Remedy For Mosquito Bites: ಮಳೆಗಾಲ ಮಾತ್ರಲ್ಲದೇ ಎಲ್ಲಾ ಕಾಲದಲ್ಲೂ ಕಾಡುವ ಸಮಸ್ಯೆ ಇದ್ದರೇ ಅದು ಸೊಳ್ಳೆಕಾಟವೇ ಆಗಿರುತ್ತದೆ. ಅನೇಕರಿಗೆ ಸೊಳ್ಳೆ ಕಚ್ಚಿದರೇ ಅಲರ್ಜಿ ರೀತಿ ಸಂಭವಿಸುತ್ತದೆ. ಹೀಗಾಗಿ ಸುಲಭವಾಗಿ ನೈಸರ್ಗಿಕ ಮನೆ ಮದ್ದುಗಳ ಮೂಲಕ ರಕ್ತ ಹೀರುವ ಸೊಳ್ಳೆಯಿಂದ ಮುಕ್ತಿ ಪಡೆಯಲು ಈ ಸುಲಭ ವಿಧಾನ ಅನುಸರಿಸಿ..
Health Tipes: ಮಳೆಗಾಲ ಮಾತ್ರಲ್ಲದೇ ಎಲ್ಲಾ ಕಾಲದಲ್ಲೂ ಕಾಡುವ ಸಮಸ್ಯೆ ಇದ್ದರೇ ಅದು ಸೊಳ್ಳೆಕಾಟವೇ ಆಗಿರುತ್ತದೆ. ಅನೇಕರಿಗೆ ಸೊಳ್ಳೆ ಕಚ್ಚಿದರೇ ಅಲರ್ಜಿ ರೀತಿ ಸಂಭವಿಸುತ್ತದೆ. ಅಲರ್ಜಿ ಮಾತ್ರವಲ್ಲದೇ ಬೇರೆ ಬೇರೆ ರೋಗಳಿಗೂ ಕಾರಣವಾಗುತ್ತದೆ. ಸೊಳ್ಳೆ ಕಾಟದಿಂದ ಮುಕ್ತಿ ಪಡೆಯುವ ಸಲುವಾಗಿ ಹಲವರು ಅನೇಕ ರೀತಿಯ ಔಷಧಿಗಳನ್ನು ಸಿಂಪಡಿಸುತ್ತಿರುತ್ತಾರೆ. ಹೀಗಾಗಿ ಸುಲಭವಾಗಿ ನೈಸರ್ಗಿಕ ಮನೆ ಮದ್ದುಗಳ ಮೂಲಕ ರಕ್ತ ಹೀರುವ ಸೊಳ್ಳೆಯಿಂದ ಮುಕ್ತಿ ಪಡೆಯಲು ಈ ಸುಲಭ ವಿಧಾನ ಅನುಸರಿಸಿ..
ಕಾಳು ಮೆಣಸಿನ ಗರಿ: ಮಲೆನಾಡು ಭಾಗಗಳಲ್ಲಿ ಹೇರಳವಾಗಿ ಬೆಳೆಯುವ ಕಾಳು ಮೆಣಸಿನ ಗರಿಯ ಹೊಗೆಯನ್ನು ಮನೆಯ ಸುತ್ತಾ ಮುತ್ತಾ ಹಾಕುವುದರಿಂದ ಸೊಳ್ಳೆ ಕಾಟಕ್ಕೆ ಮುಕ್ತಿ ಪಡೆಯಬಹುದು.
ತುಳಸಿ ಬಳಕೆ: ಮನೆಯ ಸುತ್ತಾ ತುಳಸಿ ಗಿಡವನ್ನು ಹೇರಳವಾಗಿ ಬೆಳೆಯುವುದರ ಜೊತೆಗೆ ಅದರ ನೀರನ್ನು ಮನೆಯ ಒಳಗೂ ಸಿಂಪಡಿಸುವುದರಿಂದ ಕೀಟಾಣು ಸಮಸ್ಯೆಗೆ ಪರಿಹಾರ ಪಡೆಯಬಹುದು.
ಆಗರ ಬತ್ತಿಅಥವಾ ಊದುಗಡ್ಡಿ ಬಳಕೆ: ದೇವರಿಗೆ ಬಳಸುವ ಆಗರ ಬತ್ತಿ , ಊದುಗಡ್ಡಿ ಪೂಜೆಗಷ್ಟೆ ಬಳಸದೇ ಸೊಳ್ಳೆ ಕಾಟಕ್ಕೂ ಬಳಸಬಹುದು. ಪ್ರತಿನಿತ್ಯ ಹೀಗೆ ಮಾಡುವುದರಿಂದ ಅದರ ಸುಗಂಧಕ್ಕೆ ಯಾವ ಕೀಟಗಳ ಸಮಸ್ಯೆ ಇರುವುದಿಲ್ಲ ಜೊತೆಗೆ ಅದರ ಪರಿಮಳ ಮನಸ್ಸಿಗೂ ಉಲ್ಲಾಸ ನೀಡುತ್ತದೆ.
ನಿಂಬೆ ರಸ: ನಿಂಬೆ ರಸದಲ್ಲಿ ಲೆಮೊನ್‌ಗ್ರಾಸ್ ಸಾರಗಳು ಸಿಟ್ರಲ್ ಹೊಂದಿರುವುದರಿಂದ ಇದು ಸಹ ಸೊಳ್ಳೆ ಸಮಸ್ಯೆಗೆ ಪರಿಹಾರವಾಗಿದೆ.
Source : https://zeenews.india.com/kannada/health/a-natural-remedy-for-mosquito-bites-in-rainy-season-142958