ಡೆಂಗ್ಯೂ ರೋಗ ನಿರ್ಮೂಲನಕ್ಕೆ ಸೊಳ್ಳೆಗಳ ನಿಯಂತ್ರಣ ಅವಶ್ಯಕ _ಅರೋಗ್ಯ ನೀರಿಕ್ಷಣಾಧಿಕಾರಿ ಮಹೇಶ ಡಿ.

ಚಿತ್ರದುರ್ಗ/ ಬೆಳಗಟ್ಟ_ಆ.01.

ಸೊಳ್ಳೆಗಳ ನಿಯಂತ್ರಣ ಮಾಡದೆ,  ಸೊಳ್ಳೆಗಳ ಕಡಿತ ನಿರ್ಲಕ್ಷ್ಯ ಮಾಡಿದರೆ ಡೆಂಗ್ಯೂ ಹಾಗೂ ಇತರೇ ಕೀಟಜನ್ಯ ಸಾಂಕ್ರಾಮಿಕ ರೋಗಗಳು  ಖಚಿತವಾಗಿ ಬರುತ್ತವೆ, ಸೊಳ್ಳೆ ಕೀಟ  ಚಿಕ್ಕದಾದರೂ ಕಾಟ ದೊಡ್ಡದು  ಎಂಬಂತೆ ಸೊಳ್ಳೆಗಳ ಉತ್ಪತ್ತಿ,  ನಿಯಂತ್ರಣದಿಂದ ಮಾತ್ರ ಕೀಟಜನ್ಯ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಾದ್ಯ  ಎಂದು  ಅರೋಗ್ಯ ನೀರಿಕ್ಷಣಾಧಿಕಾರಿ  ಮಹೇಶ ಡಿ    ಅವರು 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರಾಷ್ಟೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗ, ಬೆಳಗಟ್ಟ ಅರೋಗ್ಯ ಕೇಂದ್ರ ಮತ್ತು ಶ್ರೀ ಮಾರುತಿ ಗ್ರಾಮಂತರ ಪ್ರೌಡಶಾಲೆಯ ಇವರ ಸಹಯೋಗದೊಂದಿಗೆ ಶಾಲೆಯಲ್ಲಿ ” ಡೆಂಗ್ಯೂ ವಿರೋಧಿ ಮಾಸಚರಣೆ ” ಕಾರ್ಯಕ್ರಮ ಹಮ್ಮಿಕೊಂಡು ಡೆಂಗಿ ಸೊಳ್ಳೆ ಸಂತಾನೋತ್ಪತ್ತಿ ತಡೆಗೆ ಮತ್ತು ಡೆಂಗಿ ಹಾಗೂ ಇನ್ನಿತರ ಕೀಟಜನ್ಯ ಸಾಂಕ್ರಾಮಿಕ ರೋಗಗಳ ನಿಯಂತ್ರಣದ, ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ ತಿಳಿಸಿದರು. ಡೆಂಗಿ ಮುಂಗಾರು ಮಳೆಯ ಸಂದರ್ಭದಲ್ಲಿ ಹೆಚ್ಚುವುದು ಸಾಮಾನ್ಯ, ಅದ್ದರಿಂದ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ, ಟೈರು, ಚಿಪ್ಪು, ಖಾಲಿ ಬಾಟಲಿಗಳಲ್ಲಿ, ಪ್ಲಾಸ್ಟಿಕ್, ಘನ ತಾಜ್ಯಗಳಲ್ಲಿ ನೀರು ನಿಲ್ಲದಂತೆ, ಪರಿಸರ ಸ್ವಚತೆಯಿಂದ, ಮನೆಯಲ್ಲಿ ಇರುವ ನೀರಿನ ಸಂಗ್ರಹ ಮಾಡುವ ಪರಿಕರಗಳನ್ನು ಸರಿಯಾಗಿ ಮುಚ್ಚುವುದರಿಂದ, ಸೊಳ್ಳೆ ಪರದೆಗಳನ್ನು ಬಳಸುವುದರಿಂದ, ಸೊಳ್ಳೆಗಳ ಉತ್ಪತ್ತಿ ತಾಣಗಳ ನಾಶ ಮಾಡುವುದರಿಂದ, ಸೊಳ್ಳೆ ಕಡಿತವನ್ನು ತಪ್ಪಿಸಲು ಪೂರ್ಣ ಪ್ರಮಾಣದ ತೋಳುಗಳನ್ನು ಹೊಂದಿರುವ ಉಡುಪುಗಳನ್ನು ಧರಿಸುವುದರಿಂದ ಡೆಂಗ್ಯೂದತಂಹ ಕೀಟಜನ್ಯ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮಾಡಬಹುದು.
ಡೆಂಗ್ಯೂ ತಪ್ಪಿಸಲು ನೀವು ಎಷ್ಟೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ, ಕೆಲವೊಮ್ಮೆ ಅದು ದಾಳಿ ಮಾಡುತ್ತದೆ.
ಡೆಂಗ್ಯೂ ಜ್ವರದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವುದರಿಂದ ಸ್ಥಿತಿ ಹದಗೆಡುವುದನ್ನು ತಡೆಯಬಹುದು..
ಡೆಂಗ್ಯೂ ಸಮಯದಲ್ಲಿ ಕೆಲವರು ಪಪ್ಪಾಯಿ ಎಲೆಯ ರಸವನ್ನು ಸೇವಿಸುತ್ತಾರೆ. ಇದು ತುಂಬಾ ಜನಪ್ರಿಯವಾಗಿದೆ. ಆದರೆ ಇದು ಪರ್ಯಾಯವಲ್ಲ. ಅಲ್ಲದೆ, ಮಸಾಲೆಯುಕ್ತ ಮತ್ತು ಕರಿದ ಆಹಾರಗಳನ್ನು ತಪ್ಪಿಸಬೇಕು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸಿ. ಇವೆಲ್ಲವೂ ಡೆಂಗ್ಯೂನಿಂದ ಬೇಗನೆ ಚೇತರಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

   ಕೀಟಜನ್ಯ ಸಾಂಕ್ರಾಮಿಕ ರೋಗಗಳು ಹೆಚ್ಚಾಗದಂತೆ ಅರೋಗ್ಯ ಇಲಾಖೆವತಿಯಿಂದ ನಿರಂತರವಾಗಿ  ಲಾರ್ವ ಸಮೀಕ್ಷೆ ನಡೆಸಿ ಅರೋಗ್ಯ ಸಿಬ್ಬಂದಿ ವರ್ಗದವರು ಮತ್ತು ಅಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಅರಿವು ಮೂಡಿಸಿವುದರ  ಜತೆಗೆ ಶಾಲೆ ಕಾಲೇಜುಗಳಲ್ಲಿ, ಅರೋಗ್ಯ  ಕಾರ್ಯಕ್ರಮಗಳನ್ನು  ಹಮ್ಮಿಕೊಂಡು   ಡೆಂಗಿಯಂತಹ ಮಾರಕ ಸಾಂಕ್ರಾಮಿಕ ರೋಗಗಳ ಬಗ್ಗೆ  ಮಾಹಿತಿ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ  ಹಮ್ಮಿಕೊಳ್ಳಲಾಗಿದೆ.   ಡೆಂಗ್ಯೂದತಂಹ  ರೋಗಗಳ  ನಿಯಂತ್ರಣಕ್ಕೆ ಜನ ಸಮುದಾಯದ  ಸಹಕಾರದ ಜೊತೆಗೆ ವಿದ್ಯಾರ್ಥಿಗಳ ಸಹಕಾರ   ಮುಖ್ಯ.

      ಅರೋಗ್ಯ ಕೇಂದ್ರ ವ್ಯಾಪಿಯ  ಗ್ರಾಮೀಣ ಪ್ರದೇಶಗಳಲ್ಲಿ ಅಶಾ ಕಾರ್ಯಕರ್ತೆಯರಿಂದ ತಿಂಗಳಲ್ಲಿ ಎರಡು ಬಾರಿ  ಲಾರ್ವ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ,  ಗ್ರಾಮ ಅರೋಗ್ಯ ನೈರ್ಮಲ್ಯ  ಮತ್ತು ಪೌಷ್ಟಿಕಾಹಾರ ಸಮಿತಿಯ ಸಭೆಗಳಲ್ಲಿ, ಶಾಲೆ ಕಾಲೇಜುಗಳಲ್ಲಿ,  ಜನರ ಜತೆಗೆ   ಗುಂಪು ಸಭೆಗಳು, ತಾಯಂದಿರ ಸಭೆಗಳನ್ನು ನಡೆಸಿ ಕರಪತ್ರಗಳನ್ನು ವಿತರಿಸಿ, ಅರೋಗ್ಯ ಮಾಹಿತಿ ಶಿಕ್ಷಣ ನೀಡಿ  ಡೆಂಗ್ಯೂ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಮನೆಮನೆಗಳಲ್ಲಿ ನೀರಿನ ಸಂಗ್ರಹ ಪರಿಕಾರಗಳ, ಸ್ವಚ್ಛತೆಯ ಬಗ್ಗೆ ಒಣ ದಿನಗಳನ್ನು ಆಚರಿಸುವ ಬಗ್ಗೆ, ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ ಸೊಳ್ಳೆ ಬತ್ತಿಗಳನ್ನು ಉರಿಸುವ ಕುರಿತು,  ಮನೆಯ ಕಿಟಕಿಗಳಿಗೆ ಜಾಲರ ಅಳವಡಿಸುವ, ಸೊಳ್ಳೆ ಪರದೆ ಉಪಯೋಗಿಸುವ ಬಗ್ಗೆ, ಘನ ತ್ಯಾಜ್ಯ ವಸ್ತುಗಳನ್ನು ಸರಿಯಾದ ಕ್ರಮದಲ್ಲಿ ಮತ್ತು ಸೂಕ್ತ  ಸ್ಥಳಗಳಲ್ಲಿ  ವಿಲೇವಾರಿ ಮಾಡುವ ಬಗ್ಗೆ , ನೈಸರ್ಗಿಕ   ನೀರಿನ ತಾಣಗಳಿಗೆ ಲಾರ್ವ ಹಾರಿ ಮೀನುಗಳಾದ ಗಪ್ಪಿ ಗಂಬೂಸ್ಯಿದಂತಹ ಮೀನುಗಳನ್ನು ಬಿಡುವ ಕುರಿತು ಮಾಹಿತಿ  ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.  ನಂತರ  ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳಿಗೆ ಲಾರ್ವಗಳು, ಲಾರ್ವಗಳನ್ನು  ನಿಯಂತ್ರಣ ಮಾಡುವ ಲಾರ್ವ ಭಕ್ಷಕ ಮೀನುಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು,  ಡೆಂಗ್ಯೂ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ ಎಂಬ ಘೋಷಣೆಯನ್ನು ಕೂಗಿದರು. ಕಾರ್ಯಕ್ರಮದಲ್ಲಿ  ಅರೋಗ್ಯ ನೀರಿಕ್ಷಣಾಧಿಕಾರಿಗಳಾದ ಮಹೇಶ ಡಿ, ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ ಟಿ. ನಿರ್ಮಲ,  ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಮಂಜುನಾಥ, ಶ್ರೀ ನಿವಾಸ ರೆಡ್ಡಿ,  ಶರಣಪ್ಪ, ಅಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು  ಇತರರು ಪಾಲ್ಗೊಂಡಿದ್ದರು.

Views: 22

Leave a Reply

Your email address will not be published. Required fields are marked *