ಗಣಿತ ಶಿಕ್ಷಕರ ಕೈಪಿಡಿ ‘ಸುಪ್ರಭಾ’ ಉಪನಿರ್ದೇಶಕರಿಂದ ಬಿಡುಗಡೆ..

ಚಿತ್ರದುರ್ಗ: ಉಪನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಚೇರಿ ಚಿತ್ರದುರ್ಗ, ಇಲ್ಲಿ ದಿನಾಂಕ 13.09.2023ರ ಬುಧವಾರದಂದು 8 9 ಮತ್ತು 10ನೇ ತರಗತಿ ಬೋಧಿಸುವ ಗಣಿತ ಶಿಕ್ಷಕರುಗಳಿಗೆ ಅನುಕೂಲವಾಗುವಂತೆ ಗಣಿತ ಶಿಕ್ಷಕರ ಕೈಪಿಡಿ ‘ಸುಪ್ರಭಾ’ ವನ್ನು ಬಿಡುಗಡೆಗೊಳಿಸಲಾಯಿತು.

ಕೈಪಿಡಿ ಬಿಡುಗಡೆ ಸಂದರ್ಭದಲ್ಲಿ ಉಪ ನಿರ್ದೇಶಕರಾದ ಶ್ರೀಯುತ ಕೆ ರವಿಶಂಕರ್ ರೆಡ್ಡಿ ಅವರು ಮಾತನಾಡುತ್ತಾ, ಗಣಿತ ಶಿಕ್ಷಕರು ಪ್ರಸ್ತುತ ಕೈಪಿಡಿಯ ಸದುಪಯೋಗವನ್ನು ಪಡೆದು, ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲಿಸುವ ಚಟುವಟಿಕೆಗಳು, ಪರೀಕ್ಷಾ ಪೂರಕ ಸಮಸ್ಯೆಗಳು ಹಾಗೂ ಉಲ್ಲಾಸದಾಯಕ ಶಾಲಾ ಸನ್ನಿವೇಶವನ್ನು ಸೃಷ್ಟಿಸಿ ಬೋಧನೆಯನ್ನು ಕೈಗೊಂಡು ಫಲಿತಾಂಶ ಉತ್ತಮಗೊಳಿಸುವಂತೆ ಸಲಹೆ ನೀಡಿದರು. ಪ್ರಸ್ತುತ ಸಾಲಿನ ಫಲಿತಾಂಶ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಹೊಂದಿದ್ದು. ಮುಂಬರುವ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶವನ್ನು ನಂಬರ್  ಒನ್  ಸ್ಥಾನವನ್ನು ಕಾಪಾಡಿಕೊಂಡು ಗುಣಾತ್ಮಕ ಫಲಿತಾಂಶವನ್ನು ಉತ್ತಮಗೊಳಿಸುವಂತೆ ಸಲಹೆ ನೀಡಿದರು.

ಪ್ರಸ್ತುತ ಕೈಬಿಡಿ ಕೈಪಿಡಿ ಬಿಡುಗಡೆ ಸಂದರ್ಭದಲ್ಲಿ ವಿದ್ಯಾಧಿಕಾರಿಗಳಾದ ಎನ್ ಆರ್ ತಿಪ್ಪೇಸ್ವಾಮಿ ಅವರು ಹಾಜರಿದ್ದರು ಹಾಗೂ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳ ಗಣಿತ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *