MI vs PBKS: ಅಶುತೋಷ್‌ ಅರ್ಧಶತಕ ವ್ಯರ್ಥ! ಮುಂಬೈ ಇಂಡಿಯನ್ಸ್‌‌ ಎದುರು ಮಂಡಿಯೂರಿದ ‘ಕಿಂಗ್ಸ್‌‌’!

Cricket: 4 ಓವರ್‌‌ಗಳಾಗುಷ್ಟರಲ್ಲೇ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೊನೆಗೂ ಮುಂಬೈ ಇಂಡಿಯನ್ಸ್‌ ಎದುರು ಕಿಂಗ್ಸ್‌ ಮಂಡಿಯೂರುವಂತಾಯ್ತು. ಮುಂಬೈ ಮ್ಯಾಜಿಕ್‌ಗೆ ಪಂಜಾಬ್‌ ಕಥೆ ಫಿನಿಶ್‌ ಆಯ್ತು ಅಂದ್ರೆ ತಪ್ಪಾಗಲ್ಲ.

ಟಾಸ್ ಸೋತು ಬ್ಯಾಟಿಂಗ್‌ಗೆ ಆಗಮಿಸಿದ ಮುಂಬೈ ಇಂಡಿಯನ್ಸ್‌‌ಗೆ (Mumbai Indians) ಆರಂಭಿಕ ಆಘಾತ ಎದುರಾಯ್ತು. ಕೊನೆಗೆ ಮುಂಬೈ ಇಂಡಿಯನ್ಸ್‌ ತಂಡ 7 ವಿಕೆಟ್‌ ಕಳೆದುಕೊಂಡು 192 ರನ್‌ ಕಲೆ ಹಾಕಿತು. ಈ ಗುರಿ ಬೆನ್ನತ್ತಿದ್ದ ಪಂಜಾಬ್‌ ಕಿಂಗ್ಸ್‌ (Punjab Kings) ಬ್ಯಾಟರ್ಸ್‌ ಪೆವಿಲಿಯನ್‌ ಪರೇಡ್‌ ನಡೆಸಿದ್ರು ಅಂದ್ರೆ ತಪ್ಪಾಗಲ್ಲ. 4 ಓವರ್‌‌ಗಳಾಗುಷ್ಟರಲ್ಲೇ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೊನೆಗೂ ಮುಂಬೈ ಇಂಡಿಯನ್ಸ್‌ ಎದುರು ಕಿಂಗ್ಸ್‌ ಮಂಡಿಯೂರುವಂತಾಯ್ತು. ಮುಂಬೈ ಮ್ಯಾಜಿಕ್‌ಗೆ ಪಂಜಾಬ್‌ ಕಥೆ ಫಿನಿಶ್‌ ಆಯ್ತು ಅಂದ್ರೆ ತಪ್ಪಾಗಲ್ಲ. ಪಂಜಾಬ್‌ ಕಿಂಗ್ಸ್‌ 19.1 ಓವರ್‌‌ಗಳಲ್ಲಿ  10 ವಿಕೆಟ್‌ ಕಳೆದುಕೊಂಡು 183 ರನ್‌ ಅಷ್ಟೇ ಗಳಿಸಲು ಸಾಧ್ಯವಾಯ್ತು. ಅಶುತೋಷ್‌ ಶರ್ಮಾ ಅರ್ಧಶತಕ ವ್ಯರ್ಥವಾಯಿತು.

ಅಶುತೋಷ್‌ ಹಾಗೂ ಶಶಾಂಕ್‌ ಆಸರೆ!

ಒಂದು ಕಡೆ ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಂಜಾಬ್‌ ಕಿಂಗ್ಸ್‌‌ ತಂಡಕ್ಕೆ ಮತ್ತೆ ಆಸರೆಯಾಗಿದ್ದು ಅಶುತೋಷ್‌ ಹಾಗೂ ಶಶಾಂಕ್‌ ಜೋಡಿ. ಪಂಜಾಬ್‌ ಗೆಲ್ಲೋದು ಕಷ್ಟ ಅಂದುಕೊಂಡಿರುವಾಗಲೇ ನೋಡಿ ಅಬ್ಬರದ ಬ್ಯಾಟಿಂಗ್‌ ಮಾಡಿ ಗೆಲುವಿನ ರೂವಾರಿಯಾದ್ರು.  ಶಶಾಂಕ್‌ 25 ಬಾಲ್‌‌ಗಳಲ್ಲಿ 41 ರನ್‌ಗಳಿಸಿ ಔಟಾದ್ರು.

ಅಶುತೋಷ್‌ ಭರ್ಜರಿ ಅರ್ಧಶತಕ ಬಾರಿಸಿದ್ರು. ಗ್ರೌಂಡ್‌‌ನ ಮೂಲೆ ಮೂಲಗೆ ಬಾಲ್‌‌ ಕಳುಹಿಸಿ ಬೌಲರ್ಸ್‌ಗೆ ಕಾಟ ಕೊಟ್ರು. ಇನ್ನೇನು ಪಂದ್ಯ ಗೆಲ್ಲಿಸುತ್ತಾರೆ ಅಶುತೋಷ್‌ ಅನ್ನುವಾಗಲೇ ಕ್ಯಾಚ್‌ ನೀಡಿ ಔಟಾದ್ರು. ಅಶುತೋಷ್‌ 61 ರನ್‌ಗಳಿಸಿ ಔಟಾದ್ರು. ಬ್ರಾರ್‌ ಕೂಡ 21 ರನ್‌ಗಳಿಸಿ ಔಟಾದ್ರು.

ಪಂಜಾಬ್‌ ಬ್ಯಾಟರ್ಸ್‌ ಪೆವಿಲಿಯನ್‌ ಪರೇಡ್‌!

ಮೊದಲ ಓವರ್​ನಲ್ಲಿ ಪಂಜಾಬ್ ಮೊದಲ ವಿಕೆಟ್ ಕಳೆದುಕೊಂಡಿದೆ. ಗೆರಾಲ್ಡ್ ಕೊಯೆಟ್ಜಿ ಎಸೆದ ಮೊದಲ ಓವರ್‌ನಲ್ಲಿ ಪ್ರಭಾಸಿಮ್ರಾನ್ ಸಿಂಗ್ ಖಾತೆ ತೆರೆಯದೆ ಔಟಾದ್ರು. ಇನಿಂಗ್ಸ್‌ನ ಎರಡನೇ ಓವರ್‌ ಬೌಲ್ ಮಾಡಲು ಬಂದ ಜಸ್ಪ್ರೀತ್ ಬುಮ್ರಾ ಈ ಓವರ್​ನಲ್ಲಿ 2 ವಿಕೆಟ್ ಉರುಳಿಸಿದರು. ಮೊದಲು ರಿಲೆ ರೂಸೋ ಅವರನ್ನು ಬೌಲ್ಡ್ ಮಾಡಿದ ಬುಮ್ರಾ, ಓವರ್​ನ ಕೊನೆಯ ಎಸೆತದಲ್ಲಿ ನಾಯಕ ಸ್ಯಾಮ್ ಕರನ್​ರನ್ನು ಪೆವಿಲಿಯನ್​ಗಟ್ಟಿದರು.

ಜೆರಾಲ್ಡ್ ಕೊಯೆಟ್ಜಿ, ಲಿಯಾಮ್ ಲಿವಿಂಗ್ಸ್ಟೋನ್ ಅವರನ್ನು ಕೂಡ ಔಟ್ ಮಾಡಿದರು. ಲಿಯಾಮ್‌ ಲಿವಿಂಗ್ಸ್ಟೋನ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು ಪಂಜಾಬ್‌ ಫ್ಯಾನ್ಸ್‌ ಆದರೆ ಇಂದು ಅವರು ಕೂಡ ನಿರಾಸೆ ಮೂಡಿಸಿದ್ರು.

ಮುಂಬೈ ಇಂಡಿಯನ್ಸ್‌‌ಗೆ ಆರಂಭಿಕ ಆಘಾತ!

ಮುಂಬೈ ಆರಂಭಿಕ ಇಶಾನ್ ಕಿಶನ್ ಮೂರನೇ ಓವರ್ ಮೊದಲ ಎಸೆತದಲ್ಲಿ ಕ್ಯಾಚ್‌‌ ನೀಡಿ ಔಟಾದರು. ಕೇವಲ 8 ರನ್‌‌ಗೆ ಇಶಾನ್‌ ಕಿಶನ್‌ ತಮ್ಮ ಇನ್ನಿಂಗ್ಸ್‌ ಮುಗಿಸಿದ್ರು.ಪವರ್‌ಪ್ಲೇ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ ತಂಡ 1 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿತ್ತು.
250ನೇ ಐಪಿಎಲ್ ಪಂದ್ಯ ಆಡುತ್ತಿದ್ದ ರೋಹಿತ್ 25 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 36 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು.

ಭರ್ಜರಿ ಅರ್ಧ ಶತಕ ಬಾರಿಸಿದ ಸೂರ್ಯ!

ಇನ್ನೂ ಸೂರ್ಯ ಕುಮಾರ್ ಯಾದವ್‌ ಕಳೆದ ಪಂದ್ಯದಲ್ಲಿ ಡಕೌಟ್‌ ಆಗಿದ್ರು. ಈ ಪಂದ್ಯದಲ್ಲಿ 50 ರನ್‌ ಬಾರಿಸಿದ್ದಾರೆ. ಮತ್ತೆ ಫಾರ್ಮ್‌ಗೆ ಮಿಸ್ಟರ್‌ 360 ಬಂದಿರೋದು ಟೀಂ ಇಂಡಿಯಾ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. 78 ರನ್‌ ಗಳಿಸಿ ಸೂರ್ಯ ಕುಮಾರ್‌ ಯಾದವ್‌ ಔಟಾದ್ರು. ಇನ್ನೂ ಮತ್ತೊಮ್ಮೆ ನಾಯಕ ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್‌‌ನಲ್ಲಿ ಫೆಲ್ಯೂರ್‌ ಆದ್ರು. ಕೇವಲ 10 ರನ್‌‌ಗಳಿಸಿ ಔಟಾದ್ರು. ಇನ್ನೂ ರೋಹಿತ್‌ ಶರ್ಮಾ ಇಂದು 250ನೇ ಪಂದ್ಯವಾಡಿ ದಾಖಲೆ ಬರೆದ್ರು.

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ, ಇಶಾನ್ ಕಿಶನ್ (W), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (C), ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಮೊಹಮ್ಮದ್ ನಬಿ, ಜೆರಾಲ್ಡ್ ಕೋಟ್ಜಿ, ಶ್ರೇಯಸ್ ಗೋಪಾಲ್, ಜಸ್ಪ್ರೀತ್ ಬುಮ್ರಾ.

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ರಿಲೀ ರೊಸೊವ್, ಪ್ರಭ್‌ಸಿಮ್ರಾನ್ ಸಿಂಗ್, ಸ್ಯಾಮ್ ಕುರಾನ್(C), ಜಿತೇಶ್ ಶರ್ಮಾ(W), ಲಿಯಾಮ್ ಲಿವಿಂಗ್‌ಸ್ಟೋನ್, ಶಶಾಂಕ್ ಸಿಂಗ್, ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ಅರ್ಷ್‌ದೀಪ್ ಸಿಂಗ್.

Source: https://kannada.news18.com/news/sports/ipl-2024-mi-vs-pbks-live-updates-mumbai-indians-won-by-9-runs-vdd-1660929.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *