
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ,ಏ.27 : ನಗರದ ಗಮಕ ಕಲಾಭಿಮಾನಿಗಳ ಸಂಘವು ನಡೆಸಿಕೊಂಡು ಬರುತ್ತಿರುವ ಮಾಸಿಕ ಗಮಕ ವಾಚನ ವ್ಯಾಖ್ಯಾನ ಸಂಭ್ರಮದ 21ನೇ ಕಾರ್ಯಕ್ರಮವು ತಾ.27-04-2025ರ ಭಾನುವಾರ ಸಂಜೆ 6 ಗಂಟೆಯಿಂದ ನಗರದ ಜೆ.ಸಿ.ಆರ್.ಗಣಪತಿ ದೇವಾಲಯದ
ಪ್ರಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಅಂದು ವಾಚನವನ್ನು ಎಂಜಿನಿಯರಿಂಗ್ ವಿದ್ಯಾರ್ಥಿನಿ ಕು.ಸೃಷ್ಟಿ ಶಾಸ್ತ್ರಿ, ನಡೆಸಿಕೊಡುವರು. ವ್ಯಾಖ್ಯಾನವನ್ನು: ನಿವೃತ್ತ
ಅಧ್ಯಾಪಕರಾದ ಶ್ರೀಮತಿ ಕೆ.ಆರ್.ರಮಾದೇವಿ ನಡೆಸಿಕೊಡಲಿದ್ದು, ಜೈಮಿನಿ ಭಾರತದ ’ಸೀತಾ ಪರಿತ್ಯಾಗ ಮತ್ತು ಲವ ಕುಶ
ಜನನ’ ಅಂದಿನ ಕಥಾಭಾಗವಾಗಿದೆ.ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯರಾದ ಶ್ರೀಮತಿ ರೋಹಿಣಿ ನವೀನ್
ಭಾಗವಹಿಸಲಿದ್ದಾರೆ.ಎಂದು ಗಮಕ ಕಲಾಭಿಮಾನಿಗಳ ಸಂಘ ಹಾಗೂ ಜೆ.ಸಿ.ಆರ್.ಗಣಪತಿ ದೇವಾಲಯ ಸೇವಾ ಸಮಿತಿ
ತಿಳಿಸಿದೆ.
Views: 0