ನ್ಯೂಯಾರ್ಕ್: ಇತ್ತಿಚೆಗೆ ವಿದೇಶಗಳಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಮೆಕ್ ಡೊನಾಲ್ಡ್ ತನ್ನ ಸಹದ್ಯೋಗಿಗಳನ್ನು ತೆಗೆಯುವ ಪ್ಲ್ಯಾನ್ ಮಾಡಿಕೊಂಡಿದೆ. ಅದಕ್ಕೆ ಏನೆಲ್ಲಾ ಬೇಕೋ ಆ ಎಲ್ಲಾ ತಯಾರಿ ನಡೆಸಿದೆ. ಹೀಗಾಗಿ ತಾತ್ಕಾಲಿಕವಾಗಿ ಎಲ್ಲಾ ಕಚೇರಿಗಳನ್ನು ಮುಚ್ಚಲಿದೆ ಎಂದು ವರದಿಯಾಗಿದೆ.
ಮೆಕ್ ಡೊನಾಲ್ಡ್ ಕೆಲಸಗಾರರನ್ನು ವಜಾಗೊಳಿಸಲು ನಿರ್ಧಾರ ಮಾಡಿದೆ ಎಂದು ವರದಿ ಹೇಳುತ್ತಿದೆ. ಯಾಕಂದ್ರೆ ಮೆಕ್ ಡೊನಾಲ್ಡ್ ಸೋಮವಾರದಿಂದ ಬುಧವಾರದವರೆಗೆ ತನ್ನ ನೌಕರರಿಗೆ ಮನೆಯಿಂದಾನೇ ಕೆಲಸ ಮಾಡಲು ಸೂಚಿಸಿದೆ. ಈ ವಾರ ನಿಗದಿಪಡಿಸಲಾಗಿದ್ದ ವೈಯಕ್ತಿಕ ಸಭೆಗಳನ್ನು ರದ್ದುಪಡಿಸಲು ಸೂಚಿಸಿದೆ.
ವರ್ಕ್ ಫ್ರಮ್ ಹೋಂ ಮುಗಿಯುವುದರೊಳಗೆ ನೌಕರರನ್ನು ವಜಾಗೊಳಿಸುವ ಬಗ್ಗೆ ಸುದ್ದಿ ಹೊರ ಬೀಳಲಿದೆ. ಇನ್ನು ಎಷ್ಟು ಜನರನ್ನು ಕೆಲಸದಿಂದ ತೆಗೆಯುತ್ತೇವೆಂದು ಸ್ಪಷ್ಟನೆ ನೀಡಿಲ್ಲ. ಈಗಾಗಲೇ ಸಾಕಷ್ಟು ಬೃಹತ್ ಕಂಪನಿಗಳಿಂದಾನೇ ನೌಕರರನ್ನು ವಜಾಗೊಳಿಸಲಾಗಿದೆ.
The post ಉದ್ಯೋಗಿಗಳನ್ನು ತೆಗೆಯಲು ಕಚೇರಿಗಳನ್ನು ಮುಚ್ಚಲಿದೆಯಾ ಮೆಕ್ ಡೊನಾಲ್ಡ್..? first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/koYimhO
via IFTTT