Amatekai  Benefits: ಅಮಟೆಕಾಯಿ ಬರೀ ಉಪ್ಪಿನಕಾಯಿಗೆ ಮಾತ್ರವಲ್ಲ.. ಉತ್ತಮ ಆರೋಗ್ಯಕ್ಕೂ ಸಹಕಾರಿ..!

Lifestyle: ಅಮಟೆಕಾಯಿ ಎನ್ನುತ್ತಿದ್ದತಂತೆ ಅದರ ಉಪ್ಪನಕಾಯಿ ನೆನಪಿಗೆ ಬರುತ್ತದೆ. ಬಾಯಲ್ಲಿ ನೀರು ತರಿಸುವ ಇದರ ಉಪ್ಪಿನಕಾಯಿ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಸಹಕಾರಿಯಾಗಿದೆ. ಅಮಟೆಕಾಯಿ ವಿಟಮಿನ್ ಸಿ ವಿಟಮಿನ್ ಎ,ಫೈಬರ್ ಅಂಶ ಹೇರಳವಾಗಿದೆ. 

ಅಮಟೆಕಾಯಿ ಎನ್ನುತ್ತಿದ್ದತಂತೆ ಅದರ ಉಪ್ಪನಕಾಯಿ ನೆನಪಿಗೆ ಬರುತ್ತದೆ. ಬಾಯಲ್ಲಿ ನೀರು ತರಿಸುವ ಇದರ ಉಪ್ಪಿನಕಾಯಿ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಸಹಕಾರಿಯಾಗಿದೆ. ಅಮಟೆಕಾಯಿ ವಿಟಮಿನ್ ಸಿ ವಿಟಮಿನ್ ಎ  ,ಫೈಬರ್ ಅಂಶ ಹೇರಳವಾಗಿದೆ. 

ಇದರಲ್ಲಿರುವ ಫೀನಾಲಿಕ್, ಫ್ಲೇವನಾಯ್ಡ್‌ ಸಂಯುಕ್ತಗಳು ದೇಹದ ರೋಗ ನಿರೋಧಕಗಳನ್ನು ಹೆಚ್ಚಿಸಲು ಸಹಕರಿಸುತ್ತದೆ. ಇದರ ಸೇವನೆಯಿಂದ ದೇಹವನ್ನು ಉತ್ತಮವಾಗಿರಿಸುತ್ತದೆ.  ದೀರ್ಘಕಾಲದ ಕಾಯಿಲೆಗಳ ಮಟ್ಟವನ್ನು ನಿಯಂತ್ರಿಸುತ್ತದೆ. 

ಅಮಟೆಯಲ್ಲಿ ವಿಟಮಿನ್ ಎ ಕಣ್ಣಿನ ಆರೋಗ್ಯ ವೃದ್ದಿಸುತ್ತದೆ. ಹಾಗೆಯೇ ಇದರಲ್ಲಿನ ಫೈಬರ್ ಅಂಶವು  ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ. ಕರುಳಿನ ಆರೋಗ್ಯ ಸಮಸ್ಯೆಯನ್ನು ವೃದ್ದಿಸುತ್ತದೆ.ಅದರ ಜೊತೆಗೆ  ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿ ತೂಕ ಇಳಿಕೆಗೆ ಸಹಕಾರಿಯಾಗಿದೆ.

ಅಮಟೆಕಾಯಿ ಉಪ್ಪಿನಕಾಯಿ
ಹದವಾಗಿ ಬೆಳೆದ, ಗೊರಟು ಇನ್ನೂ ಬಲಿಯದ ಅಮಟೆಕಾಯಿಯನ್ನು ಉಪ್ಪಿನಕಾಯಿ ಹಾಕಬಹುದಾಗಿದೆ. ಕಡಿಮೆ ಎಣ್ಣೆ ಬಳಸಿ ಇದನ್ನು ಶೇಕರಿಸಿರುವುದರಿಂದ ಒಂದು ವರ್ಷಗಳ ಕಾಲ ಇದರ ಉಪ್ಪಿನಕಾಯಿಯನ್ನು ಬಳಸಬಹುದಾಗಿದೆ.  ಈ ಕಾಯಿಯನ್ನು ಹಾಗೆ ಉಪ್ಪು ಮತ್ತು ಖಾರ ಪುಡಿ ಸೇರಿಸಿ ತಿನ್ನ ಬಹುದಾಗಿದೆ. ಚಿತ್ರದುರ್ಗ, ಭರಮಸಾಗರ, ಹರಪನಹಳ್ಳಿ, ದಾವಣಗೆರೆ ಸೇರಿದಂತೆ ಬಯಲುಸೀಮೆ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.

Source : https://zeenews.india.com/kannada/health/amatekai-is-not-only-for-pickling-it-also-helps-in-good-health-141078

Leave a Reply

Your email address will not be published. Required fields are marked *