ಮಿರಾ ಮುರಾಟಿಯೋ ಮೀರಾ ಮೂರ್ತಿಯೋ? ಓಪನ್ ಎಐ ನೂತನ ಸಿಇಒ ಭಾರತೀಯ ಮೂಲದವರೆಂದು ಪುಕಾರು; ಇದು ನಿಜವಾ?

Origin country of Mira Murati: ಮೀರಾ ಮುರಾತಿ ಅವರು ಆಲ್ಬೇನಿಯಾ ಮೂಲದವರು ಎಂಬುದು ಬಹಳ ಸ್ಪಷ್ಟವಾಗಿರುವ ಸಂಗತಿ. ಆದರೆ, ಅವರು ಅರ್ಧ ಭಾರತೀಯೆ. ಅವರ ಪೋಷಕರಲ್ಲಿ ಒಬ್ಬರು ಭಾರತೀಯ ಮೂಲದವರು ಎಂದೂ ಸೋಷಿಯಲ್ ಮೀಡಿಯಾದಲ್ಲಿ ವಾದಿಸುವವರಿದ್ದಾರೆ. ಓಪನ್ ಎಐನಲ್ಲಿ ಸಿಟಿಒ ಆಗಿದ್ದ ಮೀರಾ ಮುರಾತಿ ಅವರ ಹೆಸರಿನಲ್ಲಿರುವ ಮೀರಾ ಪದ ಭಾರತೀಯದ್ದೆಂಬ ಭಾವನೆ ತರುತ್ತದೆ. ಇನ್ನು, ಮುರಾತಿ ಎಂಬುದನ್ನು ಕೆಲವರು ಮೂರ್ತಿ ಎಂದು ಭಾವಿಸಿರುವುದುಂಟು.

ಬೆಂಗಳೂರು: ಮೊನ್ನೆ ನವೆಂಬರ್ 19ರಂದು ಅಮೆರಿಕದ ಸ್ಯಾನ್​ಫ್ರಿನ್ಸಿಸ್ಕೋ ಮೂಲದ ಓಪನ್ ಎಐ ಸಂಸ್ಥೆ (OpenAI) ತನ್ನ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಅವರನ್ನು ವಜಾಗೊಳಿಸಿ ಎಲ್ಲರಿಗೂ ಶಾಕ್ ಕೊಟ್ಟಿತ್ತು. ಸಂಸ್ಥೆಯನ್ನು ಮುನ್ನಡೆಸಲು ಅವರು ಸಮರ್ಪಕರಲ್ಲ ಎಂಬುದು ಮೇಲ್ನೋಟಕ್ಕೆ ಕೊಟ್ಟಿರುವ ಕಾರಣವಾಗಿದೆ. ಅವರ ಸ್ಥಾನಕ್ಕೆ ಮೀರಾ ಮುರಾತಿ (Mira Murati) ಅವರನ್ನು ನಿಯೋಜಿಸಲಾಗಿದೆ. ಮೀರಾ ಅವರು ಹಂಗಾಮಿ ಸಿಇಒ ಆಗಿ ತಾತ್ಕಾಲಿಕ ಅವಧಿಯವರೆಗೆ ಓಪನ್ ಎಐ ಅನ್ನು ಮುನ್ನಡೆಸಲಿದ್ದಾರೆ. ಇದೇ ವೇಳೆ, ಮೀರಾ ಮುರಾತಿ ಅವರು ಭಾರತೀಯ ಮೂಲದವರು ಎನ್ನುವಂತಹ ಸುದ್ದಿ ಕೆಲವೆಡೆ ದಟ್ಟವಾಗಿ ಹಬ್ಬಿದೆ. ಮೀರಾ ನಿಜಕ್ಕೂ ಭಾರತೀಯ ಮೂಲದವರಾ?

ಮೀರಾ ಮುರಾತಿ ಅವರು ಆಲ್ಬೇನಿಯಾ ಮೂಲದವರು ಎಂಬುದು ಬಹಳ ಸ್ಪಷ್ಟವಾಗಿರುವ ಸಂಗತಿ. ಆದರೆ, ಅವರು ಅರ್ಧ ಭಾರತೀಯೆ. ಅವರ ಪೋಷಕರಲ್ಲಿ ಒಬ್ಬರು ಭಾರತೀಯ ಮೂಲದವರು (Indian origin) ಎಂದೂ ಸೋಷಿಯಲ್ ಮೀಡಿಯಾದಲ್ಲಿ ವಾದಿಸುವವರಿದ್ದಾರೆ. ಓಪನ್ ಎಐನಲ್ಲಿ ಸಿಟಿಒ ಆಗಿದ್ದ ಮೀರಾ ಮುರಾತಿ ಅವರ ಹೆಸರಿನಲ್ಲಿರುವ ಮೀರಾ ಪದ ಭಾರತೀಯದ್ದೆಂಬ ಭಾವನೆ ತರುತ್ತದೆ. ಇನ್ನು, ಮುರಾತಿ ಎಂಬುದನ್ನು ಕೆಲವರು ಮೂರ್ತಿ ಎಂದು ಭಾವಿಸಿರುವುದುಂಟು. ಮೀರಾ ಮೂರ್ತಿ ಎಂದೇ ಕೆಲವರು ಸಂಬೋಧಿಸಿದ್ದಾರೆ. ಇದು ತಪ್ಪು. ಇದು ಕಾಲ್ಪನಿಕ ಭಾವನೆ ಎಂಬುದು ಮೇಲ್ನೋಟಕ್ಕೆ ತೋರುತ್ತದೆ.

ಮುರಾಟಿ ಎಂಬುದು ಆಲ್ಬೇನಿಯಾದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ನಾಮಪದ. ಮೀರಾ ಕೂಡ ಆಲ್ಬೇನಿಯಾದಲ್ಲಿ ಸಾಮಾನ್ಯವಾಗಿರುವ ಹೆಸರುಪದ. Mira ಪದವನ್ನು ಮೀರಾ ಎನ್ನಬೇಕಾ, ಮಿರಾ ಎನ್ನಬೇಕಾ ಗೊತ್ತಿಲ್ಲ. ಆದರೆ, 34 ವರ್ಷದ ಮೀರಾ ಮುರಾಟಿ ಅವರು ಭಾರತೀಯ ಮೂಲದವರು ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ. ಸ್ವತಃ ಅವರೇ ಯಾವತ್ತೂ ಕೂಡ ಭಾರತೀಯ ಮೂಲದ ಬಗ್ಗೆ ಹೇಳಿಲ್ಲ. ತಮ್ಮನ್ನು ಆಲ್ಬೇನಿಯಾ ಮೂಲದವರು ಎಂದೇ ಹೇಳಿಕೊಂಡಿರುವುದುಂಟು. ಅವರ ತಂದೆ ತಾಯಿ ಆಲ್ಬೇನಿಯಾ ಮೂಲದವರು. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 1988ರಲ್ಲಿ ಜನಿಸಿದ ಅವರು ಕೆನಡಾದಲ್ಲಿ ಶಾಲಾ ಶಿಕ್ಷಣ ಪಡೆದಿದ್ದಾರೆ. ನಂತರ ಅವರು ಅಮೆರಿಕದ ನ್ಯೂ ಹ್ಯಾಂಪ್​ಶೈರ್ ರಾಜ್ಯದ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಇದೀಗ ಸ್ಯಾನ್ ಫ್ರಾನ್ಸಿಸ್ಕೋಗೆ ವಾಪಸ್ ಬಂದು ನೆಲಸಿದ್ದಾರೆ. ಓಪನ್ ಎಐನ ಪ್ರಧಾನ ಕಚೇರಿ ಕೂಡ ಸ್ಯಾನ್ ಫ್ರಾನ್ಸಿಸ್ಕೋದಲ್ಲೇ ಇರುವುದು.

Source: https://tv9kannada.com/business/is-the-interim-ceo-of-openai-mira-murati-an-indian-origin-fact-check-here-snvs-720348.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *