿತ್ರದುರ್ಗ ಇವರುಗಳ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯ ಧ್ಯಾನ ದಿನಾಚರಣೆ ಅಂಗವಾಗಿ ದಿನಾಂಕ 21/12/2024ರ ಶನಿವಾರ ಮುಂಜಾನೆ ಸಮಯ 5-30ರಿಂದ 7ಗಂಟೆಯವರೆಗೆ ನಗರದ ತುರುವನೂರು ರಸ್ತೆಯ ರೆಡ್ಡಿ ಕಲ್ಯಾಣ ಮಂಟಪದ ಎದುರಿನ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಸಾಮೂಹಿಕ ಧ್ಯಾನ ಕಾರ್ಯಕ್ರಮ ಆಯೋಜಿಸಲಾಗಿದ್ದು ಜಿಲ್ಲಾ ಆಯುಷ್ ಇಲಾಖೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ|| ಶಿವಕುಮಾರ್, ಡಾ|| ವಿಜಯಲಕ್ಷ್ಮಿ ಪಿ., ಶ್ರೀ ಪತಂಜಲಿ ಯೋಗ ಕೇಂದ್ರದ ಯೋಗ ಶಿಕ್ಷಕ ಮಹಲಿಂಗಪ್ಪ ಉಪಸ್ಥಿತರಿರುವರು ಚಿತ್ರದುರ್ಗ ನಗರದ ಧ್ಯಾನಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಲಾಭವನ್ನು ಪಡೆಯಬೇಕೆಂದು ಸಂಘಟಕರು ತಿಳಿಸಿದ್ದಾರೆ.